Saturday, September 15, 2018

ರಣಧೀರ (1987)

ಯಾರೇ ನೀನು ಸುಂದರ ಚೆಲುವೆ

ಚಲನಚಿತ್ರ: ರಣಧೀರ (1987)
ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯಕರು: ಎಸ್.  ಜಾನಕಿ, ಎಸ್.ಪಿ.ಬಾಲಸುಬ್ರಮಣ್ಯಂ 
ನಿರ್ದೇಶನ: ವಿ. ರವಿಚಂದ್ರನ್ 
ನಟರು: ರವಿಚಂದ್ರನ್, ಖುಷ್ಬೂ 


ಯಾರೇ ನೀನು ಸುಂದರ ಚೆಲುವೆ
ಒಬ್ಬಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು
ಯಾರಿಗೆ ಕಾದಿರುವೆ
ಬಾ ಭೂಮಿಯೇ ನಿನ್ನೊಡಲಲ್ಲಿ ನಾನಾಡುವೆನು
ಬಾ ಪ್ರೇಮಿಯೇ ನಿನ್ನೆದೆಯಲ್ಲಿ ಓಲಾಡುವೆನು
ಈ ಅಂದ ಚೆಂದವೆಲ್ಲ ಯಾರಿಗಾಗಿ ಹೇಳೆಯ

ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ ಬಣ್ಣ
ಮಿಂಚಿದೆ ಮಿಂಚುತ ಮಿನುಗಿದೆ
ಸುಂದರ ಸರೋವರಗಳು ನಿನ್ನ ಎರಡು ಕಣ್ಣು
ಕಣ್ಣಲಿ ವಿರಹವೇ ತುಂಬಿದೆ
ಮಳೆಗಾಲ ಬಂದಾಗ ಮೈಮರೆವ ಓ ಸಿಂಗಾರಿ
ಛಳಿಗಾಲ ಬಂದಾಗ ಮುಸುಕೆಳೆವ ಓ ಚಿನ್ನಾರಿ
ಹೀಗೇಕೆ ಕಾದಿರುವೆ ಮನಸಿನ ಚಿಂತೆ ಹೇಳೆಯ

ವಾರೆವಾ ಈ  ಕಾಫಿ ತುಂಬ ಬೊಂಬಾಟಾಗಿದೆ
ಕಾಫಿ ಮಾಡೋ ಹುಡುಗಿ ಕೂಡ ಬೊಂಬಾಟಾಗಿದೆ
ಓ ಮನ್ಮಥ ಪುತ್ರರೆ ನನ್ನ ಹಾಡು ಕೇಳಿದಿರಾ
ಹೌದಮ್ಮ ರತಿ ಪುತ್ರಿ ನಿನ್ನ ಹಾಡು ಕೇಳಿದಿವಿ
ಮನಸಾರೆ ಮೆಚ್ಚಿದಿವಿ ಎಂಜಾಯ್ ಮಾಡಿದಿವಿ
ಎಲ್ಲಾನೂ ನೋಡಿದಿವಿ
ಇಲ್ಲಮ್ಮ ತಾಯಿ, ಮುಚ್ಚೋ ಬಾಯಿ  ಬೊಗಳೆ ದಾಸಯ್ಯ
ನಾನಿನ್ನ ತಾಯಿ ಅಲ್ಲ ಪುಟ್ಟ ತಂಗಿ ಅಣ್ಣಯ್ಯ

ಲ ಲ ಲ..........

ಈ ಪ್ರೀತಿ ಬರುವ ಮುಂಚೆ ಯಾರಿಗೂ ಹೇಳೋಲ್ಲ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ

ಎ ಸಂಜು.....

ಏನೇ ಹೇಳು ಸಂಜು ಅವಳ ಹಾಡು ಕೇಳಿ
ಮನಸಿಗೆ ತಿಳಿಯದ ಮುಜುಗರ
ಕಾಡಲ್ಲಿದ್ದರು ಕೂಡ ಹಾಡಿ ನಲಿಯುತಾಳೆ
ಅವಳದು ಎಂತದು ಸಡಗರ
ಇಂಪಾಗಿ  ಹಾಡ್ತಿಯಂತ ಹೇಳೋಕೆ ನಾ ಹೋದೆ
ಯಾಕೇಂತ ಗೊತ್ತಿಲ್ಲ ಮಾತಿಲ್ಲದಂತೆ ನಾನಾದೆ
ಹೀಗೇಕೆ ನಾನಾದೆ ನಿನ್ನಾಣೆ ನನಗೇನೋ ಇದು ಹೊಸದು

ಲ ಲ ಲ......

ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳಲ್ಲ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ......

*****************************************************************************.

ಲೋಕವೇ ಹೇಳಿದ ಮಾತಿದು

ಸಾಹಿತ್ಯ: ಹಂಸಲೇಖ 
ಗಾಯಕರು : ಎಸ್ ಪಿ ಬಿ, ಎಸ್ ಜಾನಕಿ  

ಲೋಕವೇ ಹೇಳಿದ ಮಾತಿದು
ವೇದದ ಸಾರವೇ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು...
ಮಾಡಿದರೆ  ಜಗಕೆ ಹೆದರಬಾರದು

ಅನಾರ್ಕಲಿ.....ಅನಾರ್ಕಲಿ

ಮರಳುಗಾಡೆ ಇರಲಿ ಭೂಮಿಗೆ ಸೂರ್ಯನಿಳಿದು ಬರಲಿ
ಪ್ರೀತಿಸೋ ಜೀವಗಳು ಬಾಡಲಾರದಂಥ  ಹೂವುಗಳು
ರಾಜಕೀಯವಿರಲಿ ಶಕುನಿಗಳ ನೂರು ತಂತ್ರವಿರಲಿ
ಪ್ರೇಮದ ರಾಜ್ಯದಲ್ಲಿ ಸಾವಿಗೆಂದು ಭಯ ಕಾಣದಿಲ್ಲಿ
ಲೋಕವ ಕಾಡುವ ಕೋಟಿ ರಾಕ್ಷಸರಿದ್ದರು ಭೂಮಿ ಕೇಳಲಿಲ್ಲ
ಬಾಯ್ ತೆರೆಯಲಿಲ್ಲ ಮಾತಾಡಲಿಲ್ಲ
ಪ್ರೇಮಿಗಳಿಬ್ಬರು ಇಲ್ಲಿ ಪ್ರೀತಿಸಿ ಬಾಳೋದು ನೀವು ಸಹಿಸಲಿಲ್ಲ
ಬಾಯ್ ಬಿಟ್ಟಿರಲ್ಲ ಹೂಳಿಟ್ಟಿರಲ್ಲ     

ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟಬಾರದು

 ಓ ರೋಮಿಯೋ......ಓ ರೋಮಿಯೋ

ದ್ವೇಷವೆಂಬ ವಿಷವ ಸೇವಿಸುತ ಖಡ್ಗ ಮಸೆಯುತಿರುವ
ಅಂಧರ ಕಣ್ಣಿಗೆ ಈ ಪ್ರೀತಿಯ ಸ್ವರೂಪ ಕಾಣಿಸದು
ಮನಸು ಕಣ್ಣು ತೆರೆದು ನೋಡಿದರೆ ಎಲ್ಲ ಶೂನ್ಯವಿಹುದು
ಪ್ರೀತಿಯ ನಂಬಿದರೆ ಅಂಧಕಾರದಲ್ಲೂ ಕಾಣುವುದು
ರಾಜ್ಯಗಳಳಿದು ಕೋಟೆ ಕೊಟ್ಟಲು ಉರುಳಿದವು ಹೆಣ್ಣಿಗಾಗಿ
ಈ ಮಣ್ಣಿಗಾಗಿ ಈ ಹೊನ್ನಿಗಾಗಿ
ಜೀವದ ಆಸೆಯ ಬಿಟ್ಟು ವಿಷವ ಕುಡಿದರಿಲ್ಲಿ
ಪ್ರೀತಿಗಾಗಿ ಆನಂದವಾಗಿ ಆಶ್ಚರ್ಯವಾಗಿ
ಪ್ರೀತಿ  ಮಾಡಬಾರದು ಮಾಡಿದರೆ ವಿಷವ ಕುಡಿಯಬಾರದು.....

ಲೋಕವೇ ಹೇಳಿದ ಮಾತಿದು......


*******************************************************************************

ಬಾ ಬಾರೋ ಬಾರೋ ರಣಧೀರ

ಸಾಹಿತ್ಯ: ಹಂಸಲೇಖ 
ಹಾಡಿದವರು: ಎಸ್ ಪಿ ಬಾಲು, ಎಸ್ ಜಾನಕಿ  


ಸ ರಿ ಗ ಮ ಪ....

ಬಾ ಬಾರೋ ಬಾರೋ ರಣಧೀರ
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ
ನೀ ಬಂದರೆ ದಿಗ್ವಿಜಯದ ಹಾರ

ಓ ಹೂವಂತೆ ಪ್ರೀತಿ ಹೂವಂತೆ
ನೋಡಲೇನು ಇದು ಹೂವು
ಬಿರಿದರೆ ಕೊಲುವ ಹಾವು
ಇತಿಹಾಸ ಇದರ ಹವ್ಯಾಸ
ಅಗ್ನಿಯೊಡನೆ ಸಹವಾಸ
ಸಾವಿನ ಜೊತೆಗೆ ಸರಸ
ನಲಿದು ನಲಿಸುತ್ತಾ ತಂಪನೆರೆಯುತ್ತ
ಜಗವ ಕಾಯುತ್ತಲಿದೆ ಪ್ರೀತಿ
ಸುತ್ತಿ ನಮ ಸುತ್ತ ಎಲ್ಲ ಕುಣಿಸುತ್ತಾ
ತಾನು ನೋಡುತ್ತಲಿದೆ ಪ್ರೀತಿ
ಎಲ್ಲ ಅದರ ಕೈಲಿ ನಾವೆಲ್ಲಾ ನೆಪವು ಇಲ್ಲಿ
ನ್ಯಾಯ ಕೇಳುವ ಹೇಳಿ ನಡೆಸುವ ಶಕ್ತಿಯೊಂದೇ ಪ್ರೀತಿ
ಬಾ ಎಂದರೆ ಬಂದಿಳಿ ಯುವಪ್ರೀತಿ
ಆ ಜೀವಿಯ ದಿಗ್ವಿಜಯದ ರೀತಿ

ಹೇ....ಯೌವನವೇ ನೀನು ಭೀಕರವೇ
ನೀನು ಇರುವ ದೆಸೆ ಇಂದ ಈ ಘೋರ ನೋಡು ಕಣ್ಣಿಂದ
ಹೇ....ಜೀವನವೇ ನಿನಗೆ ಸಮ್ಮತವೇ
ಬಯಸಿದ ಸ್ವರ್ಗ ಎಲ್ಲಿ ನೀ ನಡೆಸಿದೆ ನರಕದಲ್ಲಿ
ಕಾಮ ಕ್ರೋಧ ಮದ ಲೋಬ ಮೋಹ
ಮಾತ್ಸರ್ಯ ತುಂಬಿರುವ ಜಗದಲ್ಲಿ
ಜೀವ ಕಾರಣದ ಬಾಳ ತೋರಣದ ಪ್ರೀತಿಗೇನು ಬೆಲೆ ಸಿಗದಿಲ್ಲಿ
ಕರುಣೆಯಿರದ ವಿಧಿಯೇ ನಿನ್ನ ನೀತಿ ಎಲ್ಲಿ ಸರಿಯೇ
ಹಣೆಯ ಬರಹವಿದು ನಿಜವೇ ಇರಬಹುದು ಸಾವೇ ನಿನ್ನ ಗುರಿಯೇ.....

ಬಾ ಬಾರೋ ಬಾರೋ ರಣಧೀರ.....

********************************************************************************

ಮೀನಾಕ್ಷಿ ನಿನ್ನ ಕಣ್ಣ ಮೇಲೆ

ಸಾಹಿತ್ಯ & ಸಂಗೀತ: ಹಂಸಲೇಖ
ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ


ಮೀನಾಕ್ಷಿ ನಿನ್ನ ಕಣ್ಣ ಮೇಲೆ ಮುರಳಿಗೇಕೊ ಕಣ್ಣು
ಕಾಮಾಕ್ಷಿ ನಿನ್ನ ಕೆನ್ನಗಳಿದು ಮಧುರವಾದ ಹಣ್ಣು
ಕೇಳೆ ಸಖಿ ಮಕರಂದನ ರಾಯಭಾರ
ನೀನವನಿಗೆ ಹೆಣ್ಣು ಅವನಿನ್ನು ಬಿಡನಿನ್ನು

ನಿನ್ನ ಪಾದ ಗೆಜ್ಜೆ ನಾದ ನಡೆವ ಭಂಗಿಗೆ
ಬಿಗಿದ ನಡುವ ತುಂಬಿದೆದೆಯ ಮೈ ಮೆರವಣಿಗೆ
ಗೋಕುಲದ ವೀದಿಗಳಿಗೆ ಸೂರ್ಯೋದಯವೇ
ನೀ ನಡೆದು ಬೀಗುತಿರಲು ಹೃದಯೋದಯವೇ
ನಳಿನಾಕ್ಷಿ ನಿನ್ನ ನಡುವ ಮೇಲೆ
ಈ ಮುರಾರಿ ಕಣ್ಣು
ಜಲಜಾಕ್ಷಿ ನೀನು ಗಿಣಿಯು ಕಂಡ
ಮಾಗಿ ತೂಗೊ ಹಣ್ಣು
ಕೇಳೆ ಸಖಿ ಮಕರಂದನ ರಾಯಭಾರ
ನೀನವನಿಗೆ ಹೆಣ್ಣು ಅವನಿನ್ನು ಬಿಡನಿನ್ನು

ದ್ವಾರಕಾಪುರದಲಿ ಅಸುರ ಸೈನ್ಯ ಧಾಳಿಗೆ
ಅವಿತು ಕುಳಿತ ಗೋಪಿ ಕುಲದ ಪ್ರಾಣ ರಕ್ಷೆಗೆ
ಶ್ರೀ ಕೃಷ್ಣನು ವೀರನಾಗಿ ಧಾವಿಸಿ ಬರಲು
ರಾಧೆ, ನೀ ಕರಪಿಡಿದು ಕರೆದೊಯ್ಯೆನಲು
ಕಮಲಾಕ್ಷಿ ನಿನ್ನ ಪ್ರಾಣದೊಡವೆ
ಮೇಲೆ ಅವನ ಕಣ್ಣು
ವಿಮಲಾಕ್ಷಿ ನೀನು ಶೇಷಶಯನ
ಕದ್ದು ಒಯ್ವ ಹಣ್ಣು

********************************************************************************

ನಾವಿಂದು ಹಾಡೋ

ಸಾಹಿತ್ಯ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ


ಸರಿಗಮಪ....
ನಾವಿಂದು ಹಾಡೋ ಹಾಡಿಗೆ ಕೊನೆ ಇಲ್ಲ
ಕೊನೆ ಇಲ್ಲ ಈ ಸ್ನೇಹಕೆ ಹಾಡಿ ಎಲ್ಲ
ಹಾಡಿ ಎಲ್ಲ ಎಲ್ಲ ಮನಸಿಟ್ಟು ಕೇಳಿರಿ
ಕೇಳಿರಿ ಈ ಗುಟ್ಟು ಕೊನೆಯಿಂದ ಹಾಡಿರಿ
ಹಾಡಿರಿ ಹಾಡಲ್ಲಿ ಒಂದು ಲವ್ ಸ್ಟೋರಿ
ಸ್ಟೋರಿಗೆ ಈಗ ನಾಯಕಿ ಯಾರೊ ಮರಿ
ಯಾರೊ ಮರಿ ಇಗೊ ಈ ಹೆಣ್ಣೆ ನಾಯಕಿ
ನಾಯಕಿಯೆ ನಿನಗೆ ಯಾರಮ್ಮ ನಾಯಕ
ನಾಯಕ ಯಾರಮ್ಮ ಯಾರಮ್ಮ ನಾಯಕ
ನಾಯಕ ನಾನೆ ನಾಯಕ ನಾನೆ ನನ್ನ ಕಥೆಗೆ ನಾಯಕಿ ಆ ಬೆಡಗಿ
ಬೆಡಗಿನ ಸೊಬಗಿ ಅವಳೆ ಕಣೊ ಮನಸೆಳೆದ ಹುಡುಗಿ
ಹುಡುಗಿ ಸ್ಟಾರ್ಟ್ ಸ್ಟಾರ್ಟ್ ಲವ್ ಸ್ಟೋರಿ
ಸ್ಟೋರಿ ಗೆ ಪ್ರೀತಿನೆ ಮುಖ್ಯ ಯಾರಿಂದ ಯಾವಾಗ ಅದು ಶುರುವಾಯ್ತು
ಶುರುವಾಯ್ತು ಅನ್ನೊದು ತಪ್ಪು ಹಿಂದಿನ ಜನ್ಮದಲ್ಲೇನೆ ಸೇರಾಯ್ತು
ಸೇರಾಯ್ತು ನಾವಿಲ್ಲಿ ಈ ನಮ್ಮ ಕಥೆಯಲ್ಲಿ
ಮುಂದೇನು ಮುಂದೇನು ಗೊತ್ತೇನು ಗೊತ್ತೇನು
ಗೊತ್ತೇನು ಪ್ರೀತಿಗೆ ನಾಳಿನ ಚಿಂತೆಯಿಲ್ಲ
ಚಿಂತೆಯಿಲ್ಲ ಈ ಪ್ರೀತಿಗೆ ಕೊನೆ ಇಲ್ಲ
ಕೊನೆ ಇಲ್ಲ ಸರಿ ಮಧ್ಯವು ಯಾವುದು
ಯಾವುದು ಹಾಡೋದು ಹಾಡೋದು ಯಾವುದು
ಯಾವುದು ಎಂದರೆ ಎಲ್ಲ ತೊಂದರೆ
ಹಾಡಿಕೊಂಡು ಮುಂದೆ ಹೋಗು
ಮುಂದೆ ಹೋಗು ಇಲ್ಲವೆ ಪಕ್ಕಕಾದರು ಬಾ
ಹಿಂದಕ್ಕಂತು ಬೇಡವೋ ಮಗು
ಮಗು ಮಗು ನಗು ನಗು ನಗುವೇ ಜೀವನ

ಜೀವನ ಪ್ರಯಾಣದಲ್ಲಿ ಆಸೆಯ ಲಗ್ಗೇಜು ಚಿಕ್ಕದಿರಬೇಕು
ಇರಬೇಕು ಪ್ರೀತಿಯ ಟಿಕ್ಕೇಟ್ ದುಃಖದ ಫೈನು ಕೊಡಬೇಕು
ಕೊಡಬೇಕು ಈ ನನ್ನ ಹೆಣ್ಣಿಗೆ..ಹೆಣ್ಣಿಗೆ..ಹೆಣ್ಣಿಗೆ ಇವಳ ಕಣ್ಣಿಗೆ.. ಕಣ್ಣಿಗೆ
ಕಣ್ಣಿಗೆ ಪ್ರೇಮದ ಕೂಲಿಂಗ್ ಗ್ಲಾಸ್ ಹಾಕು
ಹಾಕಲು ಲೋಕವು ಪ್ರೇಮಮಯ ನೋಡು ಸಾಕು
ಸಾಕು ಸರಿ ನೋಡು ಇಲ್ಲೊಂದು ಸರತಿ ಇಲ್ಲೊಂದು ಸರತಿ
ಈ ಇಬ್ಬರ ಪ್ರೀತಿ ಪ್ರೀತಿಯನೆಂದು.. 
ಪ್ರೀತಿಯನೆಂದು ನೋಡಬಾರದು ಅನುಭವಿಸೋ ಹುಡುಗ
ಅನುಭವಿಸಿದರೆ ಇದರ ಸುಖ ತಿಳಿವುದು ನಿನಗಾಗ
ಗಾ ಗಾ ಗಗಗಾ ರೀ ರೀ ನೀ ನಿ ಸ

*********************************************************************************

ಏನ್ ಹುಡ್ಗಿರೋ

ಸಾಹಿತ್ಯ: ಹಂಸಲೇಖ 
ಗಾಯಕರು: ಮಾ।। ಮಂಜುನಾಥ, ಎಸ್ ಪಿ ಬಿ & ವಾಣಿ ಜಯರಾಮ್ 


ಮಂಜು : ಏನ್ ಹುಡ್ಗಿರೋ ಇದ್ಯಾಕಿಂಗ ಆಡ್ತಿರೋ ಲವ್ ಲವ್ ಲವ್ ಅಂತ್ ಕಣ್ಣೀರಿಡ್ತಿರೋ..
ಹೆ : ಕಣ್ಣಿರಲ್ಲಾ.... ಕಣ್ಣಿರಲ್ಲಾ ಪನ್ನೀರ ಮಳೆಯೂ ನನ್ನಾ ಪ್ರಿಯನಿಗೆ ನೆನಪಿನ ಅಭಿಷೇಕ.. 
ಗ : ಕೇಳೇ ಗೆಳತಿ ಈ ನಿನ್ನ ನೆನಪೇ ನನ್ನ ಬದುಕಿಗೇ ಆಸರೆ ಕೊನೆತನಕ ... 
ಮಂಜು : ಏನ್ ಹುಡ್ಗಿರೋ ಇದ್ಯಾಕಿಂಗ ಆಡ್ತಿರೋ ಲವ್ ಲವ್ ಲವ್ ಅಂತ್ ಕಣ್ಣೀರಿಡ್ತಿರೋ..
ಮಂಜು : ಲವ್ವು ಅಂದರೇ ನೋವು ಕಷ್ಟ ನಷ್ಟ ಇದ್ದರೇ ಯಾಕೇ ಬೇಕೀ ವನವಾಸ.. 
ಹೆ  : ತಿಳಿದು ತಿಳಿಯದೆನೋ ಇದರ ಬಲೆಗೆ ಬಿದ್ದರೆ ತಪ್ಪದು ವಿರಹದ ಸೆರೆವಾಸ 
       ಸಾವಿಗಾಗಿ ನಾನು ಅಂಜಲಾರೆ ಅಳುಕಲಾರೆ ಈ ಜೀವ ಹಿಂಡು ವಿರಹವನ್ನು ಸಹಿಸಲಾರೆ 
       ತಾಳಲಾರೆ ನಾನು ತಾಳಲಾರೆ
ಗ: ನಿನ್ನ ಕಣ್ಣಿನಾಳದಲ್ಲಿ ಬಿಂಬವಾಗಿ ನಾನು ನಿಲ್ಲುವೇ... 
     ಕಣ್ಣ ರಪ್ಪೆ ಮುಚ್ಚಿ ನನ್ನ ಪ್ರೀತಿ ಮಾಡು ವಿರಹ ಗೆಲ್ಲುವೇ... 
ಮಂಜು : ಏನ್ ಹುಡ್ಗಿರೋ ಇದ್ಯಾಕಿಂಗ ಆಡ್ತಿರೋ ಲವ್ ಲವ್ ಲವ್ ಅಂತ್ ಊಟ ಬಿಡ್ತೀರೋ
ಹೆ : ಹಸಿವಿನ ಚಿಂತೇ... ಹಸಿವಿನ ಚಿಂತೆ ಪ್ರೀತಿಗೆ ಬರದು ನನ್ನಾ ದೊರೆಗಿದು ಪೂಜೆಯ ನೈವಿದ್ಯಾ... 
ಗ : ಕೇಳೇ ಗೆಳತೀ ಬಾಯಾರಲಿಲ್ಲ ನಿನ್ನ ನೆನಪಲಿ ಹಸಿವಿನ ಅರಿವಿಲ್ಲಾ... 
  
ಮಂಜು : ತಿಂಡಿ ತೀರ್ಥ ಬಿಟ್ಟು ಲವ್ವು ಮಾಡೋ ಕೆಲಸಕೇ.. ಏನು ಲಾಭವಿದೇ  ಮಹಾತಾಯಿ 
ಹೆ  : ಒಂದೇ ನೀತಿ ಒಂದೇ ಜಾತಿ ಅನ್ನೋ ಮಂತ್ರಕೇ.. ಪ್ರೀತಿ ಒಂದೇ ವಿಜಯದ ಸ್ಥಾಯೀ  
       ಭೂಮಿ ಮೇಲೆ ಇನ್ನೂ ಗಾಳಿ ಇದೇ..,  ನೀರು ಇದೇ..  
       ಆ ಬೆಂಕಿ ಕೂಡಾ ಪ್ರೀತಿಯಿಂದ ಸುಮ್ಮನಿದೇ... ಕೆರಳದಿದೇ... ಪ್ರಳಯವಾಗದಿದೇ...    
ಗ : ನನ್ನ ತೋಳಿನಲ್ಲಿ ನೀನು ಇದ್ದಮೇಲೆ ಭೂಮಿ ಬಿರಿಯಲೀ.... 
      ಒಂದು ಹೊತ್ತು ನಿನ್ನ ಮುತ್ತು ಸಿಕ್ಕ ಮೇಲೆ ಪ್ರಳಯವಾಗಲೀ....  
ಮಂಜು : ಏನ್ ಹುಡ್ಗಿರೋ ಇದ್ಯಾಕಿಂಗ ಆಡ್ತಿರೋ ಲವ್ ಲವ್ ಲವ್ ಅಂತ್ ಕಣ್ಣೀರಿಡ್ತಿರೋ..  

*********************************************************************************

ಒಂದಾನೊಂದು ಕಾಲದಲ್ಲಿ

ಸಾಹಿತ್ಯ: ಹಂಸಲೇಖ 
ಗಾಯಕರು: ರಮೇಶ, ಪಿ.ಸುಶೀಲಾ 


ರಣಧೀರ              ಅಪರಂಜಿ 
ರವಿಚಂದ್ರ            ಧ್ರುವತಾರೆ 
ಭಲೇ ರಾಜ          ಗಿರಿಕನ್ಯೆ 
ಹೊಸ ಬೆಳಕು       ಋತುಗಾನ 
ಆರಂಭ....... 
ಒಂದಾನೊಂದು ಕಾಲದಲ್ಲಿ ಆರಂಭ 
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ 
ಇಬ್ಬನಿ ಕರಗಿತು          ಮುದಡಿದ ತಾವರೆ 
ಅರಳಿತು ಪ್ರೇಮ ಜ್ಯೋತಿ.. 
ಒಂದಾನೊಂದು ಕಾಲದಲ್ಲಿ ಆರಂಭ 
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ 
ಇಬ್ಬನಿ ಕರಗಿತು          ಮುದಡಿದ ತಾವರೆ 
ಅರಳಿತು ಪ್ರೇಮ ಜ್ಯೋತಿ.. 
ಒಂದಾನೊಂದು ಕಾಲದಲ್ಲಿ ಆರಂಭ 
ಸ ರೇ ಗ ಪ ಮ ಸಾ ಸ ಧಾ ಪ ಪ ಮ ಮ ಗ ರೀ ಗ ರೀ 
ಬಿಳಿಗಿರಿಯ ಬನದಲ್ಲಿ ಎಡಕಲ್ಲು ಗುಡ್ಡದ ಮೇಲೆ 
ನೀ ತಂದ ಕಾಣಿಕೆ  ಪ್ರೇಮದ ಕಾಣಿಕೆ 
ಮನ ಮೆಚ್ಚಿದ ಹುಡುಗಿ ಹುಡುಗಾಟದ ಹುಡುಗಿ 
ನಗುವ ಹೂವು ನಮ್ಮಮ್ಮನ ಸೊಸೆ ಬಂಗಾರದ ಜಿಂಕೆ 
ಭಲೇ ಬಸವ          ಭಲೇ ಜೋಡಿ 
ಹೊಂಬಿಸಿಲು          ಸಂಗೀತ 
ಆರಂಭ...              ಹಂಸಗೀತೆ 
ಒಂದಾನೊಂದು ಕಾಲದಲ್ಲಿ ಆರಂಭ 
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ 
ಕಣ್ಣು ತೆರೆಸಿದ ಹೆಣ್ಣು ಕಣ್ಣತೆರೆದು ನೋಡು 
ನಾ ನಿನ್ನ ಪ್ರೀತಿಸುವೆ ಪ್ರೀತಿಸಿ ನೋಡು 
ಯೌವ್ವನದ ಸುಳಿಯಲ್ಲಿ ಪ್ರಾಯ ಪ್ರಾಯ ಪ್ರಾಯ 
ಸಂಪ್ರದಾಯ ಮದುವೆ ಮಾಡಿ ನೋಡು ಮನೆ ಅಳಿಯ 
ಕವಲೆರಡು          ಕುಲ ಒಂದು 
ಹೊಸಬೆಳಕು       ಋತುಗಾನ 
ಆರಂಭ..            ಅರುಣರಾಗ 
ಒಂದಾನೊಂದು ಕಾಲದಲ್ಲಿ ಆರಂಭ 
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ 
ಇಬ್ಬನಿ ಕರಗಿತು          ಮುದಡಿದ ತಾವರೆ 
ಅರಳಿತು ಪ್ರೇಮ ಜ್ಯೋತಿ.. 
ಒಂದಾನೊಂದು ಕಾಲದಲ್ಲಿ ಆರಂಭ 
ಹೂವು ಮುಳ್ಳು ಪ್ರೀತಿ ಬೆಸುಗೆ ಆರಂಭ 
ಇಬ್ಬನಿ ಕರಗಿತು          ಮುದಡಿದ ತಾವರೆ 
ಅರಳಿತು ಪ್ರೇಮ ಜ್ಯೋತಿ..

*********************************************************************************

ಬಾ ಬಾರೋ ರಣಧೀರ

ಸಾಹಿತ್ಯ: ಹಂಸಲೇಖ 
ಗಾಯಕರು: ಎಸ್ ಪಿ ಬಿ, ಎಸ್ ಜಾನಕಿ


ಸಾ .. ರಿ... ಗ.. ಮ.. ಪ....

ಬಾ ಬಾರೋ ಬಾರೋ ರಣಧೀರ  
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ 
ನೀ ಬಂದರೆ ದಿಗ್ವಿಜಯದ ಹಾರ
ಬಾ ಬಾರೋ ಬಾರೋ ರಣಧೀರ  
ಬಾ ಬಾರೋ ಪ್ರೀತಿಯ ಸರದಾರ
ಬಾ ಎಂದರೆ ಬಂದಿಳಿ ಯುವಶೂರ 
ನೀ ಬಂದರೆ ದಿಗ್ವಿಜಯದ ಹಾರ
ಬಾ ಬಾರೋ ಬಾರೋ ರಣಧೀರ 
ಬಾ ಬಾರೋ ಪ್ರೀತಿಯ ಸರದಾರ

ಚಿಮ್ಮಿದೆ ಬೆಳ್ಳಿಯ ಕಿರಣ ಅವಳ ನಗುವಿನಲ್ಲಿ
ನಕ್ಕರೆ ಸಕ್ಕರೆ ಇನ್ನು ಸಿಕ್ಕರೆ
ಮಿಂಚಿನ ಸಂಚಾರವಿದೆ ಅವಳ ಸ್ಪರ್ಶದಲ್ಲಿ
ಮೆಚ್ಚುವ ಬೆಚ್ಚುವ ಕಾಡ್ಗಿಚ್ಚಿದೇ
ಮಾತೆಲ್ಲ ಸಂಗೀತ ಕೋಗಿಲೆಯ ಆ ಸಂಕೇತ
ಮನಸಲ್ಲಿ ಮಾಧುರ್ಯ ಮನಸೆಳೆವ ಆ ಸೌಂದರ್ಯ
ಕಲಕಿದಳೋ ಏಕಾಂತ... ಓಹೋಹೋ.. ಹೋ .. ಹೊ.
ಲಾಲಾಲ ಲಲ್ಲಲ್ಲಾ  ಲಾಲಾಲ ಲಾಲಾಲ ಲಲ್ಲಲ್ಲಾ  ಲಾಲಾಲ
ಈ ಪ್ರೀತಿಯ ಬರುವ ಮುಂಚೆ ಯಾರಿಗೂ ಹೇಳಲ್ಲಾ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲಾ .. ಲಾಲಾಲ ಲಲ್ಲಲ್ಲಾ

*********************************************************************************

No comments:

Post a Comment