ಓ ಮನಸೇ ಮನಸೇ
ಚಲನ ಚಿತ್ರ: ಗಜ (2008)ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಸಂಗೀತ: ವಿ. ಹರಿಕೃಷ್ಣ
ಗಾಯಕರು: ಕುನಾಲ್ ಗಾಂಜಾವಾಲ

ನಟನೆ: ದರ್ಶನ್ ತೂಗುದೀಪ್, ನವ್ಯಾ ನಾಯರ್
ಓ ಮನಸೇ ಮನಸೇ
ನಿನಗೊಂದು ಮನವಿ ಮನಸೇ
ಕೈಯ ಮುಗಿವೆ ಕನಿಕರಿಸೆ,
ಪ್ರೀತಿ ಹೇಳಿ ಸಹಕರಿಸೆ
ಮನಸೇ ಮನಸೇ ಒಮ್ಮೆ ಸಮ್ಮತಿಸೆ
ಓ ಮನಸೇ ಮನಸೆ,
ನಿನಗೊಂದು ಮನವಿ ಮನಸೇ
ಆ ಆ ಆ ಆ ಆ ಆ ಆ.....
ಹೇಳು ಹೇಳು ಅನ್ನೋ ಮನಸು
ತಾಳು ತಾಳು ಅನ್ನೋ ಮನಸು
ಯಾವ ಮನದ ಮಾತು ಕೇಳಲಿ ನಾನೀಗ ...
ನೆನಪು ಎಂಬ ಮುತ್ತಿನ ಹಾರ...
ಕೊನೆಯವರೆಗೂ ಅಮರ ಮಧುರ....
ಇಷ್ಟು ಸಾಕು ಬಾಳು ಎಂಬ ದೋಣಿ ಸಾಗಲು....
ಕೆಲವು ಪ್ರೀತಿ ಹೀಗೆ ಗರ್ಭದಲ್ಲೇ ಕರಗುವುದಂತೆ ...
ಕೆಲವು ಮಾತ್ರ ಯಾಕೋ ಹೊರಗೆ ಬರದೆ ನರಳುವುದಂತೆ.. ...
ಮನಸೇ ಮನಸೇ ಒಮ್ಮೆ ಸಮ್ಮತಿಸೆ...

ನಿನಗೊಂದು ಮನವಿ ಮನಸೇ ...
ಹೋಗೋ ಮುನ್ನ ನನ್ನ ಗೆಳತಿ.....
ತಿರುಗಿ ನೋಡೇ ಒಂದು ಸರತಿ.....
ಇಲ್ಲಿ ಒಂದು ಪ್ರಾಣ ನಿನ್ನ ಪ್ರೀತಿ ಕೇಳಿದೆ ......
ಕಾಡಿ ಕಾಡಿ ನೋಯಿಸ ಬೇಡ ....
ಕಾಯಬೇಡ ಕಾಯಿಸಬೇಡ .....
ಒಂದು ಬಾರಿ ಹೋದ ಕಾಲ ಮತ್ತೆ ಬಾರದು
ಬೀಸದಿರುವ ಗಾಳಿ ಉಸಿರಿಗಂತೂ ದೂರ
ಹೇಳದಿರುವ ಪ್ರೀತಿ ಭೂಮಿಗಂತೂ ಭಾರ
ಮನಸೇ ಮನಸೇ ಒಮ್ಮೆ ಸಮ್ಮತಿಸೆ
ಓ ಮನಸೇ ಮನಸೇ ನಿನಗಿಂದು ಮನವಿ ಮನಸೇ

*********************************************************************************
No comments:
Post a Comment