Thursday, September 13, 2018

ರಸಿಕ (1994)


ಅಂಬರವೇರಿ

ಚಲನ ಚಿತ್ರ: ರಸಿಕ (1994)
ಸಾಹಿತ್ಯ: ಹಂಸಲೇಖ 
ಸಂಗೀತ: ಹಂಸಲೇಖ 
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ  
ನಿರ್ದೇಶನ: ದ್ವಾರಕೀಶ್ 
ನಟನೆ: ವಿ. ರವಿಚಂದ್ರನ್, ಭಾನುಪ್ರಿಯಾ, ಶೃತಿ


ಅಂಬರವೇರಿ ಅಂಬರವೇರಿ
ಸೂರ್ಯನು ಬಂದಾನೊ 
ಥಳಾ ಥಳ ಥಳಾ ಜಗಾ ಥಳಾ ಥಳ ಥಳಾ 
ಫಳಾ ಫಳ ಫಳಾ ಜಗಾ ಫಳಾ ಫಳ ಫಳಾ 
ಓಓಓಓಓಓಓಓಓ...
ಓಓಓಓಓಓಓಓಓ...   

ಬಿಸಿಯಾಯ್ತು ಗಿರಿಯ ಮೈಯಿ
ಚುರುಕಾಯ್ತು ಗಿಳಿಯ ಕೈಯ್ಯಿ   
ಏಳಿ ಮೇಲೆ ಏಳಿ ಚಿಲಿಪಿಲಿ ಕೇಳಿ
ಎಂದ ರವಿರಾಯನು 
ಮರ ಗಿಡದ ತಲೆಯ ಒರಸಿ
ಹಿಮ ಬಿದ್ದ ನೆಲವ ಗುಡಿಸಿ 
ಆಹಾ.. ಹೊಲ ಗದ್ದೆ ಇನ್ನೂ ಎಂಥಾ
ನಿದ್ದೆ ಎಂದಾ ರವಿರಾಯನು 
ರವಿರಾಯಾ ನಿನ್ನ ಮನೆಕಾಯ್
ಬಿಡುವೆಂದೋ.. ನಿನಗೆ ಮಹರಾಯ 
ಧಗ ಧಗ ಉರಿಯುವೆ ... ಜಗ ಜಗ ಬೆಳುಗುವೆ
ನೀನು ಬರದೇ ದಿನವಿಲ್ಲಾ... 

ಅಂಬರವೇರಿ ಅಂಬರವೇರಿ
ಸೂರ್ಯನು ಬಂದಾನೊ 
ಥಳಾ ಥಳ ಥಳಾ ಜಗಾ ಥಳಾ ಥಳ ಥಳಾ 
ಫಳಾ ಫಳ ಫಳಾ ಜಗಾ ಫಳಾ ಫಳ ಫಳಾ 
ಓಓಓಓಓಓಓಓಓ...
ಓಓಓಓಓಓಓಓಓ...   

ಚೆಲುವೇರಾ ಹಿಂಡಿನಲ್ಲಿ ಹೊರಬರುವ ನಗುವಿನಂತೆ 
ಕಿಲಾ ಕಿಲ ಕಿಲಾ ಗುಸಾ ಗುಸ ಗುಸಾ 
ಲಲ್ಲೆಳಿವೆ ಹೂಗಳು 
ಮುಂಜಾನೆ ನೀರಿನಲ್ಲಿ ಮುಗಳುಗೆದ್ದ ಹೆಣ್ಣಾ ಮೈಲಿ 
ನಿಂತ ನೀರಿನಂತೆ ಜಾರೋ ಮುತ್ತಿನಂತೆ
ನೆಂದಾಡಿವೆ ಕಣ್ಣಗಳು 
ಹೆಣ್ಣಿರದಾ ಭೂಮಿ ಹಂಗೇಕೆ... 
ಓಓಓ  ಹೆಣ್ಣಿರದಾ ಸ್ವರ್ಗ ನಂಗೇಕೆ 
ರಸಿಕನಾ ಬಾಳಿಗೆ ಚೆಲುವೆಯೇ ಹೋಳಿಗೆ
ಎಂದನೊಬ್ಬ ಮಹಾರಸಿಕ 

ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೊ 
ಥಳಾ ಥಳ ಥಳಾ ಜಗಾ ಥಳಾ ಥಳ ಥಳಾ 
ಫಳಾ ಫಳ ಫಳಾ ಜಗಾ ಫಳಾ ಫಳ ಫಳಾ 
ಓಓಓಓಓಓಓಓಓ... ಓಓಓಓಓಓಓಓಓ... 
ಹಹಹಹಹಹಾ ಹಹಹಹಹಹಾ ಹಹಹಹಹಹಾ

*********************************************************************************



ಹಾಡೊಂದು ಹಾಡಬೇಕು

ಸಾಹಿತ್ಯ: ಹಂಸಲೇಖ
ಗಾಯಕರು: ಚಿತ್ರಾ  


ಕಲೆಗಾರ ಆ ದೇವರು ಒಬ್ಬನೆ ಕಲೆಗಾರ
ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ
ಪಂಚಮಸ್ವರ ಕೇಳುತ ದೇವರೆ ತಲೆದೂಗಿದ 

ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ನನ್ನ ಜೀವ, ನನ್ನ ಭಾವ, ಕಲಾದೇವನಿಗೆ ಸಿಂಗರಿಸೋ ಹೂಗಳು

ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು 
ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ

ಪಂಚಮಸ್ವರ ಕೇಳುತ ದೇವರೆ ತಲೆದೂಗಿದ 
ಕಲೆಯಲಿ ಅರಳುವ ಈ ಹೂವಿಗೆ ಒಲವಿನ ಹೃದಯದ ಪನ್ನೀರಿದೆ 
ನನ್ನೆದೆ ಪಲುಕುವ ಈ ರಾಗಕೆ ಪ್ರೀತಿಸಿ ಪಡೆದವನ ಶೃತಿ ಇದೆ 
ಈ ಹಾಡಲಿ ಅಪಸ್ವರವೆಲ್ಲಿದೆ ಈ ಬಾಳಲಿ ಅಪಜಯವೆಲ್ಲಿದೆ 
ನನ್ನ ಜೀವ, ನನ್ನ ಭಾವ, ಕಲಾದೇವನಿಗೆ ಸಿಂಗರಿಸೋ ಹೂಗಳು 

ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು 
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು 
ನನ್ನ ಜೀವ, ನನ್ನ ಭಾವ, ಕಲಾದೇವನಿಗೆ ಸಿಂಗರಿಸೋ ಹೂಗಳು 

ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು 
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು 

*******************************************************************************

ಹಾಡೊಂದು ಹಾಡಬೇಕು

ಸಾಹಿತ್ಯ: ಹಂಸಲೇಖ 
ಹಾಡಿದವರು: ಎಸ್.ಪಿ. ಬಾಲಸುಬ್ರಹ್ಮಣ್ಯಂ


ಕಲೆಗಾರ ........ಆ ದೇವರು ಒಬ್ಬನೆ ಕಲೆಗಾರ 
ಹೂಮನಗಳ ಮಾಡಿದ ಪ್ರೀತಿಯ ಮಧು ತುಂಬಿದ 
ಚಂದದ ಹೊಸ ಜೋಡಿಯಾ ಬಾಳಲಿ ಕಲೆ ಹಾಕಿದ   

ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು 
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು 
ನಮ್ಮ ಬಾಳು,,,, ನಮ್ಮ ಬದುಕು 
ಕಲಾ ದೇವನಿಗೆ ಸಿಂಗರಿಸೋ ಹೂಗಳು 

ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು 

ಸಾವಿರ ಮುಳ್ಳಿದ್ದರು ಮಿಂಚುವುದು ಗುಲಾಬಿ ಹೂ 
ಸಾವಿರ ಸುಳ್ಳಿದ್ದರು ಮೆರೆಯುವುದೇ ಸತ್ಯವೂ 
ನೆನ್ನೆಯ ನೆನಪಿನ ಆ ಅನುಭವ 
ನೆನೆದರೆ ಕಣ್ಗಳು ಹುಸಿಹೇಳದು 
ಕಲಕುವ ರಾಗದ ಆ ಕಲರವ 
ನೆನೆದರೆ ಹೃದಯದ ಅಲೆ ನಿಲ್ಲದು
ಈ ಜೀವನ ಇನ್ನು ಸಂಜೀವನ 
ಈ ಗಾಯನ ಪ್ರೇಮ ರಸಾಯನ 
ನಮ್ಮ ಬಾಳು ನಮ್ಮ ಬದುಕು 
ಕಲಾ ದೇವನಿಗೆ ಸಿಂಗರಿಸೋ ಹೂಗಳು 

ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು 
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು   

ಅನುರಾಗದ ಮಂಟಪ ಶುಭಮಂಗಳ ಹಾಡಿದೆ 
ಅಮ್ಮನ ಎದೆ ಹಂಬಲ ಬೆಳದಿಂಗಳ ಹಾಗಿದೆ 
ದೀವಿಸಿ ಹರಸುವ ಈಕ್ಷಣಗಳು 
ಸಾವಿರ ಪೂಜೆಯ ಶುಭಫಲಗಳು 
ನಾಳಿನ ಬಾಳಿನ ಈಸಂಗಮ 
ತಾಳಿದ ಬಾಳಿಗೆ ಸಿಹಿಸಂಭ್ರಮ 
ಈ ಹಾಡಲಿ ಅಪಸ್ವರವೆಲ್ಲಿದೆ 
ಈ ಬಾಳಲಿ ಅಪಜಯವೆಲ್ಲಿದೆ 
ನಮ್ಮ ಬಾಳು ನಮ್ಮ ಬದುಕು 
ಕಲಾ ದೇವನಿಗೆ ಸಿಂಗರಿಸೋ ಹೂಗಳು 

ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು 
ಹಾಡೊಂದು ಹಾಡಬೇಕು ಅದು ಚಿರಕಾ..ಲ ಕೇಳಬೇಕು

******************************************************************************** 

ಬಾರೇ ಹೋಗೋಣಾ

ಸಾಹಿತ್ಯ: ಹಂಸಲೇಖ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ     


ಬಾರೇ ಹೋಗೋಣಾ ಪ್ರೀತಿ ಮಾಡೋಣಾ 
ಬಾರೋ ಹೋಗೋಣಾ ಪ್ರೀತಿ ಮಾಡೋಣಾ 
ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ 
ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ 
ಕದ್ದು ಮುಚ್ಚಿ   ಕದ್ದು ಮುಚ್ಚಿ   
ಮಾಡೋದೆಲ್ಲಾ  ಮಾಡೋದೆಲ್ಲಾ 
ಆಗಿನ ಕಾಲ 
ಖುಲ್ಲಂ ಖುಲ್ಲಾ  ಖುಲ್ಲಂ ಖುಲ್ಲಾ 
ಕುಣಿಯೋದೆಲ್ಲಾ  ಕುಣಿಯೋದೆಲ್ಲಾ
ಈಗಿನ ಕಾಲ   ಈಗಿನ ಕಾಲ 

ಬಾರೇ ಹೋಗೋಣಾ ಪ್ರೀತಿ ಮಾಡೋಣಾ 
ಬಾರೋ ಹೋಗೋಣಾ ಪ್ರೀತಿ ಮಾಡೋಣಾ   

ಒಳ್ಳೆ ವಯಸ್ಸು ಒಳ್ಳೆ ಮನಸಿದೆ ಬೇರೇನೂ ಬೇಕಿದೆ 
ವರ ಪೂಜೆಗೆ ವರದಕ್ಷಿಣೆಗೆ ಕಾದಿಲ್ಲವೋ 
ಹೆಣ್ಣು ಮೆಚ್ಚೋದು ಎಲ್ಲ ಸಿಗಲಿದೆ ಅನುಮಾನವೇನಿದೆ 
ಈ ಗಂಡಿಗೆ ಜೋಡಿ ಗುಂಡಿಗೆಗೆ ಎದುರಿಲ್ಲವೋ 
ಮಾವ ಮಾವ ಮದುವೆ ಮಾಡು 
ಅಪ್ಪ ಅಪ್ಪ ಮದುವೆ ಮಾಡು 
ಮಾಡದಿದ್ರೇ ಡೇಂಜರ್ ನೋಡು   

ಬಾರೇ ಹೋಗೋಣಾ ಪ್ರೀತಿ ಮಾಡೋಣಾ 
ಬಾರೋ ಹೋಗೋಣಾ ಪ್ರೀತಿ ಮಾಡೋಣಾ 
ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ 
ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ 
ಕದ್ದು ಮುಚ್ಚಿ   ಕದ್ದು ಮುಚ್ಚಿ   
ಮಾಡೋದೆಲ್ಲಾ  ಮಾಡೋದೆಲ್ಲಾ  ಆಗಿನ ಕಾಲ 
ಖುಲ್ಲಂ ಖುಲ್ಲಾ    ಖುಲ್ಲಂ ಖುಲ್ಲಾ   
ಕುಣಿಯೋದೆಲ್ಲಾ    ಕುಣಿಯೋದೆಲ್ಲಾ
ಈಗಿನ ಕಾಲ   ಈಗಿನ ಕಾಲ 

ಬಾರೇ ಹೋಗೋಣಾ ಪ್ರೀತಿ ಮಾಡೋಣಾ 
ಬಾರೋ ಹೋಗೋಣಾ ಪ್ರೀತಿ ಮಾಡೋಣಾ   
ಪ್ರೀತಿ ಮಾಡೋರ ಕಾಲು ಎಳೆದರೇ 
ನಿಮ್ಮ ಮಾನ ಉಳಿಯದು 
ಚೆಂಡಾಡಿರಿ ದಾಂಡಾದಿರಿ ನಮ್ಮ ಆಟಕೆ 
ಪ್ರೀತಿ ಮಾಡೋರ ಗುಂಪು ದೊಡ್ಡದು ನಿಮ್ಮದೇನು ಸಾಗದು 
ಮಡಿ ಮಾಯವೋ ಕುಲ ಮಾಯವೋ ನಮ್ಮ ಕಾಲಕೆ 
ಮಾವ ಮಾವ ಮದುವೆ ಮಾಡು
ಅಪ್ಪ ಅಪ್ಪ ಮದುವೆ ಮಾಡು 
ಮಾಡದಿದ್ರೇ ಡೇಂಜರ್ ನೋಡು 

ಬಾರೇ ಹೋಗೋಣಾ ಪ್ರೀತಿ ಮಾಡೋಣಾ 
ಬಾರೋ ಹೋಗೋಣಾ ಪ್ರೀತಿ ಮಾಡೋಣಾ 
ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ 
ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ 
ಕದ್ದು ಮುಚ್ಚಿ   ಕದ್ದು ಮುಚ್ಚಿ   
ಮಾಡೋದೆಲ್ಲಾ  ಮಾಡೋದೆಲ್ಲಾ  ಆಗಿನ ಕಾಲ 
ಖುಲ್ಲಂ ಖುಲ್ಲಾ    ಖುಲ್ಲಂ ಖುಲ್ಲಾ   
ಕುಣಿಯೋದೆಲ್ಲಾ    ಕುಣಿಯೋದೆಲ್ಲಾ
ಈಗಿನ ಕಾಲ   ಈಗಿನ ಕಾಲ 

ಬಾರೇ ಹೋಗೋಣಾ ಪ್ರೀತಿ ಮಾಡೋಣಾ 
ಬಾರೋ ಹೋಗೋಣಾ ಪ್ರೀತಿ ಮಾಡೋಣಾ

********************************************************************************

No comments:

Post a Comment