Saturday, September 8, 2018

ರನ್ನ (2015)

ಸೀರೇಲಿ ಹುಡ್ಗಿರ

ಚಲನ ಚಿತ್ರ: ರನ್ನ (2015)
ನಿರ್ದೇಶನ: ನಂದ ಕಿಶೋರ್ 
ಸಂಗೀತ: ವಿ. ಹರಿಕೃಷ್ಣ  
ಸಾಹಿತ್ಯ: ಯೋಗರಾಜ್ ಭಟ್ 
ಗಾಯಕರು: ವಿಜಯ್ ಪ್ರಕಾಶ್ 
ನಟನೆ: ಸುದೀಪ್, ರಚಿತಾ ರಾಮ್, ಹರಿ ಪ್ರಿಯಾ, ಮಧೂ 


ಸೀರೇಲಿ ಹುಡ್ಗಿರ ನೋಡಲೆಬಾರದು ನಿಲ್ಲಲ್ಲ ಟೆಂಪ್ರೆಚರು
ಸ್ಕೂಲಲಿ ಹೇಳಿಕೊಡಬಹುದಿತ್ತು ಹೇಳಲಿಲ್ಲ ನಮ್ಮ ಟೀಚರು
ನಂಗೆ ಅನ್ಸರ್ ಒಂದು ಬೇಕಿದೆ ಸೀರೆ ಟ್ರಾನ್ಸ್ಪರೆಂಟ್ ಯಾಕಿದೆ
ಅದೆಷ್ಟೇ ಬೇಡ ಅಂದ್ರು ಕಣ್ಣು ಕದ್ದಕದ್ದು ನೋಡ್ನೋದ್ತದೆ
ಅದ್ಯಾಕೋ ಮನಸು ಮೊನ್ನೆಯಿಂದ ಮುದುಮುದ್ದು ಮಾತಾಡ್ತದೆ.

ಸೀರೇಲಿ ಹುಡ್ಗಿರ ನೋಡಲೆಬಾರದು ನಿಲ್ಲಲ್ಲ ಟೆಂಪ್ರೆಚರು
ಸ್ಕೂಲಲಿ ಹೇಳಿಕೊಡಬಹುದಿತ್ತು ಹೇಳಲಿಲ್ಲ ನಮ್ಮ ಟೀಚರು
ನನ್ನ ಎರಡು ಕಣ್ಣು ಒಟ್ಟೊಟ್ಟಿಗೆ ನಗ್ತಿದ್ವು
ಒಟ್ಟೊಟ್ಟಿಗೆ ಅಳತಿದ್ವು ಒಟ್ಟೊಟ್ಟಿಗೆ ಮಿಂಚ್ತಿದ್ವಲ್ಲ
ಸುಂದರಿ ಎಂದವೋ ಕಂಗಳು ದೋಸ್ತಿಯ ಮರೆತವು ಕಂಗಳೋ
ಒಂದೇ ಒಂದು ಸಣ್ಣ ತಪ್ಪು ಮಾಡುವಾಸೆ ಇವಳು ಒಪ್ಪಿಕೊಂಡರೆ
ಏನು ಪನಿಶುಮೆಂಟು ಆಗಬಹುದು ಒಮ್ಮೆ ಕೆನ್ನೆ ಕಚ್ಚಿಬಿಟ್ಟರೆ
ಪುಕ ಪುಕ ಪುಕ ಯಾಕೋ ಪುಕ ಪುಕ
ಅದೆಷ್ಟೇ ಬೇಡ ಅಂದ್ರು ತೋಳು ತಾನಾಗೆ ಚಾಚ್ಕೊಂತದೆ
ಅದೆಷ್ಟೇ ಬೇಕು ಅಂದ್ರು ಕಿಸ್ಸು ಪೋಸ್ಟ್ ಪೋನು ಆಗೋಗ್ತದೆ ತತ್ತರಿಕೆ

ಚೆನ್ನಾಗಿತ್ತು ಜೀವನ ಏಕ್ದಮ್ಮು ಲವ್ವಾಗಿ
ಎದೆಯಲ್ಲ ಕಾದಾಗಿ ರೋಡೆಲ್ಲಾ ಹೂವಾಯ್ತಲ್ಲಾ
ಗರ್ಲ್ ಫ್ರೆಂಡ ಬಂದರೆ ಬಾಳಿಗೆ
ಫ್ಯೂಚರು ತುಪ್ಪದ ಹೋಳಿಗೆ
ಚೂರು ಕಿರಿಕ್ಕು ಆಗಬಾರದು
ಪ್ರೀತಿಯಲ್ಲಿ ನೋವು ಅದಾಗೇ ಆಗ್ತದೆ
ಏನು ನಡಿದೆ ಇದ್ರೂ ಮೈಕೈ ನೋವು
ಯಾವ ಮುಲಾಮು ಸಿಗ್ತದೆ
ಮುಖಾ ಲಕಾ ಲಕಾ ಆಹಾ ಏನೂ ಸುಖ
ಅದೆಷ್ಟೇ ಬೇಡ ಅಂದ್ರು ನೈಟು
ಮಲ್ಗೊದೆ ಲೇಟ್ ಆಗ್ತದೆ
ಅದೆಷ್ಟೇ ಜಲ್ದಿ ಎದ್ರು ಬೆಳಗ್ಗೆ ಹನ್ನೊಂದು ಆಗಿರ್ತದೆ

ಸೀರೇಲಿ ಹುಡ್ಗಿರ ನೋಡಲೆಬಾರದು ನಿಲ್ಲಲ್ಲ ಟೆಂಪ್ರೆಚರು
ಸ್ಕೂಲಲಿ ಹೇಳಿಕೊಡಬಹುದಿತ್ತು ಹೇಳಲಿಲ್ಲ ನಮ್ಮ ಟೀಚರು


No comments:

Post a Comment