Tuesday, September 11, 2018

ಲಂಕೇಶ್ ಪತ್ರಿಕೆ (2003)


 
ಚಲನ ಚಿತ್ರ: ಲಂಕೇಶ್ ಪತ್ರಿಕೆ (2003)
ಸಾಹಿತ್ಯ: ಕೆ. ಕಲ್ಯಾಣ್ 
ಸಂಗೀತ: ಬಾಬ್ಜಿ-ಸಂದೀಪ್ 
ಗಾಯಕರು: ರಾಜೇಶ್ ಕೃಷ್ಣನ್, ಕವಿತಾ ಕೃಷ್ಣಮೂರ್ತಿ 
ನಿರ್ದೇಶನ: ಇಂದ್ರಜಿತ್ ಲಂಕೇಶ್ 
ನಟನೆ: ದರ್ಶನ್ ತೂಗುದೀಪ್, 
ವಸುಂಧರಾ ದಾಸ್, ಅದಿತಿ ಗೌತ್ರಿಕರ್ 


ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
ನಿನ್ನ ಒಂದು ಸ್ಪರ್ಶ
ನಂಗೆ ನೂರು ವರುಷ
ನಿನ್ನ ನೆರಳಿಗಾಗಿ ಸೋತೇ

ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ

ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ

ಆ ಮೋಡದಿಂದ ಮಳೆಗೆ ಒಂದು ಸೂಕ್ತಿ ಇದೆ
ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ
ನಿನ್ನ ಹೃದಯದಾಣೆ ನನ್ನ ಹೃದಯದಲ್ಲಿ ಪ್ರೀತಿ ಇದೆ
ಆ ಕತೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ
ಇದು ಮರೆಯದ ಹಾಡು, 
ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, 
ವಿರಹಗಳೇ ಗುರುತುಗಳು
ಇದು ಮರೆಯದ ಹಾಡು, 
ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, 
ವಿರಹಗಳೇ ಗುರುತುಗಳು
ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ

ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ

ಸಹಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ
ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ
ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ
ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
ಬಾ ಕ್ಷಮಿಸು ಬಾ ಇಂದೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ

ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ

ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ
ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ

ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ


*********************************************************************************

No comments:

Post a Comment