ಚಲನ ಚಿತ್ರ: ಪ್ರೀತ್ಸೋದ್ ತಪ್ಪಾ...? (1998)
ಸಾಹಿತ್ಯ & ಸಂಗೀತ: ಹಂಸಲೇಖ
ಗಾಯಕರು: ಎಲ್.ಎನ್. ಶಾಸ್ತ್ರೀ, ಅನುರಾಧ ಶ್ರೀರಾಮ್
ನಿರ್ದೇಶನ: ವಿ. ರವಿಚಂದ್ರನ್
ನಟನೆ: ವಿ. ರವಿಚಂದ್ರನ್, ಶಿಲ್ಪಾ ಶೆಟ್ಟಿ,
ಹ ಹ ಹ ಹ... ಹ ಹ.
ಹ ಹ ಹ ಹಾ ಹಾ...
ಒಂದು ಮೋಡ ಒಂದು ಹನಿಯ ಚಲ್ಲಿ.
ಒಂದು ಕಡಲ ಕೆಣಕ ಬಲ್ಲದೇನು.
ಪೂರ್ಣಚಂದ್ರ ಪೂರ್ಣ ಭೂಮಿಯನ್ನು
ಒಂದೇ ಸಾರಿ ಬೆಳಗ ಬಲ್ಲನೇನು.
ಪ್ರಿಯೇ ಓ ನನ್ನ ಪ್ರಿಯೇ.
ನಾನು ನೀನೂ ಬೇರೊಬ್ಬರಿಂದ
ನಾನು ನೀನೂ ಬೇರೊಬ್ಬರಿಂದ
ದೂರ ಅಗೋ ಮಾತೇ ಒಂದು ಭ್ರಮೆ
ಒ ಪ್ರಿಯೇ ಭ್ರಮೆ.

ಹ ಹ ಹ ಹಾ ಹಾ...
ದೂರ ದೂರ ದೇಹವಿದ್ದರೇನು
ಜೀವ ಜೀವ ಒಂದೇ ಅಲ್ಲವೇನು
ಸ್ವಲ್ಪ ದಿವಸ ದೂರ ಇದ್ದರೇನು
ಕಣ್ಣಾ ಮುಚ್ಚಿ ನೆನೆದರಾಗದೇನು
ಜ್ವರ ...ಇದೊಂದು ಜ್ವರ
ಪ್ರೀತಿಯಲ್ಲಿ ವಿರಹ ಒಂದು
ಪ್ರೀತಿಯಲ್ಲಿ ವಿರಹ ಒಂದು
ಬಂದು ಹೋಗೋ
ಒಂದು ಸಣ್ಣ ಜ್ವರ ಒಂಥರ ಜ್ವರ.
ತಾನು ಪ್ರೀತಿ ಮಾಡುವಾಗ ಮಾಡಿ
ನಮಗೆ ಬೇಡ ಅನ್ನೋ ಲೋಕ ನೋಡಿ
ಅವರ ತಪ್ಪು ಹೇಳಲೇ ಬೇಕು ಹಾಡಿ
ಪ್ರೀತಿ ತಾನೇ ನಮಗೆ ಜೀವನಾಡಿ
ತಪ್ಪಾ ಹೇಳೋದು ತಪ್ಪಾ
ಪ್ರೀತಿಯಲ್ಲಿ ನಾವು ಎಷ್ಟು
ಪ್ರೀತಿಯಲ್ಲಿ ನಾವು ಎಷ್ಟು
ಗಟ್ಟಿಯಂಥ ತೋರಿಸೋದು ತಪ್ಪಾ
ಪ್ರೀತ್ಸೋದು ತಪ್ಪಾ...
ತಪ್ಪಾ ಪ್ರೀತ್ಸೋದ್ ತಪ್ಪಾ
ಹ ಹ ಹ... ಹಾ ಹಾ
ತಪ್ಪಾ ಪ್ರೀತ್ಸೋದ್ ತಪ್ಪಾ
ಹ ಹ ಹ ಹಾ ಹ
ತಪ್ಪಾ ಪ್ರೀತ್ಸೋದ್ ತಪ್ಪಾ
ಹ ಹ ಹ ಹಾ ಹಾ ಹಾ ಹಾ ಹಾ.
********************************************************************************
ಚೋರಿಯಾಗಿದೆ ನನ್ನ ದಿಲ್
ಚಲನ ಚಿತ್ರ: ಪ್ರೀತ್ಸೋದ್ ತಪ್ಪಾ? (1998)
ನಿರ್ದೇಶನ: ವಿ. ರವಿಚಂದ್ರನ್
ಸಂಗೀತ & ಸಾಹಿತ್ಯ: ಹಂಸಲೇಖ
ಗಾಯಕರು: ಕೆ. ಎಸ್. ಚಿತ್ರಾ & ಎಸ್ ಪಿ. ಬಾಲು
ನಟನೆ: ರವಿಚಂದ್ರನ್, ಶಿಲ್ಪಾ ಶೆಟ್ಟಿ, ಲೋಕೇಶ್, ಲಕ್ಷ್ಮೀ
ಚೋರಿಯಾಗಿದೆ ನನ್ನ ದಿಲ್
ಕಳೆದುಕೊಳ್ಳೋದೆ ಒಂದು ಥ್ರಿಲ್
ಕಳ್ಳಿ ಸಿಕ್ಕಳು ಕದ್ದ ಕೈಯ್ಯಲಿ
ಅವಳ ಪಾಡು ಹೇಗೆ ಹೇಳಲಿ
ಮರೆತು ಅವಳ ಹೃದಯ ಕೊಟ್ಟಳೊ
ಮನೆಯೆ ಮೌನವಾಗಿದೆ ಮೌನ ಮಾತನಾಡಿದೆ
ಹಾಡು ಹಾಡಿದೆ ಈ ದಿಲ್
ಕಳೆದುಕೊಳ್ಳೋದೆ ಒಂದು ಥ್ರಿಲ್
ಕಳ್ಳಿ ಸಿಕ್ಕಳು ಕದ್ದ ಕೈಯ್ಯಲಿ
ಅವಳ ಪಾಡು ಹೇಗೆ ಹೇಳಲಿ
ಮರೆತು ಅವಳ ಹೃದಯ ಕೊಟ್ಟಳೊ
ಮನೆಯೆ ಮೌನವಾಗಿದೆ ಮೌನ ಮಾತನಾಡಿದೆ
ಹಾಡು ಹಾಡಿದೆ ಈ ದಿಲ್
ಕಣ್ಣು ಕುಕ್ಕುತಾ ಇದೆ ಆಸೆ ಉಕ್ಕುತಾ ಇದೆ
ಪ್ರೀತಿ ಬೇಡಿದೆ ಈ ದಿಲ್
ನನ್ನ ನಿನ್ನ ಈ ಮೊದಲ ನೋಟವೆ
ಪ್ರೇಮ ಶಾಲೆಯ ಪ್ರಥಮ ಪಾಠವೆ
ದೇವರಾಣೆ ಮುಂದೆ ತಿಳಿಯದು
ಬಾರೆ ಬೇಗ ಹೋಗುವ ಪ್ರೇಮ ಶಾಲೆ ಸೇರುವ
ಅ ಆ ಇ ಈ ತಿದ್ದಲಿ ಈ ದಿಲ್
ಯಾರು ಗುರುಗಳೊ ಪ್ರೀತಿಗೆ ಯಾವ ಪಾಠವೋ ಮನಸಿಗೆ
ಎಂದು ಕೇಳಿದೆ ಈ ದಿಲ್
ನಾಲ್ಕು ಕಣ್ಗಳೆ ಪ್ರೇಮ ಪುಟಗಳು
ನಾಲ್ಕು ತುಟಿಗಳೆ ಪದ್ಯ ಪದಗಳು
ಪ್ರೀತಿಗ್ಯಾರು ಇಲ್ಲ ಗುರುಗಳು
ಪ್ರೀತಿ ಬೇಡಿದೆ ಈ ದಿಲ್
ನನ್ನ ನಿನ್ನ ಈ ಮೊದಲ ನೋಟವೆ
ಪ್ರೇಮ ಶಾಲೆಯ ಪ್ರಥಮ ಪಾಠವೆ
ದೇವರಾಣೆ ಮುಂದೆ ತಿಳಿಯದು
ಬಾರೆ ಬೇಗ ಹೋಗುವ ಪ್ರೇಮ ಶಾಲೆ ಸೇರುವ
ಅ ಆ ಇ ಈ ತಿದ್ದಲಿ ಈ ದಿಲ್
ಯಾರು ಗುರುಗಳೊ ಪ್ರೀತಿಗೆ ಯಾವ ಪಾಠವೋ ಮನಸಿಗೆ
ಎಂದು ಕೇಳಿದೆ ಈ ದಿಲ್
ನಾಲ್ಕು ಕಣ್ಗಳೆ ಪ್ರೇಮ ಪುಟಗಳು
ನಾಲ್ಕು ತುಟಿಗಳೆ ಪದ್ಯ ಪದಗಳು
ಪ್ರೀತಿಗ್ಯಾರು ಇಲ್ಲ ಗುರುಗಳು
*********************************************************************************
ಸೋನೆ ಸೋನೆ
ಸಾಹಿತ್ಯ : ಹಂಸಲೇಖ
ಗಾಯನ : ಕೆ. ಜೆ. ಯೇಸುದಾಸ್, ಅನುರಾಧಾ ಶ್ರೀರಾಮ್
ಏನಿದು ಮಾಯೆ.. ಏನಿದು ಮಾಯೆ
ಮನಸಿನ ಮುಗಿಲಲಿ ಮಾತಿನ ಮಳೆಯು ತುಂಬಿದೆ
ಹೊರಗೆ ಬಾರದೆ ನಿಂತಿದೆ ಮಿಂಚಿದೆ ಗುಡುಗಿದೆ
ಸೋನೆ ಮಳೆಯಾಗಿ ಆದರೂ ಮೆಲ್ಲ ಮೆಲ್ಲ ಬರಬಾರದೇ?

ಹೊರಗೆ ಬಾರದೆ ನಿಂತಿದೆ ಮಿಂಚಿದೆ ಗುಡುಗಿದೆ
ಸೋನೆ ಮಳೆಯಾಗಿ ಆದರೂ ಮೆಲ್ಲ ಮೆಲ್ಲ ಬರಬಾರದೇ?
ಓ ..... ಸೋನೆ .... ಸೋನೆ ಸೋನೆ ಪ್ರೀತಿಯ ಸೋನೆ
ಈ ಮಳೆ ಹೂಮಳೆ ಪ್ರೀತಿಯ ವರಗಳೆ
ಅಂದದ .... ಧರಣಿಯ ತನುವಿನ ಪಥದಲಿ
ಪ್ರೀತಿಯ ಅಕ್ಷರ ಇಂದು ವೃಂದ ತಾವಾಗಿದೆ
ನಳಿನ ನರ್ತನ ಮಾಡಿದೆ||
ಈ ಬ್ರಹ್ಮಾಂಡವೇ ನಾನು
ನನಗೆ ಸಂಗಾತಿ ನೀನು
ನಿನ್ನ ಪ್ರೀತಿ ತೋಳಲ್ಲಿ ನಾನು
ಕುಂತರೂ ನಿಂತರೂ ನಿನ್ನದೇ ತುಂತುರು
ನೆನೆದಿದೆ ನನ್ನೆದೆ ||
ಕುಂತರೂ ನಿಂತರೂ ನಿನ್ನದೇ ತುಂತುರು
ನೆನೆದಿದೆ ನನ್ನೆದೆ ||
ಸೋನೆ ಸೋನೆ ಪ್ರೀತಿಯ ಸೋನೆ
ಸೋನೆ ಸೋನೆ ಪ್ರೀತಿಯ ಸೋನೆ
ನಿರ್ಮಲ ಕೋಮಲ ಶೀತಲ ಶಾಂತಲ ಕಾವ್ಯದಾ .......
ಕಾವ್ಯದ ಕುಸುರಿಯೇ ಕವನದ ಲಹರಿಯೇ
ಅಂದದ ಪ್ರತಿಮೆಯೇ ನಿನ್ನ ಅಂದ ಛಂದೋಮಯ
ನಿನ್ನ ಭಾವ ವ್ಯಾಕರಣಮಯ ||
ಕಾವ್ಯದ ಕುಸುರಿಯೇ ಕವನದ ಲಹರಿಯೇ
ಅಂದದ ಪ್ರತಿಮೆಯೇ ನಿನ್ನ ಅಂದ ಛಂದೋಮಯ
ನಿನ್ನ ಭಾವ ವ್ಯಾಕರಣಮಯ ||
ಸೋನೆ ಸೋನೆ ಸೋನೆ ಸೋನೆ
ಏನಿದು ಮಾಯೆ ಏನಿದು ಮಾಯೆ
ಮನಸಿನ ಭೂಮಿಲಿ ಋತುವು ಬದಲಾದ ಹಾಗಿದೆ
ಆಸೆ ಮಲೆನಾಡು ಚಿಗುರಿದೆ
ಆಸೆ ಮಲೆನಾಡು ಚಿಗುರಿದೆ
ಓ .... ಕನಸೇ ಓ .... ನನಸೇ
ಬಂಗಾರದಿಂದ
ಸಾಹಿತ್ಯ : ಹಂಸಲೇಖ
ಗಾಯನ : ಕೆ. ಜೆ. ಯೇಸುದಾಸ್, ಅನುರಾಧಾ ಶ್ರೀರಾಂ
ಹೋ ಹೋ ಹೋ ಹೇ ಹೇ ಹೇ....
ಲಾ ಲಲ ಲಲ ಲಾ ತಂದಾನ ತಂದನಾ
ತನ್ ತಂದಾನ ತಂದ ತನ್ ತಂದಾನ ತಂದ
ತನ್ ತಂದಾನ ತಂದ ತನ್ ತಂದಾನ ತಂದ
ತನ್ ತಂದಾನ ತಂದ ತನ್ ತಂದಾನ ತಂದ
ತನ್ ತಂದಾನ ತಂದ ತನ್ ತಂದಾನ ತಂದ
ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ
ದಾಳಿಂಬೆಯಿಂದ ದಂತಾನ ತಂದ
ಮಂದಾರವನ್ನು ಹೆಣ್ಣಾಗು ಎಂದ
ದಾಳಿಂಬೆಯಿಂದ ದಂತಾನ ತಂದ
ಮಕರಂದ ತುಂಬಿ ಅಧರಾನ ತಂದ
ನನ್ನನು ತಂದ ರುಚಿ ನೋಡು ಎಂದ
ತಂದಾನ ತಂದ ತಂದಾನ ತಂದ
ನನ್ನನು ತಂದ ರುಚಿ ನೋಡು ಎಂದ
ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ ||ಪ||
ಚಂದಮಾಮನಿಂದ ಹೊಳಪನು ತಂದ
ಬಾಳೆ ದಿಂಡಿನಿಂದ ನುಣುಪನು ತಂದ
ಅಂದ ಹೈ ಅಂದ ಹೈ ಆಂದ ಚಂದ
ಅಂದ ಹೈ ಅಂದ ಹೈ ಆಂದ ಚಂದ
ಹೊರುವ ಕಂಬದ ಜೋಡಿಗೆ.... ಮಿಂಚಿರಿ... ಎಂದ
ಹಂಸದಿಂದ ಕೊಂಚ ನಡಿಗೆಯ ತಂದ
ಹಂಸದಿಂದ ಕೊಂಚ ನಡಿಗೆಯ ತಂದ
ನವಿಲಿಂದ ಕೊಂಚ ನಾಟ್ಯವ ತಂದ
ನಯವೊ... ಹೈ... ಲಯವೊ... ಹೈ..
ನಯವೊ... ಹೈ... ಲಯವೊ... ಹೈ..
ನಯವೊ ಲಯವೊ ರೂಪಾಲಯವೊ
ರಸಿಕನೆ ಹೇಳು ನೀ ಎಂದ
ರಸಿಕನೆ ಹೇಳು ನೀ ಎಂದ
ತಂಗಾಳಿಯಿಂದ ಸ್ನೇಹಾನ ತಂದ
ಲತೆ ಬಳ್ಳಿ ಇಂದ ಸಿಗ್ಗನು ತಂದ
ಸಿಗ್ಗನು ಇವಳ ನಡುವಾಗು ಎಂದ
ಸಿಗ್ಗನು ಇವಳ ನಡುವಾಗು ಎಂದ
ನಡುವನ್ನು ಅಳಿಸಿ ಎದೆ ಭಾರ ತಂದ
ನನ್ನನ್ನು ಲತೆಗೆ ಮರವಾಗು ಎಂದ
ತಂದಾನ ತಂದ ತಂದಾನ ತಂದ
ನನ್ನನ್ನು ಲತೆಗೆ ಮರವಾಗು ಎಂದ
ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ ||೧||
ಗಂಧ ತಂದನೊ ಗಮರುಗದಿಂದ
ರತಿಯ ತಂದನೊ ಅವನುರದಿಂದ
ಭ್ರಮರ... ಹೈ.. ಅಮರ... ಹೈ...
ಭ್ರಮರ... ಹೈ.. ಅಮರ... ಹೈ...
ಭ್ರಮರ ಅಮರ ಕಂಪನ ಕಡಲ ದೋಣಿಗೆ ಕಾಮನ ತಂದ
ಭೂಮಿ ಸುತ್ತ ಇರೊ ಕಾಂತವ ತಂದ
ಬಾನಿನಿಂದ ಏಕಾಂತವ ತಂದ
ಒಲವು... ಹಾ.. ಚೆಲುವು.. ಹಾ...
ಒಲವು... ಹಾ.. ಚೆಲುವು.. ಹಾ...
ಒಲವು ಚೆಲುವು ಕೂಡೋ ಕಲೆಗೆ
ಘರ್ಷಣೆ ಆಕರ್ಷಣೆ ತಂದ
ಕರಿ ಮೋಡದಿಂದ ಮುಂಗುರುಳ ತಂದ
ಕೋಲ್ಮಿಂಚಿನಿಂದ ರತಿ ನೋಟ ತಂದ
ಜಲಧಾರೆಯಿಂದ ಒಲವನ್ನು ತಂದ
ಜಲಧಾರೆಯಿಂದ ಒಲವನ್ನು ತಂದ
ಒಲವನ್ನು ಓಡೊ ನದಿಯಾಗು ಎಂದ
ನನ್ನನು ನದಿಗೆ ಕಡಲಾಗು ಎಂದ ||೨||
ನನ್ನನು ನದಿಗೆ ಕಡಲಾಗು ಎಂದ ||೨||
ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ
ಮಂದಾರವನ್ನು ಹೆಣ್ಣಾಗು ಎಂದ
ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ
*********************************************************************************
No comments:
Post a Comment