ಚಲನ ಚಿತ್ರ : ಸತ್ಯ ಹರಿಶ್ಚಂದ್ರ (1965)
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ
ಸಂಗೀತ : ಪೆಂಡ್ಯಾಲ ನಾಗೇಶ್ವರರಾವ್
ಗಾಯನ : ಸ್ವರ್ಣಲತಾ ಮತ್ತು ಜಗನ್ನಾಥ
ನಿರ್ದೇಶನ: ಹುಣಸೂರು ಕೃಷ್ಣಮೂರ್ತಿ
ನಟನೆ: ರಾಜ್ ಕುಮಾರ್, ಪಂಡರಿ ಭಾಯಿ, ಉದಯಕುಮಾರ್,
ನರಸಿಂಹರಾಜು, ಎಂ. ಪಿ. ಶಂಕರ್, ರಾಜಶ್ರೀ
ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ

ಬೇಸಾರ ಕಳೆಯದೆಂದು ಚಂದಮಾಮ
ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಆಸೆಯೂ ಕಳೆಯದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ
ನೀಲಿ ರಂಗು ಪಟ್ಟೆ ಸೀರೆ ಕಟ್ಟಿಕೊಂಡೆ
ಕೆಂಪು ಹಳದಿ ಹೂವ ರವಿಕೆ ತೊಟ್ಟುಕೊಂಡೆ
ನೀಲಿ ರಂಗು ಪಟ್ಟೆ ಸೀರೆ ಕಟ್ಟಿಕೊಂಡೆ
ಕೆಂಪು ಹಳದಿ ಹೂವ ರವಿಕೆ ತೊಟ್ಟುಕೊಂಡೆ
ಮತ್ತೆ ಮಲ್ಲೆ ಹಾಕಿ ಹಾಸಿ ನಿನಗಾಗೆ ಕಾದಿವ್ನಿ
ಬಾರಯ್ಯಾ ತೋಟದೊಳಗೆ
ಜಗನ್ನಾಥ : ಆಹ್ಚಹಾ..ಆಹ್ಚಹಾ.. ಬರ್ತೀನಿ ಬರ್ತೀನಿ
ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಆಸೆಯೂ ಕಳೆಯದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ
ಎಣ್ಣೆ ತುಂಬ ಒಳ್ಳೇ ಗಂಧ ತುಂಬಿ ನಾನು
ಸಣ್ಣ ಜಾಜಿ ಹೂವ ದಂಡ ಕಟ್ಟಿ ನಾನು
ಎಣ್ಣೆ ತುಂಬ ಒಳ್ಳೇ ಗಂಧ ತುಂಬಿ ನಾನು
ಸಣ್ಣ ಜಾಜಿ ಹೂವ ದಂಡ ಕಟ್ಟಿ ನಾನು
ಹುಣ್ಣಿಮೆ ರಾತ್ರೀಲೀ ಕಾದುಕೊಂಡು ಕುಂತೀವ್ನೀ
ಬಾರಯ್ಯಾ ಮೂಡಿಕೊಂಡು
ಜಗನ್ನಾಥ : ಆಹ್ಚಹಾ..ಆಹ್ಚಹಾ.. ಬರ್ತೀನಿ ಬರ್ತೀನಿ
ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಆಸೆಯೂ ಕಳೆಯದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ
ತಾಳೆ ಹೂವ ತುರುಬಿನಲ್ಲಿ ಮುಡಿದುಕೊಂಡೆ
ತಂಪು ಕಂಪು ತಾoಬೂಲ ಹಾಕಿಕೊಂಡೆ
ತಾಳೆ ಹೂವ ತುರುಬಿನಲ್ಲಿ ಮುಡಿದುಕೊಂಡೆ
ತಂಪು ಕಂಪು ತಾoಬೂಲ ಹಾಕಿಕೊಂಡೆ ಮಳೆಗಾಲ.....!
ಮಳೆಗಾಲ ಮಾಡಿ ಇಳಿದು ಬರಲಾರೆ
ಜಗನ್ನಾಥ : ಮತ್ತೇ..
ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಜಗನ್ನಾಥ : ಆಸೆಯೂ ಕಳೆಯದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ
********************************************************************************
ಕುಲದಲ್ಲಿ ಕೀಳ್ಯಾವುದೋ
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು
ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ ಹಹಹಹಾ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು
ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ.. ಹೇ..
ಧಯ್ಯಕುತ್ತ ಕಿರಧಕ ಧೈಯಕುತಾ
ಕಿರಧೈ ಧಯ್ಯಕುತ್ತ ಕಿರಧಕ
ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ ಓ ದಿದ್ದಿರಿ
ದಿದ್ದಿರಿ ದಿದ್ದಿರಿ ದಿದ್ದಿರಿ
ತಿಲಕ ಇಟ್ಟರೆ ಸ್ವರಗವು ಸಿಗದು
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ತಿಲಕ ಇಟ್ಟರೆ ಸ್ವರಗವು ಸಿಗದು
ವಿಭೂತಿ ಬಳಿದರೆ ಕೈಲಾಸ ಬರದು
ವಿಭೂತಿ ಬಳಿದರೆ ಕೈಲಾಸ ಬರದು
ಇಟ್ಟ ಗಂಧಾ ಬೂದಿ ನಾಮ
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಇಟ್ಟ ಗಂಧಾ ಬೂದಿ ನಾಮ
ಕತ್ತ ಕತ್ತಲು ನಿರನಾಮಾ..
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು
ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ.. ಹ್ಯ..
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಸೈವರಿಗೆಲ್ಲಾ ಸಿವದೊಡ್ಡೋನು
ಹೆ ಹೆ ಹೆಹೆ ಹೆ ಹೆ ಹೆಹೆ
ವೈಷ್ಣವರಿಗೆ ಹರಿ ಸರ್ವೋತ್ತಮನು
ಹೊ ಹೊ ಹೊಹೊ ಹೊ ಹೊ ಹೊಹೊ
ಸೈವರಿಗೆಲ್ಲಾ ಸಿವದೊಡ್ಡೋನು
ವೈಷ್ಣವರಿಗೆ ಹರಿ ಸರ್ವೋತ್ತಮನು
ಉತ್ತಮ ಮಧ್ಯಮ ಅಧಮರೆಲ್ಲರು
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಉತ್ತಮ ಮಧ್ಯಮ ಅಧಮರೆಲ್ಲರು
ಸತ್ತಮೇಲೆ ಸಮರಾಗ್ತಾರು..

ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು
ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ.. ಹಹ್ಯಾ..
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ ಓ ದಿದ್ದಿರಿ
ದಿದ್ದಿರಿ ದಿದ್ದಿರಿ ದಿದ್ದಿರಿ
ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು ಏಯ್..
ಮಸಣದಲ್ಲಿ ಈ ವೀರಬಾಹುವ
ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಬೂದಿಯಾಗ್ತರು
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು
ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ.. ಹಹಹಹಹಹಾ
ಹೊಯ್ ಕೀಳ್ಯಾವ್ದು ಮೇಲ್ಯಾವುದೋ..
ಹೊಯ್ ಕೀಳ್ಯಾವ್ದು ಮೇಲ್ಯಾವುದೋ..
********************************************************************************
No comments:
Post a Comment