Tuesday, September 11, 2018

ಮಾಸ್ತಿ ಗುಡಿ (2017)

ಚಿಪ್ಪಿನೊಳಗಡೆ ಮುತ್ತು

ಚಲನಚಿತ್ರ: ಮಾಸ್ತಿ ಗುಡಿ (2017)
ಸಾಹಿತ್ಯ: ಕವಿರಾಜ್ 
ಸಂಗೀತ: ಸಾಧು ಕೋಕಿಲ 
ಗಾಯನ: ಶ್ರೇಯಾ ಘೋಷಾಲ್, ಸೋನು ನಿಗಮ್ 
ನಿರ್ದೇಶನ: ನಾಗಶೇಖರ್ 
ನಟನೆ: ದುನಿಯಾ ವಿಜಯ್, ಅಮೂಲ್ಯ, ಕೃತಿ ಕರಬಂಧ 


ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಲದಿರೋ ಹಾಗೆ,
ಅದು ಹೇಗೆ, ತ ನನ ನಾ... (೨ ಸಲ)

ಕಣ್ಣ ಮುಂದೆ ಬಂದೆ ನೀನು
ಅಂದೇ ಮೊದಲ ಕನಸ ಕಂಡೆ ನಾನು

ಹೋ ಕಣ್ಣ ಮುಂದೆ ಬಂದೆ ನೀನು
ಅಂದೇ ಮೊದಲ ಕನಸ ಕಂಡೆ ನಾನು
ಆ ಕನಸಲಿ ನಾ ರಾಣಿ ನೀ ರಾಜನು 
ನಿನ್ನ ತೋಳಿನ ಅರಮನೆಯಲ್ಲಿ ನಾನು 
ಸಾವು ಕೂಡ ನನ್ನ ನಿನ್ನ 
ಬೇರೆ ಮಾಡೋ ಮಾತೇ ಇಲ್ಲ ಇನ್ನಾ 
ನಿನ್ನ ನಗುವಾಗಿ, ನೆರಳಾಗಿ, ಕಾಪಾಡುವೆ 
ಮರಳಿ ಮರಳಿ ಮತ್ತೆ ಜನಿಸಿ ಬರುವೆ 


ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಲದಿರೋ ಹಾಗೆ,
ಅದು ಹೇಗೆ, ತ ನನ ನಾ...

ದೂರಾ  ಇನ್ನು ದೂರ ದೂರಾ
ಕರೆದುಕೊಂಡು ಹೋಗು ಮಾಯಗಾರ

ಹೋ ದೂರಾ  ಇನ್ನು ದೂರ ದೂರಾ
ಕರೆದುಕೊಂಡು ಹೋಗು ಮಾಯಗಾರ
ಈ ಭುವಿ ಆಚೆ , ಕಡಲಾಚೆ, ಮುಗಿಲಾಚೆಗೆ
ಪ್ರತಿ ಜನ್ಮಕೂ ಜೊತೆ ಬದುಕುವ ಹಾಗೆ

ಸೂರ್ಯ ಚಂದ್ರ ಎರಡು ತಂದು
ನಿನ್ನ ಕಿವಿಗೆ ಇಡುವೇ ಒಡವೆ ಇಂದು
ಈ ಯುಗದಾಚೆ, ಜಗದಾಚೆ, ಬಾನಾಚೆಗೂ
ಹುಡುಕಿ ಹುಡುಕಿ ಕೊಡುವೆ ಖುಷಿಯ ತಂದು

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಲದಿರೋ ಹಾಗೆ,
ಅದು ಹೇಗೆ, ತ ನನ ನಾ ನಾ ...

ನಾನ ನಾನ ನಾ, ನಾ ನಾ
ಹೇ ಹೇ ಹೇ ಹೇ, ಹೇ ಹೇ

********************************************************************************

No comments:

Post a Comment