ಯಾರಿಗೆ ಬೇಕು ಈ ಲೋಕ
ಚಲನ ಚಿತ್ರ: ಸಿಪಾಯಿ (1996)ಸಾಹಿತ್ಯ & ಸಂಗೀತ: ಹಂಸಲೇಖ

ನಿರ್ದೇಶನ: ವಿ. ರವಿಚಂದ್ರನ್
ನಟನೆ: ವಿ. ರವಿಚಂದ್ರನ್, ಸೌಂದರ್ಯಾ, ಚಿರಂಜೀವಿ
ಯಾರಿಗೆ ಬೇಕು ಈ ಲೋಕ.. ll ಪ. ll
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ... ll ಅ.ಪ. ll
ಮಕ್ಕಳನ್ನೇ ಜೂಜಲ್ಲಿ ಇಡುವಾಗ,
ನೋಡಿಕೊಂಡು ಇರಬೇಕಾ?
ಯುಧ್ಧವನ್ನು ಗೆಲ್ಲೋಕ್ಕೆ ಬಲ್ಲವನು,
ಕೈಕಟ್ಟಿ ಕೂರಬೇಕಾ?
ನಾರಿಯೇ ಕಾಂಚನ, ಕೌರವರ ಮೋಜಿಗೆ!
ಧರ್ಮವೇ ಲಾಂಛನ, ಪಾಂಡವರ ಜೂಜಿಗೆ!! ll ೧ ll
ನರಿಗಳು ನ್ಯಾಯಾನ ಹೇಳುವಾಗ,
ಕಿವಿಕೊಟ್ಟು ಕೇಳಬೇಕಾ?
ಮೊಸಳೆಯು ಕಣ್ಣೀರು ಇಡುವಾಗ,
ಕೂಡಿಕೊಂಡು ಅಳಬೇಕಾ?
ತಡೆದರೂ ಈ ದಿನ, ಮನಸಿನ ನಾಯಕ,
ಬಿಟ್ಟರೆ ಎಲ್ಲರ ಸೀಳುವ ಸೈನಿಕ!! ll ೨ ll
********************************************************************************

ಹೇ ನಮಸ್ತೆ ಕರುನಾಡಿಗೆ
ಸಾಹಿತ್ಯ: ಹಂಸಲೇಖಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ
ಹೇ ನಮಸ್ತೇ ಕರುನಾಡಿಗೆ
ಚಿರಕಾಲ ಇರಲಿ ಈ ಸ್ನೇಹ
ಚಿರಕಾಲ ಇರಲಿ ಈ ಸ್ನೇಹ
ಚಿರಕಾಲ ಇರಲಿ ಈ ಪ್ರೇಮ
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ನೆನಪು ||೨||
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ
ಚಿರಕಾಲ ಇರಲಿ ಈ ಪ್ರೇಮ
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ನೆನಪು
ಪಕ್ಕದ ಊರು ನನ್ನೂರು
ಹಿಂದೊಮ್ಮೆ ಎರಡು ಒಂದೂರು
ಇಲ್ಲಿನ ಜನರು ನಿನ್ನೋರು
ಇಲ್ಲಿನ ಜನರು ನಿನ್ನೋರು
ಒಂದಾಗಿ ಇರುವ ಅನ್ನೋರು
ನಿಮ್ಮೂರ ದಾಸಪದ ನಮ್ಮೂರಲ್ಲಿ
ನಿಮ್ಮೂರ ದಾಸಪದ ನಮ್ಮೂರಲ್ಲಿ
ನಿಮ್ಮೂರ ಜಾನಪದ ನಮ್ಮೂರಲ್ಲಿ
ತಿಮ್ಮ ನಿಮ್ಮವನು ರಾಯ ನಮ್ಮವನು
ತಿಮ್ಮ ನಿಮ್ಮವನು ರಾಯ ನಮ್ಮವನು
ನಮ್ಮ ದೇವರೊಂದೆ
ನಾನು ನಿಮ್ಮವನು ನೀನು ನಮ್ಮವನು
ನಾನು ನಿಮ್ಮವನು ನೀನು ನಮ್ಮವನು
ನಮ್ಮ ಆಸೆ ಒಂದೆ
ಸ್ನೇಹ ಜಿಂದಾಬಾದ್ ಪ್ರೀತಿ ಜಿಂದಾಬಾದ್
ಸ್ನೇಹ ಜಿಂದಾಬಾದ್ ಪ್ರೀತಿ ಜಿಂದಾಬಾದ್
ಸಾವಿರ ವರುಷ ಹಾಯಾಗಿ ಬಾಳಿರಿ ನೀವು ಒಂದಾಗಿ
ನಮ್ಮಯ ಅತಿಥಿ ನೀವಾಗಿ ತುಂಬಿದೆ ಹೃದಯ ತಂಪಾಗಿ
ನಮ್ಮೂರ ಚಂದಿರನೆ ನಿಮ್ಮೂರಲ್ಲಿ ನಮ್ಮೂರ ಮನ್ಮಥನೆ ನಿಮ್ಮೂರಲ್ಲಿ
ಅಲ್ಲೂ ಸ್ನೇಹವಿದೆ ಇಲ್ಲೂ ಸ್ನೇಹವಿದೆ ಎಲ್ಲಾ ಸ್ನೇಹವೊಂದೆ
ಅಲ್ಲೂ ಪ್ರೀತಿಯಿದೆ ಇಲ್ಲೂ ಪ್ರೀತಿಯಿದೆ ಎಲ್ಲಾ ಪ್ರೀತಿ ಒಂದೇ
ನಮ್ಮಯ ಅತಿಥಿ ನೀವಾಗಿ ತುಂಬಿದೆ ಹೃದಯ ತಂಪಾಗಿ
ನಮ್ಮೂರ ಚಂದಿರನೆ ನಿಮ್ಮೂರಲ್ಲಿ ನಮ್ಮೂರ ಮನ್ಮಥನೆ ನಿಮ್ಮೂರಲ್ಲಿ
ಅಲ್ಲೂ ಸ್ನೇಹವಿದೆ ಇಲ್ಲೂ ಸ್ನೇಹವಿದೆ ಎಲ್ಲಾ ಸ್ನೇಹವೊಂದೆ
ಅಲ್ಲೂ ಪ್ರೀತಿಯಿದೆ ಇಲ್ಲೂ ಪ್ರೀತಿಯಿದೆ ಎಲ್ಲಾ ಪ್ರೀತಿ ಒಂದೇ
*********************************************************************************
ಹೇ ರುಕ್ಕಮ್ಮಾ...
ಸಾಹಿತ್ಯ: ಹಂಸಲೇಖ ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ರುಕ್ಕಮ್ಮಾ........
ನಾ ನೂರು ಊರು ನೋಡಿ ಬ೦ದೆ ರುಕ್ಕಮ್ಮಾ
ನೂರರಲ್ಲೂ ನಮ್ಮ ಊರೇ ಊರಮ್ಮಾ|
ಹೇ ರುಕ್ಕಮ್ಮಾ ಹೇಹೇ ರುಕ್ಕಮ್ಮಾ.........
ನಾ ನೂರು ಮಾತು ಕೇಳಿ ಬ೦ದೆ ರುಕ್ಕಮ್ಮಾ
ನೂರರಲ್ಲೂ ನಮ್ಮ ಮಾತೇ ಮಾತಮ್ಮ |
ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು
ಜೀವ ನೀಡು ಅ೦ದರೂ ನೀಡುವೇ ನಾ ||ಹೇ ರುಕ್ಕಮ್ಮ||
ಗಗನ ಗಾಳಿಯಲಿ ಜಿಗಿದು ಜೀವಿಸಲಿ
ಚೆಲುವ ಕನ್ನಡ ಬಾವುಟ
ತಿರುಗೊ ಭೂಮಿಯಲಿ ಮಿನುಗಿ ತೋರಿಸಲಿ
ಚೆಲುವ ಕನ್ನಡ ಭೂಪಟ.... ||ರುಕ್ಕಮ್ಮಾ||
ಮಾತಿನ ಜೊತೆಯಲ್ಲೆ ಗ೦ಧವಿರೋ
ಕನ್ನಡ ಕಸ್ತೂರಿ ಎಲ್ಲೂ ಇಲ್ಲಾ
ಊರಿನ ಹೆಸರಲ್ಲೇ ಕರುಣೆಯಿರೋ
ಕರುಣೆಯ ಕರುನಾಡು ಎಲ್ಲೂ ಇಲ್ಲಾ
ನೀರು ಕೇಳಿದರೆ ಪಾನಕ ನೀಡುತ್ತಾರೆ ಇಲ್ಲಿ
ರುಕ್ಕಮ್ಮಾ ನಾ ಏಳು ಕೆರೆಯ ನೀರು ಕುಡಿದೆ ರುಕ್ಕಮ್ಮಾ
ಏಳರಲ್ಲೂ ನಮ್ಮ ನೀರೇ ನೀರಮ್ಮಾ ||ಹೇ ರುಕ್ಕಮ್ಮ||
ಇಲ್ಲಿರೋ ಆನ೦ದ ಎಲ್ಲೂ ಇಲ್ಲಾ
ಮೆಚ್ಚಿದ ಹುಡುಗಿ ಇರೋ ಊರೇ ಇದು
ನನ್ನ ಕಣ್ಣಿಗೇನಾದರೂ ನನಗೆ ತಾನೇ ನೋವು
ರುಕ್ಕಮ್ಮಾ ನಾ ನೂರು ತರದ ಹೂವ ನೋಡಿದೆ ರುಕ್ಕಮ್ಮಾ
ನೂರರಲ್ಲೂ ದು೦ಡು ಮಲ್ಲಿಗೆ ಮೊದಲಮ್ಮಾ..... ||ಹೇ ರುಕ್ಕಮ್ಮಾ||
********************************************************************************
ಯಾರೆಲೇ ನಿನ್ನ ಮೆಚ್ಚಿದವನು
ಸಾಹಿತ್ಯ: ಹಂಸಲೇಖಗಾಯಕರು: ಮನು, ಎಸ್. ಜಾನಕಿ, ಮನು
ಯಾರೆಲೇ ನಿನ್ನ ಮೆಚ್ಚಿದವನು
ಯಾರೆಲೇ ಕೆನ್ನೆ ಕಚ್ಚುವವನು
ಯಾರೆಲೇ ಮಲ್ಲೆ ಮುಡಿಸುವವನು
ಯಾರೆಲೇ ಸೆರಗ ಎಳೆಯುವವನು
ಹೇಳೇ ಹುಡುಗಿ ಹೇಳೇ ಬೆಡಗಿ
ನಿನ್ನ ಸೇರಗ ಎಳೆಯೊ ಹುಡುಗ
ನಾನು ತಾನೆ ನಿನ್ನ ಗಂಡ ನಾನೆ
ಇಲ್ಲಾ ಇಲ್ಲಾ ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ
ಮ್ಯೂಸಿಕ್
ಜೀವದ ಗೊಂಬೆ ನಾನಮ್ಮ
ಭೀಮನೆಂಬ ಮಣ್ಣು ಗೊಂಬೆ ಯಾಕಮ್ಮ
ಗೊಂಬೆ ಬೇಕು ಪೂಜೆಗೆ
ಪೂಜೆ ಬೇಕು ಮನಸಿಗೆ
ಮನಸು ಬೇಕು ಪ್ರೀತಿಗೆ
ಪ್ರೀತಿ ಬೇಕು ಹೆಣ್ಣಿಗೆ
ಯಾರೆಲೇ ನೀನು ಮೆಚ್ಚಿದವನು
ಯಾರೆಲೇ ತಾಳಿ ಕಟ್ಟುವವನು
ಯಾರೆಲೇ ನಿನ್ನ ಕಾಡುವವನು
ಯಾರೆಲೇ ನಿನ್ನ ಕೂಡುವವನು
ಹೇಳೇ ಹುಡುಗಿ ಹೇಳೇ ಬೆಡಗಿ
ನಿನ್ನ ಉಸಿರು ಹೇಳೋ ಹೆಸರು
ನಂದು ತಾನೇ ನಿನ್ನ ಜಿನದ ನಾನೇ
ಇಲ್ಲಾ ಇಲ್ಲಾ ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ
ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ
ಮ್ಯೂಸಿಕ್
ಸಾವಿರ ಜನ್ಮ ಬರಲಮ್ಮ
ನನ್ನ ಪ್ರೀತಿ ನನ್ನ ಪ್ರಾಣ ನಿನಗಮ್ಮ
ಚಂದಮಾಮ ಅಲ್ಲಿದೆ
ನೈದಿಲೆ ಹೂ ಇಲ್ಲಿದೆ
ಚಂದ್ರನೇ ಇಲ್ಲಿಗೆ ಬಂದರೆ
ಹೂವಿಗೇ ಭಯವಾಗದೆ
ಯಾರೆಲೇ ನಿನ್ನ ಮುದ್ದು ಗಂಡ
ಯಾರೆಲೇ ನಿನ್ನ ತುಂಟ ಗಂಡ
ಯಾರೆಲೇ ನಿನ್ನ ವೀರ ಗಂಡ
ಯಾರೆಲೇ ನಿನ್ನ ಧೀರ ಗಂಡ
ಹೇಳೇ ಹುಡುಗಿ ಹೇಳೇ ಬೆಡಗಿ
ವೀರ ಧೀರ ಜೋಕುಮಾರ
ನಾನು ತಾನೇ ನಿನ್ನ ಗಂಡ ನಾನೇ
ಇಲ್ಲಾ ಇಲ್ಲಾ ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ
ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ
*********************************************************************************
ಚಿಟ್ಟೆಗಳೇ ಚಿಟ್ಟೆಗಳೇ
ಸಾಹಿತ್ಯ: ಹಂಸಲೇಖ
ಗಾಯನ: ಮನು
ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ, ಎಂದೂ ಹೀಗೆ
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ
ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ, ಎಂದೂ ಹೀಗೆ
ಮಾತು ನಂಬಿಕೊಂಡು ಬಾಳುತಾರೆ
ಜೀವಮಾನವೆಲ್ಲ ಕಾಯುತಾರೆ
ಆಗದ ಹೋಗದ ಅಂಜಿಕೆ
ಎಂದೂ ಇವರಿಗಿಲ್ಲ
ಚಂದಮಾಮನನ್ನು ಕೂಗುತಾರೆ
ಎದೆ ನೋವನೆಲ್ಲ ಹೇಳುತಾರೆ
ಕಾಣದು ಕೇಳದು ಯಾರಿಗು
ಇವರ ಚಿಂತೆಯೆಲ್ಲ
ಮೆಚ್ಚಿದರೆ ಮಕ್ಕಳಂತೆ ಮೆಚ್ಚುವರು
ಹುಚ್ಚರಂತೆ ಪ್ರೀತಿಸುತ ಬಾಳುವರು
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ
ಜೀವಮಾನವೆಲ್ಲ ಕಾಯುತಾರೆ
ಆಗದ ಹೋಗದ ಅಂಜಿಕೆ
ಎಂದೂ ಇವರಿಗಿಲ್ಲ
ಚಂದಮಾಮನನ್ನು ಕೂಗುತಾರೆ
ಎದೆ ನೋವನೆಲ್ಲ ಹೇಳುತಾರೆ
ಕಾಣದು ಕೇಳದು ಯಾರಿಗು
ಇವರ ಚಿಂತೆಯೆಲ್ಲ
ಮೆಚ್ಚಿದರೆ ಮಕ್ಕಳಂತೆ ಮೆಚ್ಚುವರು
ಹುಚ್ಚರಂತೆ ಪ್ರೀತಿಸುತ ಬಾಳುವರು
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ
ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ, ಎಂದೂ ಹೀಗೆ
ಬೀಸೊ ಗಾಳಿಯನ್ನು ಮೆಚ್ಚುತಾರೆ
ಅಲ್ಲಿ ಗೋಪುರವ ಕಟ್ಟುತಾರೆ
ತೇಲುತ ಕಾಯುವ ಪ್ರೇಮಿಗೆ
ಜಾರೊ ಭಯವೆ ಇಲ್ಲ
ಲೋಕ ಪ್ರೀತಿಯನ್ನು ಬೆಂಕಿಯೆಂದರು
ಬೆಂಕಿ ಮೇಲೆ ನಿಂತು ಹಾಡುತಾರೆ
ಬೇಯುತ ಬಾಳುವ ವಿರಹಿಗೆ
ಸಾಯೊ ಭಯವೆ ಇಲ್ಲ
ನಂಬಿದರೆ ಅಂಧರಂತೆ ನಂಬುವರು
ಸೇರಿದರೆ ಜೀವದಂತೆ ಸೇರುವರು
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ
ಅಲ್ಲಿ ಗೋಪುರವ ಕಟ್ಟುತಾರೆ
ತೇಲುತ ಕಾಯುವ ಪ್ರೇಮಿಗೆ
ಜಾರೊ ಭಯವೆ ಇಲ್ಲ
ಲೋಕ ಪ್ರೀತಿಯನ್ನು ಬೆಂಕಿಯೆಂದರು
ಬೆಂಕಿ ಮೇಲೆ ನಿಂತು ಹಾಡುತಾರೆ
ಬೇಯುತ ಬಾಳುವ ವಿರಹಿಗೆ
ಸಾಯೊ ಭಯವೆ ಇಲ್ಲ
ನಂಬಿದರೆ ಅಂಧರಂತೆ ನಂಬುವರು
ಸೇರಿದರೆ ಜೀವದಂತೆ ಸೇರುವರು
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ
ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ, ಎಂದೂ ಹೀಗೆ
*********************************************************************************
ಬಂಗಾರದ ಬೊಂಬೆ
ಸಾಹಿತ್ಯ: ಹಂಸಲೇಖ
ಗಾಯಕರು: ಕೆ. ಜೆ. ಯೇಸುದಾಸ್, ಕೆ. ಎಸ್. ಚಿತ್ರಾ
ಜಾರಿ ಬಿದ್ದನಮ್ಮಾ ಸಿಕ್ಕಿಬಿದ್ದನಮ್ಮಾ
ಪ್ರೀತಿ ಮಾಡಿದರೆ ಬೇಡ ಅನ್ನಲಾರೆ
ಇವನ ರೀತಿ ನಾ ಪ್ರೀತಿ ಮಾಡಲಾರೆ
ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ತ೦ದಾನಾನ ತಾನಾನ ನಾನಾನ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ತ೦ದಾನಾನ ತಾನಾನ ನಾನಾನ
ಕೇಳೇ ಚಿನ್ನಾ ಸುವ್ವಾಲಿ ರಾಗಾನ
ತ೦ದಾನಾನಾ ತಾನಾನ ನಾನಾನ
ಕೇಳೆ ರನ್ನಾ ರ೦ಗೋಲಿ ರಾಗಾನ
ಎಲ್ಲಿದೆ ಹೇಳು ನಿನ್ನ ಗಾಯ ತ೦ದಾನ ಕೇಳಿ ಮ೦ಗಮಾಯ
ಆ ಆ ಆ ಆ ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ
ಪ್ರೀತೀಲಿ ಸಿಪಾಯಿ ಆಗೋದ ಗವಾಯಿ ||ಬ೦ಗಾರದ ಗೊ೦ಬೆ||
ಎಲ್ಲಿದೆ ಹೇಳು ನಿನ್ನ ಗಾಯ ತ೦ದಾನ ಕೇಳಿ ಮ೦ಗಮಾಯ
ಆ ಆ ಆ ಆ ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ
ಪ್ರೀತೀಲಿ ಸಿಪಾಯಿ ಆಗೋದ ಗವಾಯಿ ||ಬ೦ಗಾರದ ಗೊ೦ಬೆ||
ಆಸೆಯಾಯಿತಮ್ಮ ಮಾತು ಹೋಯಿತಮ್ಮ
ಪ್ರೀತಿ ಬ೦ದಿತಮ್ಮ ಧೈರ್ಯ ಹೋಯಿತಮ್ಮ
ಇ೦ಥ ಹುಡುಗನ ಎಲ್ಲೂ ನೋಡೇ ಇಲ್ಲಾ
ಇ೦ಥ ಹುಡುಗನ ಎಲ್ಲೂ ನೋಡೇ ಇಲ್ಲಾ
ಇವನ ಮುದ್ದಿಸೋ ಧೈರ್ಯ ನನಗೆ ಇಲ್ಲ
ಬ೦ಗಾರದ ಬೊ೦ಬೆ ನನ್ನ ದೇವಿ ನೀನಮ್ಮ
ಊರೆಲ್ಲ ಹೊತ್ತು ತಿರುಗೊ ತೇರು ನಾನಮ್ಮ
ಬ೦ಗಾರದ ಬೊ೦ಬೆ ನನ್ನ ದೇವಿ ನೀನಮ್ಮ
ಊರೆಲ್ಲ ಹೊತ್ತು ತಿರುಗೊ ತೇರು ನಾನಮ್ಮ
ಬ೦ಗಾರದ ಬೊ೦ಬೆ ನನ್ನ ಪ್ರಾಣ ನೀನಮ್ಮ
ನಿನ್ನನ್ನು ಹೊತ್ತು ತಿರುಗೊ ದೇಹ ನಾನಮ್ಮ
ತ೦ದನಾನಾ ತಾನಾನ ನಾನಾನ ಬ೦ದೂಕದ ಬಾಯಲ್ಲಿ ಸುವ್ವಾಲಿ
ನಿನ್ನನ್ನು ಹೊತ್ತು ತಿರುಗೊ ದೇಹ ನಾನಮ್ಮ
ತ೦ದನಾನಾ ತಾನಾನ ನಾನಾನ ಬ೦ದೂಕದ ಬಾಯಲ್ಲಿ ಸುವ್ವಾಲಿ
ತ೦ದಾನನಾ ಸಿಪಾಯಿ ಮಾತೆಲ್ಲಾ ಕವ್ವಾಲಿ
ವೈರಿಯ ಇರುವೆ ಅ೦ತ ತಿಳಿ ಸಿ೦ಹದ ಗುಹೆಯಲ್ಲಿ ಇಳಿ
ಕಿತ್ತೂರ ಚನ್ನಮ್ಮ ನೀನಾಗುತ್ತೀಯಮ್ಮ
ಒನಕೆ ಓಬವ್ವಾ ನೀನಾಗುತ್ತೀಯಮ್ಮಾ ||ಬ೦ಗಾರದ ಗೊ೦ಬೆ||
ಕಿತ್ತೂರ ಚನ್ನಮ್ಮ ನೀನಾಗುತ್ತೀಯಮ್ಮ
ಒನಕೆ ಓಬವ್ವಾ ನೀನಾಗುತ್ತೀಯಮ್ಮಾ ||ಬ೦ಗಾರದ ಗೊ೦ಬೆ||
********************************************************************************
No comments:
Post a Comment