ಚಿತ್ತಾರ ಮೂಡೋ
ಚಲನಚಿತ್ರ: ಉಗ್ರಂ (2014)
ಸಾಹಿತ್ಯ: ಎಸ್. ಸರ್ವೇಶ್
ಸಂಗೀತ: ರವಿ ಬಸ್ರೂರು
ಗಾಯನ: ಪ್ರಿಯಾಂಕಾ ಭರಾಳಿ
ನಿರ್ದೇಶನ: ಪ್ರಶಾಂತ್ ನೀಲ್
ನಟನೆ: ಶ್ರೀಮುರಳಿ, ಹರಿಪ್ರಿಯಾ, ತಿಲಕ್
ಚಿತ್ತಾರ ಮೂಡೋ ವೇಳೆಲಿ ಕೆಂಗಾವೆರಿಯೇ
ರಂಗೆಲ್ಲಾ ಮಾಯಾವಾಗಿದೆ
ತುಂತುರು ನೀಡೋ ವೇಗವು ಕೊನೆಸನ್ನೆ
ಗಾಳಿಲೇ ಆವಿ ಆಗಿದೆ
ನೂರಾರು ನಿನ್ನ ಹೆಜ್ಜೆ ನನ್ನ ಧರೆಯ ಮೇಲೆ
ತಲ್ಲಣವಾ ಮಾಡಿ ಹಚ್ಚೆ ಹಾಕಿವೇ
ಬಾ ನೆನಪೆ ಮಾತಾಡು ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಬಾ ನೆನಪೆ ಮಾತಾಡು ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಆ ಆ ಆ ಆ..ಹಾ.ಆಹಾ..
ಆ ಆ ಹಾ ಆ..ಹಾ.ಆಹಾ..
ಕೂಡಿಟ್ಟ ಕನಸ ಕನ್ನಡಿಯ ಬಿಂಬಗಳ ಚೂರು
ಕೈಜಾರಿದೆ ನೀನು ಕಂಡೆಯಾ
ಮಧ್ಯದಲೇ ನಿಂತ ಮಾತೊಂದಾ ನಾ ನಡೆದಾ ಹಾದಿ
ನೀನಾದ್ರೂ ಒಮ್ಮೆ ಹೇಳೆಯಾ
ಬರಹದ ಪುಟವು ಹರಿದೋಗುತಿದೆ
ವಿರಹದ ಝರಿಯು ಹಾರು ಹೋಗುತಿದೆ
ಬಾ ನೆನಪೇ ಮಾತಾಡು ನನ್ನಲ್ಲಿ
ಬಾ ನೆನಪೇ ಮಾತಾಡು ನನ್ನಲ್ಲಿ
ನೀ ಆಗಲಿ ನೀರಾದೆ ಕಣ್ಣಲ್ಲಿ
ಚಿತ್ತಾರ ಮೂಡೋ ವೇಳೆಲಿ ಕೆಂಗಾವೆರಿಯೇ
ರಂಗೆಲ್ಲಾ ಮಾಯಾವಾಗಿದೆ
ತುಂತುರು ನೀಡೋ ವೇಗವು ಕೊನೆಸನ್ನೆ
ಗಾಳಿಲೇ ಆವಿ ಆಗಿದೆ
ನೂರಾರು ನಿನ್ನ ಹೆಜ್ಜೆ ನನ್ನ ಧರೆಮೇಲೆ
ತಲ್ಲಣವಾ ಮಾಡಿ ಹಚ್ಚೆ ಹಾಕಿವೇ
ಬಾ ನೆನಪೆ ಮಾತಾಡು ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಬಾ ನೆನಪೆ ಮಾತಾಡು ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಆ ಆ ಆ ಆ..ಹಾ.ಆಹಾ..
ಆ ಆ ಹಾ ಆ..ಹಾ.ಆಹಾ.
No comments:
Post a Comment