Sunday, September 9, 2018

ಜಾಕಿ (2010)



ಎರಡು ಜಡೆಯನ್ನು

ಚಲನಚಿತ್ರ: ಜಾಕಿ (2010)
ಸಾಹಿತ್ಯ: ಯೋಗರಾಜ್ ಭಟ್ 
ಸಂಗೀತ: ವಿ. ಹರಿಕೃಷ್ಣ 
ಗಾಯನ: ಸೋನು ನಿಗಮ್ 
ನಿರ್ದೇಶನ: ಸೂರಿ 
ನಟನೆ: ಪುನೀತ್ ರಾಜ್ ಕುಮಾರ್, ಭಾವನಾ, ಹರ್ಷಿಕಾ 



ಎರಡು ಜಡೆಯನ್ನು ಎಳೆದು ಕೇಳುವೆನು
ನೀ ಸ್ವಲ್ಪ ನಿಲಬಾರದೇ
ಎರಡು ನೆರಳೇಕೆ ನಾವಿಬ್ಬರು ಒಂದೇ
ಬಳಿ ನೀನು ಬರಬಾರದೆ
ನೀ ದೂರ ನಿಂತಾಗ ಬಾ ಎಂದು
ನಾ ನಿನ್ನ ಕೂಗೊದೆ ಚಟವಲ್ಲವೇ
ಇಸ್ಟೊಂದು ಒಲವಲ್ಲಿ ನಿನ್ನ ನೀಳ
ತೋಳನ್ನು ಬಯಸೋದೆ ಹಿತವಲ್ಲವೆ
ಎರಡು ಕಂಗಳಿಗೆ ಮುತ್ತು ನಿಡುವೇನು
ನೀನಿಲ್ಲಿ ಬರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ
ಸಾಲಾಗಿ ಇಡಬಾರದೇ|

ಬಾಯಾರಿ ನಾ ನಿಂತ ಘಳಿಗೇಲಿ
ಮಳೆಯೊಂದು ತಾನಾಗಿ ಬರಬಾರದೆ
ಹಾಯಾದ ಸಂಜೆಯಲಿ ಹುಸಿಮುನಿಸು ಬಂದಾಗ
ನೀನೊಮ್ಮೆ ಸಿಗಬಾರದೆ
ನೀನಿಲ್ಲದಾಗ ನಾ ಕಂಡ ಕನಸು
ಅತಿಯಾಗಿ ನೆನೆಪಾಗಿದೆ
ಬಿಡದೆ ಕಂಗಳಿಗೆ ಮುತ್ತು ನಿಡುವೇನು
ನೀನಿಲ್ಲಿ ಇರಬಾರದೆ
ಎಲ್ಲ ಕನಸನ್ನು ಒಂದೇ ನೆರಳಲ್ಲಿ
ಸಾಲಾಗಿ ಇಡಬಾರದೇ|

ನಾ ತುಂಬಾ ನಗುವಾಗ ಈ ಕೆನ್ನೆ ಮೇಲೊಂದು
ಚುಕ್ಕಿನ ಇಡಬಾರದೇ
ಖುಷಿಯಲ್ಲಿ ನಿನ್ನನ್ನು ಮಗುವಂತೆ ಬಿಗಿದಪ್ಪಿ
ನಾ ಬಿಕ್ಕಿ ಅಳಬಾರದೆ
ನಿನ್ನಿಂದ ಕನಸು ನಿನ್ನಿಂದಲೇ ಮುನಿಸು
ಕಲಿಯೋದು ಮಜವಾಗಿದೆ
ಎರಡು ಜಡೆಯನ್ನು ಎಳೆದು ಕೇಳುವೆನು
ನೀ ಸ್ವಲ್ಪ ನಿಲ್ಲಬಾರದೆ
ಎರಡು ನೆರಳೇಕೆ ನಾವಿಬ್ಬರು ಒಂದೇ
ಬಳಿ ನೀನು ಬರಬಾರದೆ
ನೀ ದೂರ ನಿಂತಾಗ ಬಾ ಎಂದು
ನಾನಿನ್ನ ಕೂಗೋದು ಚಟವಲ್ಲವೇ
ಇಸ್ಟೊಂದು ಒಲವಲ್ಲಿ ನಿನ್ನ ನೀಳ ತೋಳನ್ನು
ಬಯಸೋದು ಹಿತವಲ್ಲವೆ|


********************************************************************************

ಶಿವ ಅಂತ ಹೋಗುತಿದ್ದೆ

ಸಾಹಿತ್ಯ: ಯೋಗರಾಜ್ ಭಟ್   
ಗಾಯನ: ಟಿಪ್ಪು   


ಶಿವ ಅಂತ ಹೋಗುತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟಾಂಕು ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ
ಕಂಡು ಕಂಡು ಬಿದ್ದಂಗಾಯಿತು ಹಳ್ಳದಲಿ
ಕಂಬ್ಳಿ ಹುಳ ಬಿಟ್ಟಾಂಗಾಯಿತು ಹಾರ್ಟಿನಲಿ
ಕಚಗುಳಿ ಇಟ್ಟಾಂಗಾಯಿತು ಬೆನ್ನಿನಲಿ
ನೀ ಕುಂತಾಗ ಬೈಕಿನಲಿ
ಬೈಕಿನಲಿ...ಬೈಕಿನಲಿ...ಬೈಕಿನಲಿ

ಟಾಪು ಗೇರು.. ಹಾಕಂಗಿಲ್ಲ
ಸುಮ್ನೆ ಬ್ರೇಕು.. ಹೊಡ್ಯಂಗಿಲ್ಲ
ಟಾಪು ಗೇರು ಹಾಕಂಗಿಲ್ಲ...
ಸುಮ್ನೆ ಬ್ರೇಕು ಹೊಡ್ಯಂಗಿಲ್ಲ
ಅಯ್ಯೊ ಪಾಪ ಹುಡ್ಗಿ ಜೀವ ಹೆದರುವುದು
ತು ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು

ಒಂದು ಮಾತು.. ಕೇಳಲಿಲ್ಲ
ಒಂದು ಮಾತು ಕೇಳಲಿಲ್ಲ..
ಹಿಂದೆ ಮುಂದೆ ನೋಡಲಿಲ್ಲ
ನನ್ನ ಎದೆ ಸೈಟನು ಕೊಂಡುಕೊಂಡು
ತಡ ಮಾಡದೆ ಪಾಯವ ತೋಡಿ ಬಿಟ್ಲು
ಹೊವಿನಂತ ಹುಡುಗ ನಾನು ತುಂಬ ಮೃದು
ಹೊವಿನಂತ ಹುಡುಗ ನಾನು ತುಂಬ ಮೃದು
ಹೆಣ್ ಮಕ್ಳೇ ಸ್ಟ್ರಾಂಗು ಗುರು
ರಾಂಗು ಗುರು.. ರಾಂಗು ಗುರು..
ರಾಂಗು ಗುರು..ರಾಂಗು ಗುರು

ಶಿವ ಅಂತ ಹೋಗುತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟಾಂಕು ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ
ಉಣ್ಣಲಿಲ್ಲ.. ತಿನ್ನಲಿಲ್ಲ.. ಮಟ ಮಟ.. ಮಧ್ಯಾನವೇ
ಉಣ್ಣಲಿಲ್ಲ ತಿನ್ನಲಿಲ್ಲ ಮಟ ಮಟ ಮಧ್ಯಾನ
ಕುಂತು ಬಿಟ್ಳು ಹಿಂದುಗಡೆ ಸೀಟಿನಲಿ
ನಾವ್ ಹೊಡ್ಕೋ ಬೇಕು ನಮ್ಮದೆ ಬೂಟಿನಲಿ

ಒಂದು ಕೇಜಿ.. ಅಕ್ಕಿ ರೇಟು
ಒಂದು ಕೇಜಿ ಅಕ್ಕಿ ರೇಟು
ಮೂವತ್ ರೂಪಯ್ ಆಗಿ ಹೋಯ್ತು
ಇಜಿಯಾಗಿ ಹೇಗೆ ನಾನು ಪ್ರೀತಿಸಲಿ
ಅದರಲ್ಲು ಮೊದಲನೆ ಭೇಟಿಯಲಿ
ರೇಷನ್ ಕಾರ್ಡು ಬೇಕೆ ಬೇಕು ಪ್ರೀತಿಸಲು
ರೇಷನ್ ಕಾರ್ಡು ಬೇಕೆ ಬೇಕು ಪ್ರೀತಿಸಲು
ಸಂಸಾರ ಬೇಕಾ ಗುರು
ಬೇಕು ಗುರು..ಬೇಕು ಗುರು..
ಬೇಕು ಗುರು..ಬೇಕು ಗುರು

ಶಿವ ಅಂತ ಹೋಗುತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟಾಂಕು ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ 


********************************************************************************

No comments:

Post a Comment