ಹಳೇ ರೇಡಿಯೋ
ನಿರ್ದೇಶನ: ಸುದೀಪ್
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ: ಯೋಗರಾಜ್ ಭಟ್
ಸಾಹಿತ್ಯ: ಯೋಗರಾಜ್ ಭಟ್
ಗಾಯಕರು: ಸುದೀಪ್, ಶಮಿತಾ ಮಲ್ನಾಡ್
ನಟನೆ: ಸುದೀಪ್, ರಾಗಿಣಿ ದ್ವಿವೇದಿ
ಹಳೇ ರೇಡಿಯೋ ಹಾಕಿ ಹಾಡು ಕೇಳುವ
ಮಜಾ ಮಾಡುತ ಪ್ರೀತಿ ವಾರ್ತೆ ಕೇಳುವ
ಮಜಾ ಮಾಡುತ ಪ್ರೀತಿ ವಾರ್ತೆ ಕೇಳುವ
ವಾರ್ತೆಗಳು. ಈಗ ಹವಮಾನ ವರದಿ
ಕೆಂಪ ಕೆಂಪಿ ಇಬ್ಬರಿಗೂ ಪ್ರೀತಿ ಮಿತಿ ಮೀರಿ
ದೈಹಿಕ ಉಷ್ಣಾಂಶ ಅರವತ್ತು ಡಿಗ್ರಿ ದಾಟಿದೆ
ಅಲ್ಲಲ್ಲಿ ಹಗುರದಿಂದ ಸಾಧಾರಣವಾಗಿ
ಹೊಗೆ ಏಳುವ ಸಾಧ್ಯತೆಗಳಿವೆ
ದೈಹಿಕ ಉಷ್ಣಾಂಶ ಅರವತ್ತು ಡಿಗ್ರಿ ದಾಟಿದೆ
ಅಲ್ಲಲ್ಲಿ ಹಗುರದಿಂದ ಸಾಧಾರಣವಾಗಿ
ಹೊಗೆ ಏಳುವ ಸಾಧ್ಯತೆಗಳಿವೆ
ಹಳೇ ರೇಡಿಯೋ ಹಾಕಿ ಹಾಡು ಕೇಳುವ
ಮಜಾ ಮಾಡುತ ಪ್ರೀತಿ ವಾರ್ತೆ ಕೇಳುವ
ಪ್ರೀತಿ ವಾರ್ತೆ ಕೇಳುವ
ಶೇವಿಂಗ್ ಮಾಡಿದ ಸಿಂಹ, ಚಂದಿರನ ತಮ್ಮ
ಎಂದಿರನ್ ರೋಬಾಟು ನೀನೇನೆ, ಐಶ್ವರ್ಯ ನಾನೆ
ಕೆಂಪ ಕೆಂಪಿಯರು ತುಂಬ ಹೀಟಿನಲಿ
ಬೈಟು ಎಳನೀರು ಕುಡ್ಕೊಂಡು
ರೋಡು ಸೈಡಿನಲಿ ಬೋಂಡ ತಿನ್ನುತಲಿ
ತುಂಬ ಹತ್ತಿರಕೆ ನಿಂತ್ಕೊಂಡು
ಎಂದಿರನ್ ರೋಬಾಟು ನೀನೇನೆ, ಐಶ್ವರ್ಯ ನಾನೆ
ಕೆಂಪ ಕೆಂಪಿಯರು ತುಂಬ ಹೀಟಿನಲಿ
ಬೈಟು ಎಳನೀರು ಕುಡ್ಕೊಂಡು

ತುಂಬ ಹತ್ತಿರಕೆ ನಿಂತ್ಕೊಂಡು
ಹಳೇ ರೇಡಿಯೋ ಹಾಕಿ ಹಾಡು ಕೇಳುವ
ಮಜಾ ಮಾಡುತ ಪ್ರೀತಿ ವಾರ್ತೆ ಕೇಳುವ
ಇಲ್ಲಿಂದ ನಾನು ಬಂದೆ, ಅಲ್ಲಿಂದ ನೀನು ಬಾರೆ
ಸ್ಲೋಮೋಶನ್ ಅಲ್ಲಿ ಸೀರೆ
ಸ್ಲೋಮೋಶನ್ ಅಲ್ಲಿ ಸೀರೆ
ಹಾರೋ ಹಂಗೆ, ನೀ ಓಡಿ ಬಾರೆ
ಮೇಕಪ್ ಇನ್ನೂ ಮುಗಿದಿಲ್ಲ,
ಮೇಕಪ್ ಇನ್ನೂ ಮುಗಿದಿಲ್ಲ,
ಹೊರಗೆ ನಿಲ್ಲು ನನ್ನ ನಲ್ಲ
ಕಿಟಕಿ ಯಾಕೋ ಸರಿಯಿಲ್ಲ, ಆದ್ರೂ ಕದ್ದು ನೋಡಲ್ಲ
ಒಳ್ಳೆವ್ನು ನಾನು ಟೈಟಾಗಲೇನು
ನನ್ನ ಪಾರುನೇ ನೀನಮ್ಮ, ದೇವ್ದಾಸ ನಾನೆ
ಕಿಟಕಿ ಯಾಕೋ ಸರಿಯಿಲ್ಲ, ಆದ್ರೂ ಕದ್ದು ನೋಡಲ್ಲ
ಒಳ್ಳೆವ್ನು ನಾನು ಟೈಟಾಗಲೇನು
ನನ್ನ ಪಾರುನೇ ನೀನಮ್ಮ, ದೇವ್ದಾಸ ನಾನೆ
ಕೆಂಪ ಕೆಂಪಿಯರು ತುಂಬ ಕುಣಿಯುತಲಿ
ಕಾಲು ಮುರ್ಕೊಂಡು ಕೂತ್ಕೊಂಡು
ಒಂಟಿ ಕಾಲಿನಲಿ ಕೊಕ್ರೆ ಫೋಸಿನಲಿ
ಅಮೃತಾಂಜನವ ಹಚ್ಕೊಂಡು
ಹಳೆ ಹುಚ್ಚನ ಸ್ಟೈಲಿನಲ್ಲಿ, ಕಾಂಪೌಂಡು ಹಾರಿ ಬಾರೋ
ಫ್ಲಾಶ್ ಬ್ಯಾಕಿನಲ್ಲಿ ತಲೆಯ ಬೋಳುಸ್ಕೊಂಡು
ಲವ್ ಮಾಡಿ ನೋಡೋ
ಹುಚ್ಚ ನಂಬರ್ ಒನ್ನು ನಾ, ಮುಟ್ಟಿ ನೋಡು ಓ ಚಿನ್ನ
ಮುಗ್ಸು ಬೇಗ ಹಾಡನ್ನ, ನೀನೆ ಕಟ್ಟು ತಾಳೀನಾ
ಕ್ಲೋಸಪ್ಪಿನಲ್ಲಿ ಹಳೆ ಪುಂಗಿ ಊದು
ನೀ ಸನಾದಿ ಅಪ್ಪಣ್ಣ, ತುತ್ತೂರಿ ನಾನೆ
ಹಳೇ ರೇಡಿಯೋ ಹಾಕಿ ಹಾಡು ಕೇಳುವ
ಮಜಾ ಮಾಡುತ ಪ್ರೀತಿ ವಾರ್ತೆ ಕೇಳುವ
ಅಲ್ಲಿಗೆ ಕೆಂಪ ಕೆಂಪಿ ಪ್ರೇಮ ಕತೆಯ
ಕ್ಲೈಮ್ಯಾಕ್ಸ್‌ಗೆ ಲೇಟಾಯ್ತು
ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯ್ತು
ನಮಸ್ಕಾರ
ತರ ತರ ಹಿಡಿಸಿದೆ
ಸಾಹಿತ್ಯ: ಗೌಸ್ ಪೀರ್
ಗಾಯಕರು: ವಿಜಯ್ ಪ್ರಕಾಶ್, ಶ್ರೇಯಾ ಘೋಷಾಲ್
ತರ ತರ ಹಿಡಿಸಿದೆ ಮನಸಿಗೆ ನೀನು
ಹಗಲಲೆ ಮುಳುಗಿದೆ ಕನಸಲಿ ನಾನು
ಹಿಡಿದರು ಕುಣಿಯುತ ಹೃದಯವಿದು ಹಿಡಿತಕೆ ಸಿಗುತ್ತಿಲ್ಲ
ಕುಂತರು ನಿಂತರು ನಿನ್ನ ಭಜನೆ
ಬೇರೆ ಕೆಲಸಾನೇ ಇಲ್ಲ
ಹಗಲಲೆ ಮುಳುಗಿದೆ ಕನಸಲಿ ನಾನು
ಹಿಡಿದರು ಕುಣಿಯುತ ಹೃದಯವಿದು ಹಿಡಿತಕೆ ಸಿಗುತ್ತಿಲ್ಲ
ಕುಂತರು ನಿಂತರು ನಿನ್ನ ಭಜನೆ
ಬೇರೆ ಕೆಲಸಾನೇ ಇಲ್ಲ
ಈ ನಗು ಸಿಗಲು ಚಂದಮಾಮ ಇನ್ನೇಕೆ
ನಾ ಇದೆ ಮೊದಲು ಕಂಡೆ ಮಾತಾಡೋ ಜಿಂಕೆ
ಪ್ರೀತಿಯಾ ರುಚಿಯನು ಇಂದು ನಾ ತಿಳಿದೆನು
ಪ್ರೀತಿಯಾ ರುಚಿಯನು ಇಂದು ನಾ ತಿಳಿದೆನು
ಎಂಥ ಹೊಸತನ... ಕಳೆದೋದೆ ಈಗ ನಾ
ನನ್ನಲಿ ರಸಿಕನೂ ಜನುಮವು ಪಡೆದನು
ನಿನ್ನ ಕಾಲ್ಗುಣ.. ಇದಕೆಲ್ಲ ಕಾರಣ
ಹಿಡಿದರು ಕುಣಿಯುತ ಹೃದಯವಿದು ಹಿಡಿತಕೆ ಸಿಗುತಿಲ್ಲಾ
ಕುಂತರು ನಿಂತರು ನಿನ್ನ ಭಜನೆ
ಬೇರೆ ಕೆಲಸಾನೇ ಇಲ್ಲ
ಕುಂತರು ನಿಂತರು ನಿನ್ನ ಭಜನೆ
ಬೇರೆ ಕೆಲಸಾನೇ ಇಲ್ಲ
ದಿನ ರಾತ್ರಿಯೂ ನಿಲ್ಲದೆ ನಿಲ್ಲದೆ
ನಿನ್ನ ಜಾತ್ರೆಯು ಸಾಗಿದೆ ಸಾಗಿದೆ
ಇದಕೊಂದು ಪರಿಹಾರ ತಿಳಿಸು
ಮಾತಾಡೇ ಸುಮ್ಮನೆ ಸುಮ್ಮನೆ
ವಧು ಮಾಡಿಕೋ ನನ್ನನೇ ನನ್ನನ್ನೇ
ಮುದ್ದಾಗಿ ಸಂಸಾರ ನಡಿಸು
ಹಾಡು ಹಗಲೇ ಶುರುವಾಯಿತು ಸುಲಿಗೆ
ಹೌದು ನಲ್ಲ ಅತಿಯಾಯ್ತು ಸಲಿಗೆ
ಸ ಗ ಮ ಗ ಮ ಗ ಮ ಗ ಮ ಗ ಮ ಗ
ಮ ಗ ಮ ಪ ಮ ಗ ರೀ ಗ ರೀ
ನೀನಿರಲು ಸಿಗೋ ಮಜವೇ ಬೇರೆ
ಸ ಗ ಮ ಗ ಮ ಗ ಮ ಗ ಮ ಗ ಮ ಗ
ಮ ಗ ಮ ಪ ಮ ಗ ರೀ ಗ ರೀ
ನೀನಿರಲು ಸಿಗೋ ಮಜವೇ ಬೇರೆ
ತರ ತರ ಹಿಡಿಸಿದೆ ಮನಸಿಗೆ ನೀನು
ಹಗಲಲೆ ಮುಳುಗಿದೆ ಕನಸಲಿ ನಾನು
No comments:
Post a Comment