Friday, September 7, 2018

ಜಸ್ಟ್ ಮಾತ್ ಮಾತಲ್ಲಿ (2010)


ಎಲ್ಲೋ ಜಿನುಗಿರುವ ನೀರು

ಚಲನ ಚಿತ್ರ : ಜಸ್ಟ್ ಮಾತ್ ಮಾತಲ್ಲಿ  (2010)
ಸಾಹಿತ್ಯ: ಸುಧೀರ್ ಅತ್ತಾವರ, ರಾಘವೇಂದ್ರ ಕಾಮತ್ 
ಸಂಗೀತ : ರಘು ದೀಕ್ಷಿತ್ 
ಗಾಯಕರು: ಶ್ರೇಯಾ ಘೋಶಾಲ್, ರಘು ದೀಕ್ಷಿತ್ 
ನಿರ್ದೇಶನ: ಕಿಚ್ಚ ಸುದೀಪ 
ನಟನೆ: ಸುದೀಪ್, ರಮ್ಯಾ, ರಾಜೇಶ್  


ಎಲ್ಲೋ ಜಿನುಗಿರುವ ನೀರು
ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ
ಎಲ್ಲೋ ಹೂ ಅರಳೋ ಸಮಯ
ಎಲ್ಲೋ ಚಿಲಿಪಿಲಿಯ ಭಾವವೂ

ಮುಂಜಾನೆ ಮಂಜು ಹನಿ ಭೂಮೀಲಿ
ತಂಪಾಗಿ ತೀಡಿರುವ ಪ್ರೇಮ
ಇಂಪಾದ ಕೇಳ ತುಸು ಹಾಯಾಗಿ
ಭುವಿ ಮುತ್ತಿಟ್ಟ ಕಿವಿಗುಟ್ಟು ಪ್ರೇಮ
ಬೆಳ್ಳಿಬೆಳಕನ್ನು ಹೀರಿ ಸೊಂಪಾಗಿ
ಹೂಬಿರಿದು ನಕ್ಕಂತ ನಗುವಲ್ಲಿ ಪ್ರೇಮ
ಹಚ್ಚ ಹಸಿರನ್ನು ತೂರಿ ಕಂಪಾಗಿ ಹೂನಗಲು
ಪರಿಮಳವೇ ಹೊನಲಾಗಿ ಪ್ರೇಮ
ದಿನ ಬೆಳಗಿನ ಈ ಸವಿಗನಸುಗಳು
ಜೀಕಾಡೊ ಒಲವಿದು ಪ್ರೇಮ
ಹೊಸ ಲೋಕದ ಈ ಸವಿಭಾವಗಳು
ನಲಿನಲಿಯುತ್ತ ಜಿಗಿದಿದೆ ಪ್ರೇಮ

ಎಲ್ಲೋ ಜಿನುಗಿರುವ ನೀರು
ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ
ಎಲ್ಲೋ ಹೂ ಅರಳೋ ಸಮಯ
ಎಲ್ಲೋ ಚಿಲಿಪಿಲಿಯ ಭಾವವೂ

ಮೋಹನ ಯಾರಿವ ನನ್ನೀಮನಸೆಳೆದವ
ನನ್ನನ್ನೇ ನಂಬಲಾಗದ
ಸಂಗೀತದ ಅಲೆಯಲ್ಲಿ ತೇಲಿಹೋದೆನಾ
ಕಾದಿದೆ ನವಿಲು ಕಾರ್ಮೋಡ ಬರಲು ಅರಳಲು
ತನ್ನ ಗರಿಯೂ ಕಾಣಲು ಒಲವಿನ ರಂಗು ಬಾನಲೂ
ಎಲ್ಲೆಲ್ಲೂ ಜಾಜಿ ಮೊಲ್ಲೆ ಹೂವ ಸಾಲೆ
ಅಲ್ಲಲ್ಲಿ ಒಲವಿನ ಮಾಲೆ
ಕಂಪಲ್ಲಿ ಕಾವ್ಯದಲ್ಲಿ ಮೌನದಲ್ಲಿ
ಮಾತಲ್ಲಿ ಅರಿಯೆನಾ ಪ್ರೇಮದಲೆಲೇ

ಎಲ್ಲೋ ಜಿನುಗಿರುವ ನೀರು
ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ
ಎಲ್ಲೋ ಹೂ ಅರಳೋ ಸಮಯ
ಎಲ್ಲೋ ಚಿಲಿಪಿಲಿಯ ಭಾವವೂ
ಮುಂಜಾನೆ ಮಂಜು ಹನಿ ಭೂಮೀಲಿ
ತಂಪಾಗಿ ತೀಡಿರುವ ಪ್ರೇಮ
ಇಂಪಾದ ಕೇಳ ತುಸು ಹಾಯಾಗಿ
ಭುವಿ ಮುತ್ತಿಟ್ಟ ಕಿವಿಗುಟ್ಟು ಪ್ರೇಮ


*********************************************************************************

ಮುಂಜಾನೆ ಮಂಜಲ್ಲಿ

ಸಾಹಿತ್ಯ : ರಾಘವೇಂದ್ರ ಕಾಮತ್ 
ಗಾಯನ: ರಘು ದೀಕ್ಷಿತ್, ಹರಿಚರಣ್ 


ಮುಂಜಾನೆ ಮಂಜಲ್ಲಿ
ಮುಸ್ಸಂಜೆ ತಿಳಿ ತಂಪಲ್ಲಿ
ಓ.. ಒಲವೆ.. ನೀನೆಲ್ಲಿ
ಹುಡುಕಾಟ ನಿನಗಿನ್ನೆಲ್ಲಿ..
ನನ್ ಎದೆಯೊಳಗೆ ನೀ ಇಳಿದು
ಜಡ ಮನದ ಮೌನ ಮುರಿದು,
ಬಿಸಿ ಉಸಿರನ್ನು ನೀ ಬಗೆದು,
ನಿಟ್ಟುಸಿರನ್ನು ನೀ ತೆಗೆದು..
ನನ್ನೊಮ್ಮೆ ಆವರಿಸು, ಈ ಬೇಗೆ ನೀ ಹರಿಸು
ಮನದಾಳದ.. ಉಲ್ಲಸದೀ..
ಕುಂತಲ್ಲು ನೀನೆ, ನಿಂತಲ್ಲು ನೀನೆ
ಎಲ್ಲೆಲ್ಲೂ ನೀನೆ ಸಖೀ,
ಕಣ್ಣಲ್ಲು ನೀನೆ, ಕನಸಲ್ಲು ನೀನೆ
ಎಲ್ಲೆಲ್ಲೂ ನೀನೆ ಸಖೀ,
ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,
ಎಂದೆಂದೂ ನೀನೆ ಸಖೀ..
ಆವರಿಸು.... ಮೈದುಂಬಿ...
ಜಸ್ಟ್ ಮಾತ್ ಮಾತಲ್ಲಿ...

ನನ್ನೆಲ್ಲ ಕನಸನ್ನು, ನಿನದೆಂದು ನೀ ತಿಳಿದಿದ್ದೆ
ನೂರೆಂಟು ನೋವಲ್ಲು, ನೀ ಬಂದು ಜೊತೆ ಇದ್ದೆ
ಕಾರ್ಮೋಡ ಕವಿದ ಮನಕೆ,
ಹೊಸ ಬೆಳಕು ತಂದು ಸುರಿದೆ,
ನಿನಗಾಗಿ ನಾನು ನನ್ನ ಬದುಕೆಲ್ಲಾ ಮುಡಿಪು ಎಂದೆ
ಈಗೆಲ್ಲಿ ನೀ ಹೋದೆ.. ಕನಿಕರಿಸಿ ನೀ ಬಾರೆ..
ಎದೆಗೂಡಿನ ಉಸಿರು ನೀನೇ..
ಬಾನಲ್ಲು ನೀನೆ, ಭುವಿಯಲ್ಲು ನೀನೆ
ಎಲ್ಲೆಲ್ಲೂ ನೀನೆ ಸಖೀ,
ನೋವಲ್ಲು ನೀನೆ, ನಗುವಲ್ಲು ನೀನೆ
ಎಲ್ಲೆಲ್ಲೂ ನೀನೆ ಸಖೀ,
ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,
ಎಂದೆಂದೂ ನೀನೆ ಸಖೀ..
ಆವರಿಸು.... ಮೈದುಂಬಿ...
ಜಸ್ಟ್ ಮಾತ್ ಮಾತಲ್ಲಿ...

ನೀನಿಲ್ಲದೆ.. ಬಾಳೆ ಬರಡೂ... ನಿನಗಾಗೆ ನನ್ನ ಬದುಕು ಮುಡಿಪು...
ನೀನಿಲ್ಲದ ಬದುಕೇನಿದು, ಕೊಲ್ಲು ನನ್ನ ...
ತಂಪಲ್ಲು ನೀನೆ, ಬಿಸಿಲಲ್ಲು ನೀನೆ ಎಲ್ಲೆಲ್ಲೂ ನೀನೆ ಸಖೀ,
ಹಸಿರಲ್ಲು ನೀನೆ, ಉಸಿರಲ್ಲು ನೀನೆ ಎಲ್ಲೆಲ್ಲೂ ನೀನೆ ಸಖೀ,
ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,
ಎಂದೆಂದೂ ನೀನೆ ಸಖೀ..
ಆವರಿಸು.... ಮೈದುಂಬಿ...
ಜಸ್ಟ್ ಮಾತ್ ಮಾತಲ್ಲಿ...

*********************************************************************************

ಬಾನಿನ ಹನಿಯು

ಸಾಹಿತ್ಯ : ಮನೋಜವ ಗಲಗಲಿ 
ಗಾಯನ : ರಘು ದೀಕ್ಷಿತ್  


ಬಾನಿನ ಹನಿಯು ಧರೆಯಿಂದ ಪುಟಿದು
ಕಾರಂಜಿ ಭುವಿ ಸೇರಿದೆ..
ಸೋತ ಹೃದಯ ನಾಕಂಡ ಕನಸು
ನಿಜವೆಂದು ನಗೆಬೀರಿದೆ..
ಬಯಕೆ ಮರೆವೆ, ಹೃದಯ ಕಡಿವೆ,
ಇದು ಕಹಿಯೊ ಸಿಹಿಯೊ,
ಕಣ್ ಹನಿಯೊ ಅರಿವೊ
ಇದು ನನ್ನ ಹಸಿರು ಕವನ...

ಜಸ್ಟ್ ಮಾತ್ ಮಾತಲ್ಲಿ...
she stole my heart away...
ಜಸ್ಟ್ ಮಾತ್ ಮಾತಲ್ಲಿ...
she took my breath away...

ಸುರಿವ ಮಳೆ ನಿಂತು, ತಂಪಾಗಿದೆ
ಬರಿದಾದ ಭುವಿ ಮತ್ತೆ, ಹಸಿರಾಗಿದೆ
ಗೂಡ ಬಿಡಲು ಹಕ್ಕಿಯು ಹಾತೊರೆದಿದೆ
ತನ್ನ ನೆನೆದ ರೆಕ್ಕೆಯ ಬಾನಿಗೊಡ್ಡಿದೆ
ಸೋತ ಈ ಸಮಯ ಹಾಡಾಗಿದೆ...
ಇದು ಕಹಿಯೊ ಸಿಹಿಯೊ,
ಕಣ್ ಹನಿಯೊ ಅರಿವೊ
ಇದು ನನ್ನ ಹಸಿರು ಕವನ...

ಜಸ್ಟ್ ಮಾತ್ ಮಾತಲ್ಲಿ... she stole my heart away...
ಜಸ್ಟ್ ಮಾತ್ ಮಾತಲ್ಲಿ... she took my breath away...


********************************************************************************

No comments:

Post a Comment