Wednesday, September 12, 2018

ಸವಾರಿ (2009)



ಚಲನ ಚಿತ್ರ: ಸವಾರಿ (2009)
ಸಾಹಿತ್ಯ: ಸುಧೀರ್ ಅತ್ತಾವರ್ 
ಸಂಗೀತ: ಮಣಿಕಾಂತ್ ಕದ್ರಿ 
ಗಾಯಕರು: ಸಾಧನಾ ಸರಗಮ್/ಅನುರಾಧ ಭಟ್ 
ನಿರ್ದೇಶನ: ಜೇಕಬ್ ವರ್ಗೀಸ್ 
ನಟನೆ: ಶ್ರೀನಗರ ಕಿಟ್ಟಿ, ರಘು ಮುಖರ್ಜಿ, 
ಕಮಲಿನಿ ಮುಖರ್ಜಿ, ಸುಮನ್ ರಂಗನಾಥನ್ 


ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…
ಸಿಹಿಸವಿ ಕವನ…
ಮರಳಿ ಮರೆಯಾಗಿ ತರಲಿ ತಂಗಾಳಿ
ಹೊಮ್ಮಿ ಹೊಸತಾದ ಹರುಷ
ಹರವೂ ಹಸಿ ಖುಷಿ ಕವನ
ಕನಸಲಿ ನನ್ನ ಸಾಗಿಸಿ…
ಕಲರವ ನೀ ಪಸರಿಸಿ…
ನೀ ಇನಿಯನೀ ಪ್ರೀತಿಗೆ ಸಾರಥಿ...

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…
ಸಿಹಿಸವಿ ಕವನ…

ರಿಂಗಣ ಹೊಸತನ…ತನುವ ಈ ನರ್ತನ
ತಿಂಗಳಾ ಬೆಳಕನ ಕಂಡೆ ಈ ಸಂಜೆ ನಾ…
ಧರೆಗಿಳಿದ ಕಿನ್ನರ ನೀ…ವಿಸ್ಮಯದ ಕಿರಣವೆ ನೀ…
ನನ್ನ ಕನಸುಗಳು ತೇಲಾಡಿ ಕುಣಿಯುತಿದೆ…
ನೀ ಇನಿಯನೀ…ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…
ಸಿಹಿಸವಿ ಕವನ…

ಬೆಲ್ಲದ ಪಾಕವೇ ನಲ್ಲ ನಿನ್ನೊಲುಮೆಯೆ…
ನಿಲ್ಲದ ತವಕವೇ ಭವ್ಯ ಸಮ್ಮಿಲನಕೆ..
ಆಗಸಕೆ ರಂಗೆರಚಿ…ಬಣ್ಣದಲಿ ಭಾವ ಜಿನುಗಿ..
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯನೀ… ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…
ಸಿಹಿಸವಿ ಕವನ

********************************************************************************


ಅಲೆ ಅಲೆ ಅಲೆ ಅಲೆ

ಸಾಹಿತ್ಯ:  ಕವಿರಾಜ್ 
ಗಾಯಕರು: ಕಾರ್ತೀಕ್, ರೀಟಾ 

ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಎದೆ ಅಲೆ ಅಲೆ ಅಲೆ ಅಲೆ ಅಲೆಯೋ...

ಮಳೆ ಮಳೆ ಮಳೆ ಮಳೆ ಮಳೆಯೋ ...
ಪುಳಕದ ಮಳೆ ಮಳೆ ಮಳೆ ಮಳೆಯೋ..
ಮೊದಲ ಸಾರಿ ಇಂತಾ ಸಂತೋಷವೋ...ಎದೆಯಲಿದೆ
ಕಳೆದು ಹೋದೆ ಇಂದು ನಾನು ಅದು ಎಲ್ಲಿ ತಿಳಿಯದಾದೆ
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ...
ಮಳೆ ಮಳೆ ಮಳೆ ಪುಳಕದ ಮಳೆಯೋ...


ಅವಳು ಎದುರಲಿ ಬಂದರೆ
ಹೃದಯ ಕುಣಿವುದು ದೇವರೇ
ಹೊಸ ಹೊಸ ಹೊಸ ತರ ಸಡಗರ
ಅವನಿರೋ ಕ್ಷಣಗಳು ಸುಮಧುರ
ಕಣ್ಣೊಂದಾಗಿದೆ ಕನಸೊಂದಾಗಿದೆ ಜೀವ ಜಾರುತಿದೆ
ಹಾರೋ ಹಾಗಿದೆ ನೂರೊಂದಾಗಿದೆ ಹೇಳೋಕೆ ಬರದೇ
ಕಣ್ಣೊಂದಾಗಿದೆ ಕನಸೊಂದಾಗಿದೆ ಜೀವ ಜಾರುತಿದೆ
ಹಾರೋ ಹಾಗಿದೆ ನೂರೊಂದಾಗಿದೆ ಹೇಳೋಕೆ ಬರದೇ

ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ...
ಮಳೆ ಮಳೆ ಮಳೆ ಪುಳಕದ ಮಳೆ ಮಳೆ ಮಳೆಯೋ...

ನನಗೆ ಸಿಗುತಿದೆ ಸೂಚನೆ
ಮನಸು ಕೆಡುತಿದೆ ಮೆಲ್ಲನೆ
ಪದೇ ಪದೇ ಅದೇ ಅದೇ ಯೋಚನೆ
ಸವಿ ಸವಿ ಸವಿ ಯಾತನೆ
ಮಗುವಂತಾಗಿದೆ ಮುಗಿಲಂತಾಗಿದೆ ನನ್ನ ಈ ಮನಸು
ಕುಣಿವಂತಾಗಿದೆ ಖುಷಿ ಹೆಚ್ಚಾಗಿದೆ ಏನಿಂತಾ ಸೊಗಸು

ಅಲೆ ಅಲೆ ಅಲೆ ಅಲೆ ಅಲೆ
ಎದೆ ಅಲೆ ಅಲೆ ಅಲೆ ಅಲೆ ಅಲೆಯೋ...

ಮಳೆ ಮಳೆ ಮಳೆ ಮಳೆ
ಪುಳಕದ ಮಳೆ ಮಳೆ ಮಳೆಯೋ..
ಮೊದಲ ಸಾರಿ ಇಂತಾ ಸಂತೋಷವೋ...ಎದೆಯಲಿದೆ
ಕಳೆದು ಹೋದೆ ಇಂದು ನಾನು ಅದು ಎಲ್ಲಿ ತಿಳಿಯದಾದೆ

ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ...
ಮಳೆ ಮಳೆ ಮಳೆ ಪುಳಕದ ಮಳೆ ಮಳೆ ಮಳೆಯೋ...

*********************************************************************************

No comments:

Post a Comment