Monday, September 10, 2018

ಮಣಿ (2003)


ಚಲನ ಚಿತ್ರ: ಮಣಿ (2003)
ಸಾಹಿತ್ಯ: ಕೆ. ಕಲ್ಯಾಣ್ 
ಸಂಗೀತ: ರಾಜಾ 
ಗಾಯಕರು: ಶಂಕರ್ ಮಹಾದೇವನ್ 
ನಿರ್ದೇಶನ: ಯೋಗರಾಜ್ ಭಟ್ 
ನಟನೆ: ಮಯೂರ್ ಪಟೇಲ್, ರಾಧಿಕಾ 



ಸಾವಿರ ನದಿಗಳಿಗೆಲ್ಲ, ಒಂದೇನೆ ಸಾಗರ.
ಸಾವಿರ ಋತುಗಳಿಗೆಲ್ಲ , ಒಂದೇನೆ ನೇಸರ.
ತಿಳಿಯದಲೇ ಜಾರೋ, ಜೊತೆ ಸೇರೋ, ಈ ಪ್ರೀತಿ ಹೇಗೆ?
ತಿಳಿಯೋದು, ತಿಳಿಸೋದು, ಅದು ಯಾರೋ?

ಪ್ರತಿ ಹೂವಿನ ಸಂಭಾಷಣೆ ಕೇಳುವುದು,
ಚಿಟ್ಟೆಗೆ ಮಾತ್ರಾ.
ಪ್ರತಿ ಇಬ್ಬನಿ ಸಂಗೀತವು ಕೇಳುವುದು,
ಚಿಗುರೋಡೆವ ಎಲೆಗೆ ಮಾತ್ರಾ.
ಹೃದಯಗಳ ತವಕಗಳೇ ಬೇರೆ.

ಸಾವಿರ ನದಿಗಳಿಗೆಲ್ಲ, ಒಂದೇನೆ ಸಾಗರ.
ಸಾವಿರ ಋತುಗಳಿಗೆಲ್ಲ , ಒಂದೇನೆ ನೇಸರ.
ತಿಳಿಯದಲೇ ಜಾರೋ, ಜೊತೆ ಸೇರೋ, ಈ ಪ್ರೀತಿ ಹೇಗೆ?
ತಿಳಿಯೋದು, ತಿಳಿಸೋದು, ಅದು ಯಾರೋ?

ಪ್ರತಿ ಜೇನಿನ ಹನಿಯೆಲ್ಲವು, ಗೂಡಾಗುವ ಆಸೆಗೆ ಮಾತ್ರ.
ಪ್ರತಿ ಮೀನಿನ ತುಂಟಾಟವು ಕಾಣುವುದು,
ಮುಳುಗೇಳುವ ಅಲೆಗೆ ಮಾತ್ರಾ.
ಮನಸುಗಳ ಮಿಡಿತಗಳೆ ಬೇರೆ.

ಸಾವಿರ ನದಿಗಳಿಗೆಲ್ಲ, ಒಂದೇನೆ ಸಾಗರ.
ಸಾವಿರ ಋತುಗಳಿಗೆಲ್ಲ , ಒಂದೇನೆ ನೇಸರ.
ತಿಳಿಯದಲೇ ಜಾರೋ, ಜೊತೆ ಸೇರೋ, ಈ ಪ್ರೀತಿ ಹೇಗೆ?
ತಿಳಿಯೋದು, ತಿಳಿಸೋದು, ಅದು ಯಾರೋ?


*********************************************************************************

No comments:

Post a Comment