Thursday, September 13, 2018

ಮನೆದೇವ್ರು (1993)






ಅಪರಂಜಿ ಚಿನ್ನವೋ

ಚಲನ ಚಿತ್ರ: ಮನೆದೇವ್ರು (1993)
ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯನ: ಮನು, ಕೆ. ಎಸ್. ಚಿತ್ರಾ 
ನಿರ್ದೇಶನ: ವಿ. ರವಿಚಂದ್ರನ್ 
ನಟನೆ: ರವಿಚಂದ್ರನ್, ಸುಧಾರಾಣಿ, ಕೆ. ಎಸ್. ಅಶ್ವಥ್ 


ಹೆ: ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವರು
ಗುಲಗಂಜಿ ದೋಷವು ದೋಷವು
ಇರದಾ ಸುಗುಣ ಶೀಲರು
ಉರಿವ ಸೂರ್ಯನು ಅವನ್ಯಾಕೆ,
ಕರಗೊ ಚಂದ್ರನು ಅವನ್ಯಾಕೆ ಹೋಲಿಕೆ.

ಗಂ: ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವತೆ
ಗುಲಗಂಜಿ ದೋಷವು ದೋಷವು
ಇರದಾ ಬಾಳ ಸ್ನೇಹಿತೆ
ಬಾಡೋ ಮಲ್ಲಿಗೆ ಹೂವ್ಯಾಕೆ,
ಶಿಲೆಯ ಬಾಲಿಕೆ ಅವಳ್ಯಾಕೆ ಹೋಲಿಕೆ.

ಹೆ: ಮನದಲ್ಲಿ ನಲಿದಾಡೋ ನಾಯಕ
ನೆನೆದಂತೆ ತಾ ಹಾಡೋ ಗಾಯಕ
ಗಂ: ಕಣ್ಣಲ್ಲೆ ಮಾತಾಡೋ ನಾಯಕಿ
ನಿಜ ಹೇಳಿ ನನ್ನಾಳೊ ಪಾಲಕಿ
ಹೆ: ನಡೆಯಲ್ಲೂ ನುಡಿಯಲ್ಲೂ
ಒಂದೆ ವಿಧವಾದ ಹೋಲಿಕೆ
ಗಂ: ನಗುವಲ್ಲೂ ಮುನಿಸಲ್ಲೂ
ಪ್ರೀತಿ ಒಂದೇನೆ ಕಾಣಿಕೆ. (ಅಪರಂಜಿ)

ಹೆ: ಸುಖವಾದ ಸಂಸಾರ ನಮ್ಮದು,
ನಮ್ಮಲ್ಲಿ ಅನುಮಾನ ಸುಳಿಯದೂ
ಗಂ: ಪ್ರತಿರಾತ್ರಿ ಆನಂದ ವಿರಸವೇ,
ವಿರಸಕ್ಕೆ ಕೊನೆ ಎಂದೂ ಸರಸವೇ
ಹೆ: ಕೋಪಕ್ಕೆ ತಾಪಕ್ಕೆ ಎಣ್ಣೆ
ಎರೆಯೋಲ್ಲ ಇಬ್ಬರೂ
ಗಂ: ಬಡತನವೇ ಸುಖವೆಂದು
ಒಬ್ಬರ ಪರವಾಗಿ ಒಬ್ಬರೂ (ಅಪರಂಜಿ)

*********************************************************************************


ಜೀವನ ಜೀವನ

ಸಾಹಿತ್ಯ : ಹಂಸಲೇಖ 
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ 


ಜೀವನ ಜೀವನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ
ಒಮ್ಮೆ ನೋವು ಒಮ್ಮೆ ನಲಿವು
ಒಮ್ಮೆ ಸೋಲು ಒಮ್ಮೆ ಗೆಲುವು
ಒಮ್ಮೆ ಸರಸ ವಿರಸ ಬೆಸುಗೆ ಬಿರುಕು

ಜೀವನ ಜೀವನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ
ಮದುವೆ ದೇಹದಾ ಜೊತೆ
ಬದುಕು ಲೋಕದ ಜೊತೆ
ಪ್ರಣಯ ವಯಸಿನೆ ಜೊತೆ
ಪ್ರೀತಿ ಮನಸಿನ ಜೊತೆ
ಒಮ್ಮೆ ನೆರಳು ಒಮ್ಮೆ ಬಿಸಿಲು
ಒಮ್ಮೆ ಬೇವು ಒಮ್ಮೆ ಬೆಲ್ಲ
ಒಮ್ಮೆ ಒಡಕು ಸಿಡುಕು ಸ್ವರ್ಗ ನರಕ

ಜೀವನ ಜೀವನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ

*********************************************************************************

ನಾನೇ ನಿನ್ನ ನಾನೇ ನಿನ್ನ

ಸಾಹಿತ್ಯ: ಹಂಸಲೇಖ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಮ್, ಎಸ್. ಜಾನಕಿ 


ನಾನೇ ನಿನ್ನ ನಾನೇ ನಿನ್ನ
ತುಂಬಾ ತುಂಬಾ ಪ್ರೀತಿ ಮಾಡೋದು 
ಹೌದು ಚಿನ್ನ  ಹೌದೆ ಚಿನ್ನ
ನೀನೆ ನನ್ನ ಪ್ರೀತಿ ಮಾಡೋದು
ಹೆಣ್ಣೇ ತಾನೇ ಹೆಣ್ಣೇ ತಾನೇ
ಗಂಡನಿಗಾಗಿ ಮಿಡಿಯೋ ವೀಣೆ
ಹೌದು ಜಾಣೆ ಹೌದೇ ಜಾಣೆ
ಮಿದ್ಯೋ ವೀಣೆ ನುಡಿಸಲೇನೆ 

ಕಂಬನಿಯೊಳಗೆ ಕಣ್ಣಿರಲು ಸರಸದ ಹುಸಿಮಾತು
ಅಳುವಿನ ನಡುವೆ ನಗಿಸುವುದೇ ಅಂತಃಪುರ ಗೀತೆ
ಕೆಣಕೊದ್ಯಾಕೆ.. ಅಳಿಸೋದ್ಯಾಕೆ..
ನಗಿಸೋದಕ್ಕೆ ಸೋಲೋದ್ಯಾಕೆ... 
ಪ್ರೀತಿ ಮುಂದೆ... ಸೋಲೋದೊಂದೇ
ಕಾಲ ಮರೆಸೋ ಮಂತ್ರ ಒಂದೇ

ನೀನೆ ನನ್ನ ನೀನೆ ನನ್ನ...
ತುಂಬಾ ತುಂಬಾ ಪ್ರೀತಿ ಮಾಡೋದು ...........

ಇಲ್ಲಾ ತಾಯಿ ಸೀತಾ ಮಾಯಿ..
ನೀನೆ ನನ್ನ ಪ್ರೀತಿ ಮಾಡೋದು
ಪ್ರೀತಿ ಮಾಡಿ ಅಡಿಗೆ ಮಾಡಿ
ತಿನಿಸೋ ನಲ್ಲ ಎಲ್ಲೂ ಇಲ್ಲ
ತಾಳಿ ಕಟ್ಟಿ ಬಾಗಿಲು ತಟ್ಟಿ
ಕಾಯೋರೆಲ್ಲ ನಿಮಗೆ ಬೆಲ್ಲ 
ಕೋಪದ ನಡುವೆ ಹಾಡುವುದೇ ಅಂತಃಪುರ ಗೀತೆ ..........
ವಿರಹದ ನಡುವೆ ಪತಿಯಿರಲು ಸತಿಯದು ಬರಿ ಮಾತೆ.............
ಇಂದ್ರ ಕಾದ.... ಚಂದ್ರ ಕಾದ.....
ಹೆಣ್ಣಇಂದಾಗಿ . ಶಿವನು ಕಾದ .. 
ಹೆಣ್ಣು ಕೊಟ್ಟ .....ಆಸೆ ಕೊಟ್ಟ...
ಬ್ರಹ್ಮ  ನಡುವೆ ...ಈ ಗಡುವು ಇಟ್ಟ ...

*********************************************************************************

No comments:

Post a Comment