ಮುತ್ತೇ ಪ್ರಥಮ..
ಚಲನ ಚಿತ್ರ: ಯುಗ ಪುರುಷ (1989)ನಿರ್ದೇಶನ: ಡಿ. ರಾಜೇಂದ್ರ ಬಾಬು
ಸಾಹಿತ್ಯ / ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಿ., ವಾಣಿ ಜಯರಾಂ
ನಟನೆ: ರವಿಚಂದ್ರನ್, ಖುಷ್ಬೂ,
ರಾಮಕೃಷ್ಣ, ಮೂನ್ ಮೂನ್ ಸೇನ್

ಮುತ್ತೇ ಪ್ರಥಮ.. ಅದುವೇ ಜಗದ ನಿಯಮ
ಮದುವೇ ಪ್ರಥಮ.. ಅದುವೇ ಜನರ ನಿಯಮ
ಆ ಸೂರ್ಯ ಕಿರಣಗಳು.. ಹಸಿರು ಭೂಮಿಯನು ಚುಂಬಿಸದೇ
ಸಾಗರದ ಅಲೆಗಳಿವು.. ಮರಳ ತೀರವನು ಚುಂಬಿಸದೇ
ಝೇಂಕರಿಸೋ ದುಂಬಿಗಳು.. ನಗುವ ಹೂಗಳನು ಮುದ್ದಿಸದೇ
ಮುತ್ತೇ ಪ್ರಥಮ.. ಅದುವೇ ಜಗದ ನಿಯಮ
ಮದುವೇ ಪ್ರಥಮ.. ಅದುವೇ ಜನರ ನಿಯಮ
ಮದುವೇ ಪ್ರಥಮ.. ಅದುವೇ ಜನರ ನಿಯಮ
ಆ ಸೂರ್ಯ ಕಿರಣಗಳು.. ಹಸಿರು ಭೂಮಿಯನು ಚುಂಬಿಸದೇ

ಝೇಂಕರಿಸೋ ದುಂಬಿಗಳು.. ನಗುವ ಹೂಗಳನು ಮುದ್ದಿಸದೇ
ಮುತ್ತೇ ಪ್ರಥಮ.. ಅದುವೇ ಜಗದ ನಿಯಮ
ಮದುವೇ ಪ್ರಥಮ.. ಅದುವೇ ಜನರ ನಿಯಮ
ತಣ್ಣನೆ ಗಾಳಿ ಇದು ಬೀಸುತಿದೆ..
ನಿನ್ನಯ ಮೈ ಸಿರಿಗೆ ಮುತ್ತಿಟ್ಟಿದೇ
ಸೋಕದ ನಿನ್ನಯ ತುಟಿಗಳ..ನಾ...
ಸೋಕ ಬಾರದೇ.. ಸೋಕ ಬಾರದೇ..
ಸಂಜೆಯ ವೇಳೆ ಇದು ಜಾರುತಿದೇ..
ನಿನ್ನಯ ಸಂಯಮವು ಮಿರುತಿದೇ..
ಮುತ್ತಿನ ಆರತಿ ನೀಡುವೆ ನಾ
ತಾಳಬಾರದೇ.. ತಾಳಬಾರದೇ..
ಮುತ್ತೇ ಪ್ರಥಮ.. ಅದುವೇ ಜಗದ ನಿಯಮ
ಮದುವೇ ಪ್ರಥಮ.. ಅದುವೇ ಜನರ ನಿಯಮ
ನಿನ್ನಯ ಮೈ ಸಿರಿಗೆ ಮುತ್ತಿಟ್ಟಿದೇ
ಸೋಕದ ನಿನ್ನಯ ತುಟಿಗಳ..ನಾ...
ಸೋಕ ಬಾರದೇ.. ಸೋಕ ಬಾರದೇ..
ಸಂಜೆಯ ವೇಳೆ ಇದು ಜಾರುತಿದೇ..
ನಿನ್ನಯ ಸಂಯಮವು ಮಿರುತಿದೇ..
ಮುತ್ತಿನ ಆರತಿ ನೀಡುವೆ ನಾ
ತಾಳಬಾರದೇ.. ತಾಳಬಾರದೇ..
ಮುತ್ತೇ ಪ್ರಥಮ.. ಅದುವೇ ಜಗದ ನಿಯಮ
ಮದುವೇ ಪ್ರಥಮ.. ಅದುವೇ ಜನರ ನಿಯಮ
ಸಾವಿರ ಆಸೆಗಳು ಕಣ್ಣಲಿವೆ..
ಹೀರುವ ದಾರಿಗಳು ಮುತ್ತಲಿದೇ..
ಹಾರುವ ಮನಸಿಗೆ ಚುಂಬನವಾ......
ನೀಡಬಾರದೇ.. ನೀಡಬಾರದೇ..
ದೂರದ ಸ್ನೇಹದಲೆ ಪ್ರೇಮವಿದೇ..
ನೊಡುವ ನೋಟದಲೇ ಮೋಹವಿದೇ..
ಸೇರಲು ಕಾಯುವ ವಿರಹದಲೇ..
ಆಸೆ ತೀರದೇ.. ಆಸೇ ತಿರದೇ..
ಮುತ್ತೇ ಪ್ರಥಮ.. ಅದುವೇ ಜಗದ ನಿಯಮ
ಮದುವೇ ಪ್ರಥಮ.. ಅದುವೇ ಜನರ ನಿಯಮ
ಆ ಸೂರ್ಯ ಕಿರಣಗಳು.. ಹಸಿರು ಭೂಮಿಯನು ಚುಂಬಿಸದೇ.
ಸಾಗರದ ಅಲೆಗಳಿವು.. ಮರಳ ತೀರವನು ಚುಂಬಿಸದೇ.
ಝೇಂಕರಿಸೋ ದುಂಬಿಗಳು.. ನಗುವ ಹೂಗಳನು ಮುದ್ದಿಸದೇ..

*********************************************************************************
ಸಂಗೀತವೇ ನನ್ನ ದೇವರು
ಸಾಹಿತ್ಯ / ಸಂಗೀತ : ಹಂಸಲೇಖ
ಗಾಯನ : ಎಸ್. ಪಿ. ಬಾಲಸುಬ್ರಮಣ್ಯಂ
Hi! Folks Welcome..
ಲಾಲ ಲಾಲ ಲ ಲಲ
ಲಾಲ ಲಾಲ ಲ ಲಲ
ಪೂರ್ವದ ಜನ್ಮವು ಯಾವುದು..
ಹಾಡುವ ಪುಣ್ಯವು ಯಾರದು.. ಯಾರದು..
ನನ್ನದು.. ನನ್ನದು...
ನನ್ನದು.. ನನ್ನದು...
ಸಂಗೀತವೇ ನನ್ನ ದೇವರು
ಚಪ್ಪಾಳೆಯೇ ನನ್ನ ಉಸಿರು..
ಪೂರ್ವದ ಜನ್ಮವು ಯಾವುದು..
ಪೂರ್ವದ ಜನ್ಮವು ಯಾವುದು..
ಹಾಡುವ ಪುಣ್ಯವು ಯಾರದು..
ಈ ದಿನ ಈ ಜನ ನನ್ನದು.. ನನ್ನದು...
ಸಂಗೀತವೇ ನನ್ನ ದೇವರು ಚಪ್ಪಳೆಯೇ ನನ್ನ ಉಸಿರು..
ಸಂಗೀತವೇ ನನ್ನ ದೇವರು ಚಪ್ಪಳೆಯೇ ನನ್ನ ಉಸಿರು..
ಈ ನಿಮ್ಮ ಪ್ರೀತಿಯನು ಮರೆಯಲಾಗದು
ಸಂಗೀತವೇ ನನ್ನ ದೇವರು ಚಪ್ಪಳೆಯೇ ನನ್ನ ಉಸಿರು..
ಸಂಗೀತವೇ ನನ್ನ ದೇವರು ಚಪ್ಪಳೆಯೇ ನನ್ನ ಉಸಿರು..
ಒಮ್ಮೆ ಹೋಳಿ ಹುಣ್ಣಿಮೆಯ ದಿವಸಾ ಚಂದಿರ ಬರದೆ ಕೆಟ್ಟಿತು ಎಲ್ಲಾ ಕೆಲಸ..
ಪ್ರೇಮಿಗಳು.. ಜೋಡಿಗಳು.. ನನ್ನ ಹತ್ತಿರ ಬಂದು ಸೇರಿದರು
ಭೂಮಿಯಲಿ ಪ್ರೀತಿಸಲು ಸ್ಪೂರ್ತಿ ಇಲ್ಲ ಎಂದು ದೂರಿದರು.
ರಾಗ ರಥದ ಮೆಲೇರಿ ಅವಿತ ಚಂದಿರನ ಸೇರಿ..
ಹಾಡಿಸಿ ಕುಣಿಹಿಸಿ ಅವಿತ ಚಂದಿರನ ಹೊರತಂದೇ..
ಸಂಗೀತವೇ ನನ್ನ ದೇವರು ಚಪ್ಪಳೆಯೇ ನನ್ನ ಉಸಿರು..
ಪ್ರೇಮಿಗಳು.. ಜೋಡಿಗಳು.. ನನ್ನ ಹತ್ತಿರ ಬಂದು ಸೇರಿದರು
ಭೂಮಿಯಲಿ ಪ್ರೀತಿಸಲು ಸ್ಪೂರ್ತಿ ಇಲ್ಲ ಎಂದು ದೂರಿದರು.
ರಾಗ ರಥದ ಮೆಲೇರಿ ಅವಿತ ಚಂದಿರನ ಸೇರಿ..
ಹಾಡಿಸಿ ಕುಣಿಹಿಸಿ ಅವಿತ ಚಂದಿರನ ಹೊರತಂದೇ..
ಸಂಗೀತವೇ ನನ್ನ ದೇವರು ಚಪ್ಪಳೆಯೇ ನನ್ನ ಉಸಿರು..
ಒಮ್ಮೆ ದೇವಲೋಕದಲೀ ನಡೆದ ನಾಟ್ಯ ನೋಡಲೆಂದು ಇಂದ್ರ ಕರೆದ
ನನ್ನ ಜೋತೆ.. ನನ್ನ ಜನ.. ಕರೆದು ತರಲೇ ಎಂದು ಕೇಳಿದೆನು.
ಸ್ವರ್ಗದಲಿ ತರಲೇ ಬೇಡ ಎಂದು ಹೇಳಿದನು.
ಇವರು ಇರದ ಆ ಸ್ವರ್ಗ ನನಗೆ ಬೇಡವೊ ಮೂರ್ಖ.
ಈ ತನು ಈ ಮನ ನನ್ನದು.. ನನ್ನದು...
ಸಂಗೀತವೇ ನನ್ನ ದೇವರು ಚಪ್ಪಳೆಯೇ ನನ್ನ ಉಸಿರು..
ಈ ನಿಮ್ಮ ಪ್ರೀತಿಯನು ಮರೆಯಲಾಗದು
ರಪ್ಪಾಪ ರಪ್ಪಾಪ ರಪ್ಪಾಪ ರಪ್ಪಾಪಪಪ
*********************************************************************************
ಶ್ರೀ ಕೃಷ್ಣ ಬಂದನು
ಸಾಹಿತ್ಯ / ಸಂಗೀತ : ಹಂಸಲೇಖ
ಗಾಯನ : ಎಸ್. ಪಿ. ಬಾಲಸುಬ್ರಮಣ್ಯಂ
ಹೇಯ್ ಹೇಯ್ ಹೇಯ್ ಹೇಯ್
ಸಂಗಡಿಗರು: ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ ಗೋಪೇರಾ ಹಿಂಡು ಕಾಯಲೂ
ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ ಬೆಂಡೆತ್ತಿ ಬ್ರೇಕು ಹಾಕಲು
ಎಸ್.ಪಿ.ಬಿ : ಹೋ..ಓ ಬಳ್ಳಿ ಬಾಲೆಯರೇ ನೀವಿದ್ದರೆ ಕೋಲಾಟಾ
ಹೋ..ಓ ಮಳ್ಳಿ ನಾರಿಯರೇ ನೀವಿದ್ದರೆ ಕಾದಾಟಾ
ಸಂಗಡಿಗರು: ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ ಗೋಪೇರಾ ಹಿಂಡು ಕಾಯಲು
ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ ಬೆಂಡೆತ್ತಿ ಬ್ರೇಕು ಹಾಕಲು
ಮಥುರಾ ಸೆಂಟ್ರಲ್ ಜೇಲಿನಲ್ಲಿ ನೀ ಹುಟ್ಟಿದೆ ನೀ ಹುಟ್ಟಿದೆ
ಆ ಕಂಸನಾ pieceಉ ಮಾಡಲು ಆ ಊರಿಗೆ peaceಉ ನೀಡಲು
ಎಸ್.ಪಿ.ಬಿ: ಬೃಂದಾವನದ ಪಾರ್ಕಿನಲ್ಲಿ ಓಡಾಡಲು ಹಾಡೇಳಲು ನಾ ಹುಟ್ಟಿದೆ ಜಾಲಿ ಮಾಡಲು
ಕರೆ ಬಂತು ಕೇಡಿಗಳಾ ಕೊಲ್ಲಲು ಹಾ
ಸಂಗಡಿಗರು: ನೀನೇನಯ್ಯ ಮಾಯಾಗಾರನು ಕತ್ತಿಗನ್ನಿಲ್ಲದೇನೆ ಗೆಲ್ಲಬಲ್ಲೆಯು
ಎಸ್.ಪಿ.ಬಿ: ಘುಮ್ಮೆಂದಿದೆ ಕಿವಿಯೆಲ್ಲವು ಬಾಲೆರ ಹೊಗಳು ಮಾತು ಕೇಳಿ ಕೇಳಿ

ಹೋ..ಓ ಬಳ್ಳಿ ಬಾಲೆಯರೇ ನೀವಿದ್ದರೆ ಕೋಲಾಟಾ ಹಹ್ಹಾಹಹ್ಹಾ
ಹೋ..ಓ ಮಳ್ಳಿ ನಾರಿಯರೇ ನೀವಿದ್ದರೆ ಕಾದಾಟ ಹಹ್ಹಹ್ಹಹ್ಹಾ
ಹೋ..ಓ ಮಳ್ಳಿ ನಾರಿಯರೇ ನೀವಿದ್ದರೆ ಕಾದಾಟ ಹಹ್ಹಹ್ಹಹ್ಹಾ
ಸಂಗಡಿಗರು: ಸೀರೆ ಕದಿಯೋ ಹ್ಯಾಂಡಿನಲ್ಲಿ ಸೀರೆ ಕೊಡುವೆ ಮಾನಾ ತರುವೆ
ನೂರಾ ಒಂದು ವಿಲ್ಲನ್ ಮಧ್ಯದಲ್ಲಿ ಮಾನಾ ಹೋಗೊ ಅಂತ ಟೈಮಿನಲ್ಲಿ
ಎಸ್.ಪಿ.ಬಿ: ನನ್ನ ಚಿಂತೆ ಯಾರಿಗಿಲ್ಲಾ ಊರ ಚಿಂತೆ ಎಲ್ಲಾ ಕಂತೆ
ಬಂದು ಬಿತ್ತು ನನ್ನ ಮೇಜಿನಲ್ಲಿ ಅರ್ಧ ಜಾಲಿ ಹೋಯ್ತು ಬಾಳಿನಲ್ಲಿ
ಸಂಗಡಿಗರು: ನಿನಗೇನಯ್ಯ ಮೋಜುಗಾರನು ಹತ್ತು ಹದಿನಾರು ನೂರು ಗೋಪೇಯರು
ಎಸ್.ಪಿ.ಬಿ: ಘುಮ್ಮೆಂದಿದೆ ಕಿವಿಯೆಲ್ಲವು ಬಾಲೆರ ಹೊಗಳು ಮಾತು ಕೇಳಿ ಕೇಳಿ
ಹೇಯ್ ತರತ್ತತ್ ತರತ್ತತ್ ಬಳ್ಳಿ ಬಾಲೆಯರೇ ನೀವಿದ್ದರೆ ಕೋಲಾಟಾ
ಟಟ್ಟಟ್ಟಟ ತಕಿಟ ತಕಿಟ ತತ್ ದಿಂತಾ ಹಾ ಮಳ್ಳಿ ನಾರಿಯರೇ ನೀವಿದ್ದರೆ ಕಾದಾಟ ಹ್ಹಾ..ಆ

ಸಂಗಡಿಗರು: ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ
ಎಸ್.ಪಿ.ಬಿ: ರಪಪ್ಪಾ
ಸಂಗಡಿಗರು: ಗೋಪೇರಾ ಹಿಂಡು ಕಾಯಲೂ
ಎಸ್.ಪಿ.ಬಿ: ತುರುತ್ತುತೂ
ಸಂಗಡಿಗರು: ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ
ಎಸ್.ಪಿ.ಬಿ: ಹೇಹೇಹ್ಹೇ
ಸಂಗಡಿಗರು: ಬೆಂಡೆತ್ತಿ ಬ್ರೇಕು ಹಾಕಲು
ಎಸ್.ಪಿ.ಬಿ: ಹ್ಹಹ್ಹಹ್ಹಾ
ಎಸ್.ಪಿ.ಬಿ: ತುರುತ್ತುತೂ
ಸಂಗಡಿಗರು: ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ
ಎಸ್.ಪಿ.ಬಿ: ಹೇಹೇಹ್ಹೇ
ಸಂಗಡಿಗರು: ಬೆಂಡೆತ್ತಿ ಬ್ರೇಕು ಹಾಕಲು
ಎಸ್.ಪಿ.ಬಿ: ಹ್ಹಹ್ಹಹ್ಹಾ
ಯಾವುದೋ... ಈ ಬೊಂಬೇ
ಸಾಹಿತ್ಯ / ಸಂಗೀತ: ಹಂಸಲೇಖ
ಗಾಯನ : ಎಸ್. ಪಿ. ಬಾಲಸುಬ್ರಮಣ್ಯಂ
1. 2. 3. 4. ಜುಮ್. ಜುಜುಮ್..
ಜುಮ್ ಜು ಜುಮ್..ನಿಸಗರಿಸ..
ಈ ತಾಳ ಇದ್ದರೇ ಹಾಡು ಬಾರದೇ..
ಈ ಹಾಡು ಇದ್ದರೇ ನಿದ್ದೆ ಬಾರದೇ..
ಆ ನಿದ್ದೆ ಬಂದರೇ ಕನಸು ಬಾರದೇ..
ಆ ಕನಸಿನಲ್ಲಿ.. ಈ ಬೊಂಬೆ ಕಾಣದೇ
ಯಾವುದೋ... ಈ ಬೊಂಬೆ ಯಾವುದೋ..
ಯಾವುದೋ... ಈ ಬೊಂಬೆ ಯಾವುದೋ..
ಯಾವುದೋ ಈ ಅಂದ ಯಾವುದೋ..
ಬೇಲೂರಿನ ಶಿಲೆಯೋ.. ಶಾಂತಲೆಯ ಕಲೆಯೋ..
ಕಾಳಿದಾಸನ ಪ್ರೇಮ ಗೀತೆಯೋ..
ಕಾಳಿದಾಸನ ಪ್ರೇಮ ಗೀತೆಯೋ..
ಕಾಳಿದಾಸನ ಪ್ರೇಮ ಗೀತೆಯೋ..
ಠೇವ್‍ಡಠಾವ್ ಠೇವ್‍ಡಠಾವ್
ಠೇವ್‍ಡಠಾವ್ ಠಾ...ಆಆಆಆಆ..
ಲಾಲ.. ಲಲ್ಲ.. ಲಾಲ.. ಲಲ್ಲ..
ಲಾಲ.. ಲಲ್ಲ.. ಲಾಲಲ್ಲ್ಲ
ಠೇವ್‍ಡಠಾವ್ ಠೇವ್‍ಡಠಾವ್
ಠೇವ್‍ಡಠಾವ್ ಠಾ...ಆಆಆಆಆ..
ಲಾಲ.. ಲಲ್ಲ.. ಲಾಲ.. ಲಲ್ಲ..
ಲಾಲ.. ಲಲ್ಲ.. ಲಾಲಲ್ಲ್ಲ
ನೂರಾರು ಹೂಗಳಿದ್ದರೂ ಈ ಅಂದ ಬೇರೆ.
ಆ ತಾರೆ ಮಿನುಗುತಿದ್ದರೂ..
ಈ ಕಣ್ಣೇ ಬೇರೆ... ನೀನ್ಯಾರೇ...
ನೀನಿಲ್ಲಿ ಸುಮನಿದ್ದರೂ ಒಳಮಾತೇ ಬೇರೇ..
ಹಾಡಲ್ಲೇ ನೀನು ಇದ್ದರೂ
ಎದುರಿರುವ ತಾರೇ.. ಹಲೋ.. ನೀನ್ಯಾರೇ.
ನನ್ನ ಮನದ ಪ್ರೇಮ ರಾಗಕೇ
ನಿನ್ನ ಎದೆಯ ತಾಳ ಇದ್ದರೇ...
ನಾನು ಹಾಡೋ ನೂರು ಭಾವಕೆ
ನೀನು ಒಮ್ಮೆ ನೋಡಿ ನಕ್ಕರೇ ಸಾಕು....
ಲಾಲ.. ಲಲ್ಲ.. ಲಾಲಾ ಲ ತನನ ತಾನಾನ ತಾನ
ಆ ತಾರೆ ಮಿನುಗುತಿದ್ದರೂ..
ಈ ಕಣ್ಣೇ ಬೇರೆ... ನೀನ್ಯಾರೇ...
ನೀನಿಲ್ಲಿ ಸುಮನಿದ್ದರೂ ಒಳಮಾತೇ ಬೇರೇ..
ಹಾಡಲ್ಲೇ ನೀನು ಇದ್ದರೂ
ಎದುರಿರುವ ತಾರೇ.. ಹಲೋ.. ನೀನ್ಯಾರೇ.
ನನ್ನ ಮನದ ಪ್ರೇಮ ರಾಗಕೇ
ನಿನ್ನ ಎದೆಯ ತಾಳ ಇದ್ದರೇ...
ನಾನು ಹಾಡೋ ನೂರು ಭಾವಕೆ
ನೀನು ಒಮ್ಮೆ ನೋಡಿ ನಕ್ಕರೇ ಸಾಕು....
ಲಾಲ.. ಲಲ್ಲ.. ಲಾಲಾ ಲ ತನನ ತಾನಾನ ತಾನ
ಯಾವುದೋ.. ಈ ಬೊಂಬೆ ಯಾವುದೋ..
ಯಾವುದೋ..... ಈ ಬೊಂಬೆ ಯಾವುದೋ..
ನೀನ್‍ಯಾರೊ ತಿಳಿಯದಿದ್ದರೂ.. ನನಗೇನೇ ರಾಧೇ..
ಕಲ್ಲಾಗಿ ನಾನು ನಿಂತರೂ..
ಕರಗೀ ನೀರಾದೇ.... ಏಕಾದೇ..
ಈ ಹಾಡು ನಿನ್ನದಾದರೂ..
ರಾಗ ನಾನಾದೇ..
ಯಾರೇನು ಹೇಳದಿದ್ದರೂ..
ನನಗೇ ಜೋತೆಯದೇ.. ಹೇಗಾದೇ...
ಇಂದು ನೆನ್ನೆ ನಾಳೆ ಯಾವುದೂ...
ನನಗೆ ಈಗ ನೆನಪು ಬಾರದು..
ನಿನ್ನ ಬಿಟ್ಟು ನನ್ನ ಮನಸಿದು
ಬೇರೆ ಏನು ಹೇಳಳಾರದು.. ರಾಧೇ..
ಲಲ.. ಲಲ... ಲಾಲಾ.. ಲಾಲಾ..ಲಾ
ಲಲ.. ಲಲ... ಲಾಲಾ.. ಲಾಲಾ..ಲಾ
ಯಾವುದೋ... ಈ ಬೊಂಬೇ ಯಾವುದೋ..
ಉರ್ವಶಿಯ ಕುಲವೊ.. ಮೇನಕೆಯ ಚೆಲುವೋ..
ಯಾವುದೋ ಈ ಅಂದ ಯಾವುದೋ..
ಯಾವುದೋ ಈ ಅಂದ ಯಾವುದೋ..
ಬೇಲೂರಿನ ಶಿಲೆಯೋ.. ಶಾಂತಲೆಯ ಕಲೆಯೋ..
ಕಾಳಿದಾಸನ ಪ್ರೇಮ ಗೀತೆಯೋ..
ಕಾಳಿದಾಸನ ಪ್ರೇಮ ಗೀತೆಯೋ..
ಕಾಳಿದಾಸನ ಪ್ರೇಮ ಗೀತೆಯೋ..
ಠೇವ್‍ಡಠಾವ್ ಠೇವ್‍ಡಠಾವ್
ಠೇವ್‍ಡಠಾವ್ ಠೇವ್‍ಡಠಾವ್
ಠೇವ್‍ಡಠಾವ್ ಠೇವ್‍ಡಡ...ಆಆಆಆಆ..
*********************************************************************************
No comments:
Post a Comment