ನಾನ್ ಪುಟ್ಟನಂಜ (ಮನೆ ಮಾನ ಹೊತ್ತು)
ಚಲನ ಚಿತ್ರ: ಪುಟ್ನಂಜ (1995)
ನಿರ್ದೇಶನ: ವಿ. ರವಿಚಂದ್ರನ್
ಸಂಗೀತ/ಸಾಹಿತ್ಯ: ಹಂಸಲೇಖ
ಗಾಯಕರು: ಮನು, ಮಿನ್ಮಿನಿ, ಶ್ಯಾಮಲಭಾವೆ
ನಟನೆ: ರವಿಚಂದ್ರನ್, ಮೀನಾ, ಉಮಾಶ್ರೀ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ ಲ ಲ

ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ
ಎತ್ತಿಗೆ ಕೊಟ್ಟ ಏರು ಗದ್ದೆಗೆ ಬಿಟ್ಟ ನೀರು
ಊರೆ ಬಿಟ್ರೆ ಹೆಂಗೆ ಹೇಳು
ಹೊಸ್ತಿಲು ದಾಟಿ ಹೋದಳು
ಬೀಜ ಇಟ್ಟ ಭೂಮಿ ಹಣ್ಣು ಕೊಟ್ಟ ಸ್ವಾಮಿ
ಹೊಸ್ತಿಲು ದಾಟಿ ಹೋದಳು
ಬೀಜ ಇಟ್ಟ ಭೂಮಿ ಹಣ್ಣು ಕೊಟ್ಟ ಸ್ವಾಮಿ
ಹಳಸಿ ಕೊಟ್ರೆ ಹೆಂಗೆ ಹೇಳು
ಗೆದ್ದಿಲು ಕಟ್ಟಿ ಹೋದಳು
ಓ ಪುಟ್ಟಮಲ್ಲಿ ನೀ ಕೇಳು ಇಲ್ಲಿ
ಕಳೆ ತೆಗೆಯೊ ಭರದಲ್ಲಿ ತೆರೆ ಕಿತ್ತಳು ಬದುಕಲ್ಲಿ
ನಾನ್ ಪುಟ್ಟನಂಜ ನಾನ್ ಪುಟ್ಟನಂಜ
ಈ ಪ್ರೀತಿಯೆಂಬೊ ನಂಜುಂಡ ನಂಜ
ಗೆದ್ದಿಲು ಕಟ್ಟಿ ಹೋದಳು
ಓ ಪುಟ್ಟಮಲ್ಲಿ ನೀ ಕೇಳು ಇಲ್ಲಿ
ಕಳೆ ತೆಗೆಯೊ ಭರದಲ್ಲಿ ತೆರೆ ಕಿತ್ತಳು ಬದುಕಲ್ಲಿ
ನಾನ್ ಪುಟ್ಟನಂಜ ನಾನ್ ಪುಟ್ಟನಂಜ
ಈ ಪ್ರೀತಿಯೆಂಬೊ ನಂಜುಂಡ ನಂಜ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ
ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ
ಬ್ಯಾಸಾರ ಮಾಡಿಕುಂತ್ರೆ ಗ್ರಾಚಾರ ಬಿಡದು
ನೇಸರ ಸುಟ್ಟನೆಂದು ಭೂತಾಯಿ ಅಳದು
ನಾನು ಅನ್ನೊ ಹೆಣ್ಣು ಭೇದ ಮಾಡೊ ಕಣ್ಣು
ಪ್ರೀತಿ ಮಯ್ಯ ಹುಣ್ಣು ಕೇಳು
ಮನಸು ಮುರಿದು ಹೋದಳು
ಹೆಣ್ಣು ಅಂದ್ರೆ ಮಾನ ಮಾನ ಅಂದ್ರೆ ಮನೆ
ನೇಸರ ಸುಟ್ಟನೆಂದು ಭೂತಾಯಿ ಅಳದು
ನಾನು ಅನ್ನೊ ಹೆಣ್ಣು ಭೇದ ಮಾಡೊ ಕಣ್ಣು
ಪ್ರೀತಿ ಮಯ್ಯ ಹುಣ್ಣು ಕೇಳು
ಮನಸು ಮುರಿದು ಹೋದಳು
ಹೆಣ್ಣು ಅಂದ್ರೆ ಮಾನ ಮಾನ ಅಂದ್ರೆ ಮನೆ
ಮನೆ ಬಿಟ್ರೆ ಹೆಂಗೆ ಹೇಳು
ಮಾನ ತೆಗೆದು ಹೋದಳು
ಓ ಪುಟ್ಟಮಲ್ಲಿ ಬಾ ಕೇಳು ಇಲ್ಲಿ
ಮನೆ ಗುಡಿಸೊ ಭರದಲ್ಲಿ ಮನೆ ಒಡೆದಳು ಮನೆ ಒಡತಿ
ನಾನ್ ಪುಟ್ಟನಂಜ ನಾನ್ ಪುಟ್ಟನಂಜ
ಈ ಪ್ರೀತಿಯೆಂಬೊ ನಂಜುಂಡ ನಂಜ
ಮಾನ ತೆಗೆದು ಹೋದಳು
ಓ ಪುಟ್ಟಮಲ್ಲಿ ಬಾ ಕೇಳು ಇಲ್ಲಿ
ಮನೆ ಗುಡಿಸೊ ಭರದಲ್ಲಿ ಮನೆ ಒಡೆದಳು ಮನೆ ಒಡತಿ
ನಾನ್ ಪುಟ್ಟನಂಜ ನಾನ್ ಪುಟ್ಟನಂಜ
ಈ ಪ್ರೀತಿಯೆಂಬೊ ನಂಜುಂಡ ನಂಜ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ
ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ
ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ
ಅಡಿಕೇಗೆ ಹೋದ ಮಾನ ಆನೇಗು ಸಿಗದು
ಮಡಿಕೇಯ ಒಡೆಯೊ ಕೈಲಿ ಸಂಸಾರ ಇರದು
ಒಂದೆ ಸಾರಿ ಹುಟ್ಟು ಒಂದೆ ಸಾರಿ ಪ್ರೀತಿ ಒಂದೆ ಸಾವು ನಂಗೆ ಕೇಳು
ನಿತ್ಯ ಸಾವು ಕೊಟ್ಟಳು ಅಂಗೀ ಕಳಚೊ ಹಂಗೆ ಮಾತು ತಿರಿಚೊ ಹಂಗೆ
ಮನಸು ಮಡುಚೋರಲ್ಲ ನಾವು
ಮಾತು ತಪ್ಪಿ ಹೋದಳು
ಓ ಪುಟ್ಟಮಲ್ಲಿ ನೀ ಕೇಳು ಇಲಿ
ಕೊಳೆ ಕಳೆಯುವ ಭರದಲ್ಲಿ ಕಣ ಹರಿದಲು ಬಾಳಲ್ಲಿ

*********************************************************************************
ಈ ಸುಗ್ಗಿ ತಂದವಳರಾಮ್ಮಾ
ಸಂಗೀತ/ಸಾಹಿತ್ಯ: ಹಂಸಲೇಖ
ಹಾಡಿದವರು: ಮನು, ಚಿತ್ರಾ

ಬಾಗಿನ ನೀಡಿರಮ್ಮಾ ಭಾಗ್ಯಾನ ಬೇಡಿರಮ್ಮಾ
ಹೊಕ್ಕಳ ಬಳ್ಳಿಗೆ ಕುಡುಗೋಲಿಟ್ಟರು ನಗ್ತಾಳೇ...
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ಈ ಸುಗ್ಗಿ ತಂದವಳರಾಮ್ಮಾ..... ನಮ್ಮಮ್ಮಾ ನಮ್ಮಮ್ಮಾ
ಈ ಹುಗ್ಗಿ ತಂದವಳಾರಮ್ಮಾ.... ಭೂಮಿ ತಾಯಮ್ಮಾ....
ಈ ಅಂಬಲಿ ತಂದವಳರಮ್ಮಾ... ನಮ್ಮಮ್ಮಾ ನಮ್ಮಮ್ಮಾ
ಈ ಓಕುಳಿ ತಂದವರಾರಮ್ಮಾ ಭೂಮಿ ತಾಯಮ್ಮಾ...
ಒಂದು ನೆಲ್ಲು ಚೆಲ್ಲಿದರೇ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ...
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ಈ ಅಂಬಲಿ ತಂದವಳರಮ್ಮಾ... ನಮ್ಮಮ್ಮಾ ನಮ್ಮಮ್ಮಾ
ಈ ಓಕುಳಿ ತಂದವರಾರಮ್ಮಾ ಭೂಮಿ ತಾಯಮ್ಮಾ...
ಒಂದು ನೆಲ್ಲು ಚೆಲ್ಲಿದರೇ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ...
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ಹೇ..ಹೇ..ಹೆಹೆ...ಆ.ಆ.ಆ ಹೇ..ಹೇ..ಹೆಹೆ...ಆ.ಆ.ಆ
ಹೇ..ಹೇ..ಹೆಹೆ...ಆ.ಆ.ಆ ಹೇ..ಹೇ..ಹೆಹೆ...ಆ.ಆ.ಆ
ಈ ಚಿನ್ನಮ್ಮ ನಮ್ಮಮ್ಮನಿಗೆ...
ಮಗಳಮ್ಮಾ.. ಮಗಳಮ್ಮಾ
ಈ ಗಂಗಮ್ಮ ನಮ್ಮಮ್ಮನಿಗೇ ಚೊಚ್ಚಲ ಮಗಳಮ್ಮಾ
ಹೊ.. ಚೊಚ್ಚಲ ಮಗಳಮ್ಮಾ ಹೋ.. ಕೆಚ್ಚಲ ಮಗಳಮ್ಮಾ
ಆ.. ಮಂಜಮ್ಮ ನಮ್ಮಮ್ಮನಿಗೇ...
ತಂಗ್ಯಮ್ಮಾ ... ತಂಗ್ಯಮ್ಮಾ
ಈ.. ಗಾಳ್ಯಾಮ್ಮ ನಮ್ಮಮ್ಮನಿಗೇ..
ಹತ್ತಿರದವಳಮ್ಮಾ ಹೋ.. ಬಿಟ್ಟಿರದವಳಮ್ಮಾ
ನಮ್ಮ ಅಮ್ಮನೂರಿನ ಬಳಗ ತುಂಬಾ ತುಂಬಾ ಕಿರಿದಮ್ಮಾ
ಇವಳಿಗೀಗ ಶರಣು ಶರಣು ಶರಣು ಕೋಟಿ ಶರಣಮ್ಮಾ...
ಹೇ..ಹೇ..ಹೆಹೆ...ಆ.ಆ.ಆ ಹೇ..ಹೇ..ಹೆಹೆ...ಆ.ಆ.ಆ
ಈ ಚಿನ್ನಮ್ಮ ನಮ್ಮಮ್ಮನಿಗೆ...
ಮಗಳಮ್ಮಾ.. ಮಗಳಮ್ಮಾ
ಈ ಗಂಗಮ್ಮ ನಮ್ಮಮ್ಮನಿಗೇ ಚೊಚ್ಚಲ ಮಗಳಮ್ಮಾ
ಹೊ.. ಚೊಚ್ಚಲ ಮಗಳಮ್ಮಾ ಹೋ.. ಕೆಚ್ಚಲ ಮಗಳಮ್ಮಾ
ಆ.. ಮಂಜಮ್ಮ ನಮ್ಮಮ್ಮನಿಗೇ...
ತಂಗ್ಯಮ್ಮಾ ... ತಂಗ್ಯಮ್ಮಾ
ಈ.. ಗಾಳ್ಯಾಮ್ಮ ನಮ್ಮಮ್ಮನಿಗೇ..
ಹತ್ತಿರದವಳಮ್ಮಾ ಹೋ.. ಬಿಟ್ಟಿರದವಳಮ್ಮಾ
ನಮ್ಮ ಅಮ್ಮನೂರಿನ ಬಳಗ ತುಂಬಾ ತುಂಬಾ ಕಿರಿದಮ್ಮಾ
ಇವಳಿಗೀಗ ಶರಣು ಶರಣು ಶರಣು ಕೋಟಿ ಶರಣಮ್ಮಾ...
ಈ ಸುಗ್ಗಿ ತಂದವಳರಾಮ್ಮಾ..... ನಮ್ಮಮ್ಮಾ ನಮ್ಮಮ್ಮಾ
ಈ ಹುಗ್ಗಿ ತಂದವಳಾರಮ್ಮಾ.... ಭೂಮಿ ತಾಯಮ್ಮಾ....
ಈ ಅಂಬಲಿ ತಂದವಳರಮ್ಮಾ... ನಮ್ಮಮ್ಮಾ ನಮ್ಮಮ್ಮಾ
ಈ.. ಓಕುಳಿ ತಂದವರಾರಮ್ಮಾ ಭೂಮಿ ತಾಯಮ್ಮಾ...
ಈ ಅಂಬಲಿ ತಂದವಳರಮ್ಮಾ... ನಮ್ಮಮ್ಮಾ ನಮ್ಮಮ್ಮಾ
ಈ.. ಓಕುಳಿ ತಂದವರಾರಮ್ಮಾ ಭೂಮಿ ತಾಯಮ್ಮಾ...
ಓ... ಒಂದು ನೆಲ್ಲು ಚೆಲ್ಲಿದರೇ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ...
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ಇವಳದೇನು ಕರುಣೆ ಪ್ರೀತಿಯೋ...
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ಹೊ.. ಹೊ.. ಹೋಹೋ.. ಹೊ..ಹೊ.. ಹೋಹೊಹೋ..
ಹೊ.. ಹೊ.. ಹೋಹೋ.. ಹೊ..ಹೊ.. ಹೋಹೊಹೋ..
ಈ ಕರಿಯ ನೇಗಿಲು ಕಟ್ಟಿದರು... ಅಚ್ಚಮ್ಮಾ.. ಮೆಚ್ಚಮ್ಮಾ
ಈ.. ಬಿಳಿಯ ಕಾಳು ಬಿತ್ತಿದರು... ಬೇಡ ಅನಳಮ್ಮಾ.. ಬೇಧ ಇರದಮ್ಮಾ
ಈ.. ಕೆಂಚ ಗೊಬ್ಬರ ಹರವಿದರೋ... ಅಚ್ಚಮ್ಮಾ... ಮೆಚ್ಚಮ್ಮಾ..
ಈ.. ಎಡಚ ಕವಣೆ ಬೀರಿದರೂ ಪಾಪ ಅನಳಮ್ಮಾ ... ಕೋಪ ಇರದಮ್ಮಾ
ನಮ್ಮ ಅಮ್ಮ ಎಂದು ಎಂದು ಮೇಲು ಕೀಳು ಮಾಡಿಲ್ಲಾ...
ಮಕ್ಕಳಾಗಿ ನಾವು ಅವಳ ಲಾಲಿ ಹಾಡಬೇಕಮ್ಮಾ..

ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು(ದುಃಖದ ಹಾಡು )
ಸಂಗೀತ/ಸಾಹಿತ್ಯ: ಹಂಸಲೇಖ
ಹಾಡಿದವರು: ಮನು, ಶ್ಯಾಮಲಾ ಭಾವೆ
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಹೇಳಿಕೆಯ ಕೇಳಿಕೆಯಾ ಪೊಳ್ಳು ಮಾತಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಹೇಳಿಕೆಯ ಕೇಳಿಕೆಯಾ ಪೊಳ್ಳು ಮಾತಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಅವಳ ಸಣ್ಣತನ ಮನೆಯ ಮುರಿಯುತಿದೆ..
ಅವಳ ಜಾಣತನ ಮನವ ಉರಿಸುತಿದೆ..
ಇದು ಮುಗಿಯದ ಗೊಡವೆ ಬರಿ ಬೊಂಬೆಯ ಮದುವೇ
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ನಮ್ಮೋರು ತಮ್ಮರೊ ಅನ್ನುವುದೆಲ್ಲಾ ಈ ಹಳ್ಳಿಯ ಮಣ್ಣಲ್ಲೇ ಹುಟ್ಟಿದೇ
ಕಷ್ಟಾನೋ ನಷ್ಟಾನೋ ಬಾಳುವೆ ಮಾಡೋ
ಆ ಕಾತುರ ಅಕ್ಕರೆ ನಮಗಿದೆ
ಪ್ರೀತಿ ಬಿತ್ತಲೂ ಎದೆಯ ಉತ್ತಲು ಕಳೆಯ ಕೀಳದೆ ತೆನೆಯ ಕಿತ್ತಳು
ಹೆಣ್ಣು ಮಣ್ಣೆಲ್ಲಾ ಬೆಳೆ ಬಂದಂತೇ... ನಮ್ಮ ಋಣ ಇದ್ದಂತೇ
ಬಾ ಕಳೆ ತೇಗಿ ಕಳೆ ತೇಗಿ
ಕಷ್ಟಾನೋ ನಷ್ಟಾನೋ ಬಾಳುವೆ ಮಾಡೋ
ಆ ಕಾತುರ ಅಕ್ಕರೆ ನಮಗಿದೆ
ಪ್ರೀತಿ ಬಿತ್ತಲೂ ಎದೆಯ ಉತ್ತಲು ಕಳೆಯ ಕೀಳದೆ ತೆನೆಯ ಕಿತ್ತಳು
ಹೆಣ್ಣು ಮಣ್ಣೆಲ್ಲಾ ಬೆಳೆ ಬಂದಂತೇ... ನಮ್ಮ ಋಣ ಇದ್ದಂತೇ
ಬಾ ಕಳೆ ತೇಗಿ ಕಳೆ ತೇಗಿ
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಪುಟ್ನಂಜ ಪುಟ್ನಂಜ ಅಂದರೂ ನನ್ನ
ನಾ ನಂಜನೂ ನಿಜವಾಗಿ ನುಂಗಿದೇ..
ಸಾಯಲ್ಲ ಸಾಯಸಲ್ಲ ಹೆಣ್ಣಿನ ನಂಜು ಈ ಅಂಜದ ಗಂಡಿಗೆ ಅಂಜಿದೇ...
ಬಾಳಿನ ನೊಗದಲಿ ಒಂಟಿ ಎತ್ತು ನಾ..
ಬಾಗಿಲೇ ಇಲ್ಲದ ಹೊಸ್ತಿಲು ಈಗ ನಾ..
ಮನಸು ಮನೆಯಲ್ಲಾ ಸುಖ ಇದ್ದಷ್ಟೇ ನಗುಮುಖ ಇದ್ದಷ್ಟೇ..
ಬಾ ದುಃಖ ತೆಗಿ ... ದುಃಖ ತೆಗಿ
ನಾ ನಂಜನೂ ನಿಜವಾಗಿ ನುಂಗಿದೇ..
ಸಾಯಲ್ಲ ಸಾಯಸಲ್ಲ ಹೆಣ್ಣಿನ ನಂಜು ಈ ಅಂಜದ ಗಂಡಿಗೆ ಅಂಜಿದೇ...
ಬಾಳಿನ ನೊಗದಲಿ ಒಂಟಿ ಎತ್ತು ನಾ..
ಬಾಗಿಲೇ ಇಲ್ಲದ ಹೊಸ್ತಿಲು ಈಗ ನಾ..
ಮನಸು ಮನೆಯಲ್ಲಾ ಸುಖ ಇದ್ದಷ್ಟೇ ನಗುಮುಖ ಇದ್ದಷ್ಟೇ..
ಬಾ ದುಃಖ ತೆಗಿ ... ದುಃಖ ತೆಗಿ
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಹೇಳಿಕೆಯ ಕೇಳಿಕೆಯಾ ಪೊಳ್ಳು ಮಾತಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಅವಳ ಸಣ್ಣತನ ಮನೆಯ ಮುರಿಯುತಿದೆ..
ಅವಳ ಜಾಣತನ ಮನವ ಉರಿಸುತಿದೆ..
ಇದು ಮುಗಿಯದ ಗೊಡವೆ ಬರಿ ಬೊಂಬೆಯ ಮದುವೇ
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
*********************************************************************************
ದಸರಾ ಗೊಂಬೆ
ಸಂಗೀತ/ಸಾಹಿತ್ಯ: ಹಂಸಲೇಖ
ಹಾಡಿದವರು: ಮನು
ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ
ಗೊಂಬೆ ಗೊಂಬೆ ಓ.. ಗೊಂಬೆ
ಬಾ ನನಗು ನಿನಗೂ ಒಳಗು ಹೊರಗೂ
ನಂಟು ಇದೆ ಒಂದು ಗಂಟು ಇದೆ
ರಾಣಿ ರಾಣಿ ಯುವರಾಣಿ
ನೀ ದೀಪ ಇಡದೆ ಬೆಳಕು ಬರದೇ ಕಾಯುತಿದೆ ಮನೆ ಮಬ್ಬಲ್ಲಿದೆ
ನನಗಿಂತ ನೀ ಹೆಚ್ಚು ನಿನಗಿಂತ ನಾ ಹೆಚ್ಚು
ಈ.. ಭಾವನೆ ಬರಿ ಹುಚ್ಚು ಬಾ ಮನೆ ದೀಪ ಹಚ್ಚು
ಬಾ.. ಹೊನ್ನರಸಿ ನನ್ನರಸಿ ಬಂದೆ ಬಂದೆ ನಿನ್ನರಸಿ
ದಸರಾ ಗೊಂಬೆ ನಿನ್ನನ್ನು ನೋಡಲು ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಗೊಂಬೆ ನಿನ್ನನ್ನು ನೋಡಲು ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ ಆಸೆ ಹೊತ್ತು ತಂದೆ ಕಣೇ

ಪ್ರೀತಿ ಒಮ್ಮೆ ಹುಟ್ಟಿದರೆ ಅದು ಹೇಳೋ ಹಾಗೆ ಕೇಳೊದೊಂದೇ
ನಮ್ಮ ಕೆಲಸ ಬೇಡ ಈ ವಿರಸ
ಪ್ರೀತಿ ಹೆಚ್ಚು ಉಕ್ಕಿದರೆ ಅದು ಹೇಳೋರೆದುರು ಕುಣಿಯೊಂದೊಂದೇ
ನಮ್ಮ ಕೆಲಸ ನಾ ನಿನ್ನರಸ
ಓ.. ಬಾನೇ ಕೊನೆಯಲ್ಲಾ.. ಜಗಳಾನೇ ಜಗವಲ್ಲಾ
ಅನುಸರಿಸಿ ಬಂದರೆ ಬಂಗಾರ ಬಾಳೆಲ್ಲಾ
ಬಾ ನನ್ನರಸಿ ನನ್ನರಸಿ ಬಂದೆ ಬಂದೆ ನಿನ್ನರಸಿ
ದಸರಾ ಗೊಂಬೆ ನಿನ್ನನ್ನು ನೋಡಲು ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಗೊಂಬೆ ನಿನ್ನನ್ನು ನೋಡಲು ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ ಆಸೆ ಹೊತ್ತು ತಂದೆ ಕಣೇ
ನಮ್ಮ ಕೆಲಸ ಬೇಡ ಈ ವಿರಸ
ಪ್ರೀತಿ ಹೆಚ್ಚು ಉಕ್ಕಿದರೆ ಅದು ಹೇಳೋರೆದುರು ಕುಣಿಯೊಂದೊಂದೇ
ನಮ್ಮ ಕೆಲಸ ನಾ ನಿನ್ನರಸ
ಓ.. ಬಾನೇ ಕೊನೆಯಲ್ಲಾ.. ಜಗಳಾನೇ ಜಗವಲ್ಲಾ
ಅನುಸರಿಸಿ ಬಂದರೆ ಬಂಗಾರ ಬಾಳೆಲ್ಲಾ
ಬಾ ನನ್ನರಸಿ ನನ್ನರಸಿ ಬಂದೆ ಬಂದೆ ನಿನ್ನರಸಿ
ದಸರಾ ಗೊಂಬೆ ನಿನ್ನನ್ನು ನೋಡಲು ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಗೊಂಬೆ ನಿನ್ನನ್ನು ನೋಡಲು ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ ಆಸೆ ಹೊತ್ತು ತಂದೆ ಕಣೇ
*********************************************************************************
ರಂಗೇರೂ ಹೋಳಿ
ಸಂಗೀತ/ಸಾಹಿತ್ಯ: ಹಂಸಲೇಖ
ಹಾಡಿದವರು: ಮನು, ಮಿನ್ಮಿನಿ
ತಂದಾನಾನಾ ನಾನಾ ತಾನನನ
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ...
ಚೀ ಪೋಲಿ.. ಚೀ ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ...
ಚೀ ಪೋಲಿ.. ಚೀ ಪೋಲಿ..
ಮಂದಾರ ಹೋಳಿ.. ಶೃಂಗಾರ ಹೋಳಿ
ಮಂದಾರ ಹೋಳಿ ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ.. ಓಹ್..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ...
ಚೀ ಪೋಲಿ.. ಚೀ ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ...
ಚೀ ಪೋಲಿ.. ಚೀ ಪೋಲಿ..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ...
ಚೀ ಪೋಲಿ.. ಚೀ ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ...
ಚೀ ಪೋಲಿ.. ಚೀ ಪೋಲಿ..
ಮಂದಾರ ಹೋಳಿ.. ಶೃಂಗಾರ ಹೋಳಿ
ಮಂದಾರ ಹೋಳಿ ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ.. ಓಹ್..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ...
ಚೀ ಪೋಲಿ.. ಚೀ ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ...
ಚೀ ಪೋಲಿ.. ಚೀ ಪೋಲಿ..
ಕಣ್ಣಲ್ಲಿ ಕರೆಯೋ ಹೋಳಿ..
ಆಸೆನಾ ಕೆಣಕೋ ಹೋಳಿ
ಮುತ್ತಲ್ಲಿ ಮುಳುಗೋ ಹೋಳಿ..
ಎದೆಯಾನ ಕುಣಿಸೋ ಹೋಳಿ
ಪ್ರೀತಿಯನ್ನು ಪೂರ್ತಿ ಪಡೆಯೋ ಹೋಳಿ
ಪಡೆಯಲು ಪ್ರೀತಿ ಎರಚೋ ಹೋಳಿ
ಅಂತರಂಗ ಪೂರ್ತಿ ಅಲೆಯೋ ಹೋಳಿ
ಅಲೆಯಲು ಜೀವ ಅರೆಯೋ ಹೋಳಿ
ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ
ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ
ಆಸೆನಾ ಕೆಣಕೋ ಹೋಳಿ
ಮುತ್ತಲ್ಲಿ ಮುಳುಗೋ ಹೋಳಿ..
ಎದೆಯಾನ ಕುಣಿಸೋ ಹೋಳಿ
ಪ್ರೀತಿಯನ್ನು ಪೂರ್ತಿ ಪಡೆಯೋ ಹೋಳಿ
ಪಡೆಯಲು ಪ್ರೀತಿ ಎರಚೋ ಹೋಳಿ
ಅಂತರಂಗ ಪೂರ್ತಿ ಅಲೆಯೋ ಹೋಳಿ
ಅಲೆಯಲು ಜೀವ ಅರೆಯೋ ಹೋಳಿ
ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ
ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ.. ಓಹ್..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ... ಚೀ ಪೋಲಿ.. ಚೀ ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ... ಚೀ ಪೋಲಿ.. ಚೀ ಪೋಲಿ..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ... ಚೀ ಪೋಲಿ.. ಚೀ ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ... ಚೀ ಪೋಲಿ.. ಚೀ ಪೋಲಿ..
ಮನ್ಮಥನ ಊರ ಕೋಳಿ ಕೂಗಲ್ಲ ಮೇಲಿ ಏಳಿ
ಆಡೋದೇ ಅದರ ಜೋಲಿ ಹೊಳೀಲಿ ಕಾಮ ಕೇಳಿ
ಕಾವಿನಲಿ ಕಾಮ ಕರಗೋವಾಗ
ನೂರು ಮರು ಜನ್ಮ ಪಡೆಯೋ ಹೋಳಿ
ಪ್ರಾಯದಲಿ ಪ್ರೇಮ ಬೆರೆಯುವಾಗ
ಜೋಲಿ ಜೋಲಿ ಹೊಡೆಯೋ ಹೋಳಿ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ
ಆಡೋದೇ ಅದರ ಜೋಲಿ ಹೊಳೀಲಿ ಕಾಮ ಕೇಳಿ
ಕಾವಿನಲಿ ಕಾಮ ಕರಗೋವಾಗ
ನೂರು ಮರು ಜನ್ಮ ಪಡೆಯೋ ಹೋಳಿ
ಪ್ರಾಯದಲಿ ಪ್ರೇಮ ಬೆರೆಯುವಾಗ
ಜೋಲಿ ಜೋಲಿ ಹೊಡೆಯೋ ಹೋಳಿ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲೀ.. ಹೋ..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ... ಚೀ ಪೋಲಿ.. ಚೀ ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ... ಚೀ ಪೋಲಿ.. ಚೀ ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ... ಚೀ ಪೋಲಿ.. ಚೀ ಪೋಲಿ..
ಮಂದಾರ ಹೋಳಿ.. ಶೃಂಗಾರ ಹೋಳಿ
ಮಂದಾರ ಹೋಳಿ ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ.. ಓಹ್..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ... ಚೀ ಪೋಲಿ.. ಚೀ ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ... ಚೀ ಪೋಲಿ.. ಚೀ ಪೋಲಿ..
ಮಂದಾರ ಹೋಳಿ ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ.. ಓಹ್..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ... ಚೀ ಪೋಲಿ.. ಚೀ ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ... ಚೀ ಪೋಲಿ.. ಚೀ ಪೋಲಿ..
*********************************************************************************
ನಾನ್ ಪುಟ್ಟನಂಜ
ಸಂಗೀತ/ಸಾಹಿತ್ಯ: ಹಂಸಲೇಖ
ಹಾಡಿದವರು: ಮನು
ಧಿಂಧಗ ತತ್ತತತಾ ಧಿಂಧಗ ತತ್ತತತಾ
ಧಿಂಧಗ ತತ್ತತತಾ.... ತಾ...
ಧಿಂಧಗ ತತ್ತತತಾ.... ತಾ...
ನಂಜನಗೂಡು ನಮ್ಮೂರು
ಧಿಂಧಗ ತತ್ತತತಾ ಧಿಂಧಗ ತತ್ತತತಾ
ಧಿಂಧಗ ತತ್ತತತಾ.... ತಾ...
ಧಿಂಧಗ ತತ್ತತತಾ.... ತಾ...
ನಂಜುಂಡಾನೇ ನಮ್ಮ ದೇವರೂ...
ನಮ್ ತಾತ್ ನಂಜ.. ಮುತ್ತಾತ ನಂಜ...
ನಂಜಿಲ್ಲದ ಕುಲದಲ್ಲಿ ಪಂಚಗಿರೋ ಮಗರಾಯ
ನಾನ್ ಪುಟ್ಟ ನಂಜ ನಾನ್ ಪುಟ್ಟ ನಂಜ
ನಾನ್ ಪುಟ್ಟ ನಂಜ ನಾನ್ ಪುಟ್ನಂಜಾ ........
ಹಲೋ ಹಲೋ ಹಲೋ ಹಲೋ ಹಲೋ ಮಾವ...
ಹಲೋ ಹಲೋ ಹಲೋ ಹಲೋ ಹಲೋ ಮಾವ...
ನಾನ್ ಪುಟ್ಟ ನಂಜ ನಾನ್ ಪುಟ್ಟ ನಂಜ
ನಾನ್ ಪುಟ್ಟ ನಂಜ ನಾನ್ ಪುಟ್ನಂಜಾ ........
ಮಾನಾನೇ ನಮ್ಮ ಮನೆಯ ತಲೆಬಾಗಿಲಣ್ಣ.. ಓಓಓಓಓ...
ಮಾನಾನ ಉಳಿಸೋಕ್ಕೆ ತಲೆ ಹೋಗಲ್ಲಣ್ಣಾ .. ಓಓಓಓಓ...
ಧಿಂಧಗ ತತ್ತತತಾ ಧಿಂಧಗ ತತ್ತತತಾ ಧಿಂಧಗ ತತ್ತತತಾ.... ತಾ...
ನ್ಯಾಯ ಹೇಳೋ ಮನೆಯಣ್ಣಾ...
ಧಿಂಧಗ ತತ್ತತತಾ ಧಿಂಧಗ ತತ್ತತತಾ
ಧಿಂಧಗ ತತ್ತತತಾ.... ತಾ...
ಧಿಂಧಗ ತತ್ತತತಾ.... ತಾ...
ಝರಿ ಪೇಟದ ಕುಲವಣ್ಣಾ...
ನಮ್ಮಪ್ಪ ರೈತ... ದೊಡ್ಡಪ್ಪ ರೈತ...
ನಮ್ಮಪ್ಪ ರೈತ... ದೊಡ್ಡಪ್ಪ ರೈತ...
ಕುಂತುಂಡರು ಕರಗಲ್ಲ ಬೇಸಾಯವ ಮರೆತಿಲ್ಲಾ...
ನಾನ್ ಪುಟ್ಟ ನಂಜ ನಾನ್ ಪುಟ್ಟ ನಂಜ
ನಾನ್ ಪುಟ್ಟ ನಂಜ ನಾನ್ ಪುಟ್ನಂಜಾ ........
ಹಲೋ ಹಲೋ ಹಲೋ ಹಲೋ ಹಲೋ ಮಾವ...
ಹಲೋ ಹಲೋ ಹಲೋ ಹಲೋ ಹಲೋ ಮಾವ...
ನಾನ್ ಪುಟ್ಟ ನಂಜ ನಾನ್ ಪುಟ್ಟ ನಂಜ
ನಾನ್ ಪುಟ್ಟ ನಂಜ ನಾನ್ ಪುಟ್ನಂಜಾ ........
ಒಳಗೊಂದು ಹೊರಗೊಂದು
ನಮ್ಮೂರಲಿಲ್ಲ... ಓಓಓಓಓ.. ...
ನಮ್ಮೂರಲಿಲ್ಲ... ಓಓಓಓಓ.. ...
ಬಿತ್ತೋದೆ ಬೆಳಿತೀವಿ ನಮ್ಮೂರಲ್ಲೆಲ್ಲಾ .. ಓಓಓಓಓ.. ...
ಧಿಂಧಗ ತತ್ತತತಾ ಧಿಂಧಗ ತತ್ತತತಾ
ಧಿಂಧಗ ತತ್ತತತಾ.... ತಾ...
ಧಿಂಧಗ ತತ್ತತತಾ.... ತಾ...
ಅಷ್ಟೋ ಇಷ್ಟೋ ಓದೋರು
ಧಿಂಧಗ ತತ್ತತತಾ ಧಿಂಧಗ ತತ್ತತತಾ
ಧಿಂಧಗ ತತ್ತತತಾ.... ತಾ...
ಧಿಂಧಗ ತತ್ತತತಾ.... ತಾ...
ಊರಿಗೆ ಅನ್ನ ನೀಡೋರು..
ನಮ್ಮ ತಾಯಿ ಹೆಣ್ಣು ಭೂಮಿ ತಾಯಿ ಹೆಣ್ಣು
ನಮ್ಮ ತಾಯಿ ಹೆಣ್ಣು ಭೂಮಿ ತಾಯಿ ಹೆಣ್ಣು
ಹೆಣ್ಣೆಂದರೆ ಕೈಮುಗಿಯೋ ಕರುನಾಡಿನ ಕರು ನಾನು
ನಾನ್ ಪುಟ್ಟ ನಂಜ ನಾನ್ ಪುಟ್ಟ ನಂಜ
ನಾನ್ ಪುಟ್ಟ ನಂಜ ನಾನ್ ಪುಟ್ನಂಜಾ ........
ಹಲೋ ಹಲೋ ಹಲೋ ಹಲೋ ಹಲೋ ಮಾವ...
ಹಲೋ ಹಲೋ ಹಲೋ ಹಲೋ ಹಲೋ ಮಾವ...
ಹಲೋ ಹಲೋ ಹಲೋ ಹಲೋ ಹಲೋ ಮಾವ...
ಹಲೋ ಹಲೋ ಹಲೋ ಹಲೋ ಹಲೋ ಮಾವ...
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು
ಸಂಗೀತ/ಸಾಹಿತ್ಯ: ಹಂಸಲೇಖ
ಹಾಡಿದವರು: ಮನು, ಚಿತ್ರಾ
ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲಾ ಆಸೆ ಊರಗಲಾ
ಇದು ತಾವರೆಯ ಹೂವೋ ಬಲು ಮಾಗಿದ ಮಾವೋ
ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲಾ ಆಸೆ ಊರಗಲಾ
ಇದು ತಾವರೆಯ ಹೂವೋ ಬಲು ಮಾಗಿದ ಮಾವೋ
ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಮಾಮ ಮಾಮ ಮಾಮ ಮಾಮ ಮಾಮ ಮಾಮ
ನಮ್ಮೋರು ತಮ್ಮೋರು ಅನ್ನುವ ಹಾಗೇ..
ಈ ಸೀರೆಗೆ ಓರೆಗೆ ಈ ನೆರಿಗೆಗೆ
ಚಿನ್ನ ನೀ ರನ್ನ ನೀ ಅನ್ನಲು ನಾನು...
ಈ ಕಿವಿಗೆ ಗಿಲಕಿಕ್ಕಿ ಝುಮುಕಿಯೇ...
ಪಟ್ಟಣದ ಈ ಬೋಂಬೆ ಅರಿಶಿನ ಅಚ್ಚವಳೇ..
ಮುತ್ತಿನಂಥ ಈ ರಾಣಿ ಮುತ್ತು ನತ್ತು ಮೆಚ್ಚವಳೇ
ನಾಚಿ ನೀರಾಗಿ ಹೊಳೆ ಆಗವಳೇ ಮೈಕಳೆ ಹೆರವಳೇ
ಬಾ ದೃಷ್ಟಿ ತೇಗಿ... ಬಾ ದೃಷ್ಟಿ ತೇಗಿ
ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಮಾಮ ಮಾಮ ಮಾಮ ಮಾಮ ಮಾಮ ಮಾಮ
ಮುಂಜಾನೆ ಮುತ್ತಾಗಿ ಬೀಸುವ ಗಾಳೀ...
ಈ ಮಡದಿ ನನ್ನಾ ಈ ಮನೆಯಲೀ....
ಚೆಂದದಾ ಜೋಡೆತ್ತು ನಾವು ಬಾಲನೊಗದಲಿ
ಅಂದದಾ ರಂಗೋಲಿ ಮನೆ ಮೊಗದಲಿ
ಹೆಣ್ಣು ಮಣ್ಣೆಲ್ಲಾ ವರ ಸಿಕ್ಕದಂತೆ ನಮ್ಮ ಪುಣ್ಯ ಇದ್ದಂತೇ..
ಬಾ ದೃಷ್ಟಿ ತೇಗಿ... ಬಾ ದೃಷ್ಟಿ ತೇಗಿ
ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲಾ ಆಸೆ ಊರಗಲಾ
ಇದು ತಾವರೆಯ ಹೂವೋ ಬಲು ಮಾಗಿದ ಮಾವೋ
ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಕಣ್ಣು ಕಾಸಗಲಾ ಆಸೆ ಊರಗಲಾ
ಇದು ತಾವರೆಯ ಹೂವೋ ಬಲು ಮಾಗಿದ ಮಾವೋ
ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ
*********************************************************************************
No comments:
Post a Comment