Monday, September 10, 2018

ಸೀತಾ (1970)


ಚಲನ ಚಿತ್ರ: ಸೀತಾ (1970)
ಸಂಗೀತ: ವಿಜಯ ಭಾಸ್ಕರ್ 
ಸಾಹಿತ್ಯ:R N  ಜಯಗೋಪಾಲ್ 
ನಿರ್ದೇಶನ: ವಾದಿರಾಜ್ 
ಗಾಯಕರು:S  P  ಬಾಲಸುಬ್ರಮಣ್ಯಂ 
ನಟನೆ: ಕಲ್ಪನಾ, ಗಂಗಾಧರ್, ಕೆ. ಎಸ್. ಅಶ್ವಥ್, ಶ್ರೀನಾಥ್   


ಶುಭಾಶಯಾ ......ಶುಭಾಶಯಾ.........
ಮದುಮಗನಿಗೂ......ಮದುಮಗಳಿಗೂ .......
ಶುಭಾಶಯಾ..... ಹೊಸ ಹರೆಯದ ,
ಹೊಸ ಜೋಡಿಗೆ ಶುಭಾಶಯ....

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ

ಸವಿಯಾದ ಮಾತು , ಸಿಹಿಯಾದ ಊಟ ,
ಸೊಗಸಾದ ನೋಟವಿರಲಿ
ಸವಿಯಾದ ಮಾತು , ಸಿಹಿಯಾದ ಊಟ ,
ಸೊಗಸಾದ ನೋಟವಿರಲಿ
ಮನೆ ತುಂಬುವಂತ,ನಗೆ ಚೆಲ್ಲುವಂತ ,
ಮುದ್ದಾದ ಮಗುವು ಬರಲಿ

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ

ಮನಸನ್ನು ಅರಿತು, ಒಂದಾಗಿ ಬೆರೆತು
ನಡೆದಾಗ ಬಾಳು ಕವಿತೆ
ಮನಸನ್ನು ಅರಿತು, ಒಂದಾಗಿ ಬೆರೆತು
ನಡೆದಾಗ ಬಾಳು ಕವಿತೆ
ನೂರೊಂದು  ವರುಷ ,ಚೆಲ್ಲಿರಲಿ ಹರುಷ ,
ಬೆಳಗಿರಲಿ ಒಲವ ಹಣತೆ


ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ

ಸಿರಿತನದ ಸಿಹಿಯು, ಬಡತನದ ಕಹಿಯು ,
ನಿಮಗೆಂದು ಒಂದೇ ಇರಲಿ
ಸಿರಿತನದ ಸಿಹಿಯು, ಬಡತನದ ಕಹಿಯು ,
ನಿಮಗೆಂದು ಒಂದೇ ಇರಲಿ
ಸಮನಾದ ಪ್ರೀತಿ, ತೋರುವುದೇ ರೀತಿ,
ಬಿರುಗಾಳಿ ಏನೇ ಬರಲಿ

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ.


********************************************************************************

ಬರೆದೆ ನೀನು ನಿನ್ನ ಹೆಸರ

ಸಾಹಿತ್ಯ: ಆರ್.ಎನ್. ಜಯಗೋಪಾಲ್ 
ಗಾಯಕರು: ಎಸ್.ಜಾನಕಿ 

ಬರೆದೆ ನೀನು ನಿನ್ನ ಹೆಸರ 
ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೋ ಏನೋ
ನನ್ನ ಮನದ ಗುಡಿಯಲಿ
ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲಿ 

ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆ ಅದರಲಿ ||೨ ಸಲ||
ಬೆರೆತು ಹೋದೆ ಮರೆತು ನಿಂದೆ
ಅದರ ಮಧುರ ಸ್ವರದಲಿ
ಬರೆದೆ ನೀನು ನಿನ್ನ ಹೆಸರು
ನನ್ನ ಬಾಳ ಪುಟದಲಿ 

ಕಂಗಳಲ್ಲೇ ಕವನ ಬರೆದು
ಕಳಿಸಿದೆ ನೀ ಇಲ್ಲಿಗೆ ||೨ ಸಲ||
ಅಂಗಳದೇ ಅರಳಿತಾಗ 
ನನ್ನ ಒಲವ ಮಲ್ಲಿಗೆ
ಬರೆದೆ ನೀನು ನಿನ್ನ ಹೆಸರು
ನನ್ನ ಬಾಳ ಪುಟದಲಿ 

ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೆ  ||೨ ಸಲ||
ಬಂಧಿಸಿದೆ ನನ್ನನಿಂದು
ನಿನ್ನ ಪ್ರೇಮ ಪಾಶದೆ ||ಬರೆದೆ ನೀನು||


*********************************************************************************

No comments:

Post a Comment