
ಚಲನ ಚಿತ್ರ: ಪರಮಾತ್ಮ (2011)
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ವಿ ಹರಿಕೃಷ್ಣ
ಗಾಯಕ: ಸೋನು ನಿಗಮ್
ನಿರ್ದೇಶನ: ಯೋಗರಾಜ್ ಭಟ್

ಪರವಶನಾದೆನೂ ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ?
ಇದಕ್ಕಿಂತ ಬೇಗ ಇನ್ನೂ ಸಿಗಬಾರದಿತ್ತೆ ನೀನು
ಇನ್ನಾದರೂ ಕೂಡಿಟ್ಟುಕೋ ನೀ ನನ್ನನೂ...
ಕಳೆಯುವ ಮುನ್ನವೇ
ಪರವಶನಾದೆನೂ ಅರಿಯುವ ಮುನ್ನವೇ...
ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ...?
ನಿನ್ನ ಕಣ್ಣಿಗಂತು ನಾನು ನಿರುಪಯೋಗಿ ಈಗಲೂ...
ಇನ್ನು ಬೇರೆ ಏನು ಬೇಕು ಪ್ರೇಮಯೋಗಿಯಾಗಲೂ?
ಹೂ.....ಅರಳುವ ಸದ್ದನೂ ನಿನ್ನ ನಗೆಯಲ್ಲಿ ಕೇಳ ಬಲ್ಲೆ ನನ್ನಾ...
ಏಕಾಂತವನ್ನು ತಿದ್ದಿಕೊಡು ನೀನೀಗ ನಿಂತಲ್ಲೆ
ನಾನೇನೆ ಅಂದರೂನು ನನಗಿಂತ ಛೂಟಿ ನೀನು
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನೂ...
ಕದಿಯುವ ಮುನ್ನವೇ...?
ಪರವಶನಾದೆನೂ ಅರಿಯುವ ಮುನ್ನವೇ...
ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ...?
ಹಾ...ನಾ ನ ನಾ ನಾ....ನಾ..
ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೆ
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೇ...
ನನ್ನಾ ಕೌತುಕಾ ಒಂದೊಂದೆ ಹೇಳಬೇಕು
ಆಲಿಸುವಾಗ ನೋಡು ನನ್ನನ್ನೆ ಸಾಕು
ಸಹವಾಸ ದೋಷದಿಂದ ಸರಿಹೋಗಬಹುದೆ ನಾನು
ನನಗಾಗಿಯೇ ಕಾದಿಟ್ಟುಕೋ ಹಠವೊಂದನೂ...
ಕೆಣಕುವ ಮುನ್ನವೇ...?
ಪರವಶನಾದೆನೂ ಅರಿಯುವ ಮುನ್ನವೇ...
ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ...?
********************************************************************************
ಕಾಲೇಜ್ ಗೇಟ್-ಅಲ್ಲಿ
ಗಾಯನ: ವಿ. ಹರಿಕೃಷ್ಣ ಸಾಹಿತ್ಯ: ಯೋಗರಾಜ್ ಭಟ್
ಕಾಲೇಜ್ ಗೇಟ್-ಅಲ್ಲಿ ಫೇಲ್-ಆಗಿ ಬಂದವರ
ಕಾಪಾಡೋ.. ಚೊಂಬೆಶ್ವರ... ಆಆ...
ಮಾರ್ಕ್ಸ್ ಕಾರ್ಡಿನಲಿ ಸೊನ್ನೆ.. ರೌಂಡ್-ಆಗಿ ಕಾಣುವುದು..
ಎನ್ ಮಾಡ್ಲಿ.. ಮಾಡ್ಲಿ... ಚೊಂಬೆಶ್ವರ...
ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ....
ಉಸಿರಾಡು ಆಡು ಆಡು ಆಡು ಅಂತಾನೆ....
ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್ಯಾತ್ಮ..
ಪಾಸ್ಸ್ ಆಗು ಆಗು ಆಗು ಅಂತಾನೆ..
ಫೇಲ್ ಆಗಾದವರುಂಟೆ ಚೊಂಬೆಶ್ವರ..
ಪಾಸ್-ಆಗಿ ಎನ್ ಮಾಡ್ಲಿ ಒಂದೇ ಸಲ..
ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...
ಒಂದ್ ಒಂದ್ಲಾ ಒಂದು.. ಯೆರ್ಡ್ ಯೆರ್ಡ್ಲಾ ಯೆರ್ಡು....
ಮೂರ್ ಮೂರ್ಲಾ ಮೂರು.. ಬೈ-ಹಾರ್‍ಟು ಮಾಡು..
ಓ ಮೈ ಗೊಡ್ಜೀಲ್ಲಾ.. ವಾಟ್ ಎ ಕ್ಯಾಲ್ಕ್ಯುಲೇಶನ್...
ಹೈಯಷ್ಟು ಮಾರ್ಕ್ಸು ಕೊಟ್ಟೊನೆ ಲೂಸೂ,
ಅರ್ಧಕ್ಕೆ ಕೋರ್ಸು ಬಿಟ್ಟೋವ್ನೇ ಬಾಸ್ಸು..
ಮ್ಯೂಸಿಕ್-ಕ್ಕೆ ಸರಿಇಲ್ಲ ಏಳೇ ಸ್ವರ..

ಟ್ರೈ ಮಾಡು ಏನಾದ್ರೂ ಬ್ಯಾರೆ ತರ..
ಸೈಕಲ್ಲಿನಲಿ ಏರು ತೆಂಗಿನ್-ಮರ..
ಮರ...ಮರ....ಮರ... ಕೆ ರಾಮ..
ಪೀಯುಸಿಯಲ್ಲ್ ಒಮ್ಮೆ ಡುಮ್ಕಿ.....
ಆಮೇಲೆ ಡೆಗ್ರೀಯಲ್ಲ್ ಮೂರ್ ಮೂರೂ ಬಾಕಿ...
ಎಗ್ಸ್ಯಾಮ್ ಹಾಲಿನಲ್ಲಿ ನನ್ನ ಪರಮಾತ್ಮ..
ಮಾರ್ನಿಂಗೂ ಷೋಗೆ ಹೋಗು ಕಂದ ಅಂತಾನೆ..
ಕ್ಲಾಸ್-ಅಲ್ಲಿ ನಾನು ಓಬ್‌ನೇ ಒಳ್ಳೇ ಪುಣ್ಯಾತ್ಮ..
ಆನ್ಸಾರ್ರು ಶೀಟಿನಲ್ಲೆ ಬರೆದೆ ಕೊಸ್ಚನ್ನೇ
ಸಬ್ಜೆಕ್ಟ್-ಎ ಸರಿ ಇಲ್ಲ ಚೊಂಬೆಶ್ವರ..
ಸಿಲಬಸ್ಸು ಇರ್ಬಾರ್‍ದ ಸಿನಿಮಾ ತರ..
ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...
break free paramathma..
love and karma are just the same..
jai ho paramathma..
rock the world with your holy name...
ಓದ್ಕೊಂಡು.. ಓದ್ಕೊಂಡು..
ಓದ್ಕೊಂಡಿರು ಡೌಟ್-ಇದ್ರೆ ಹುಡ್ಗಿರ್ರ್‌ನ
ಕೇಳು ಗುರು...ಗುರು...ಗುರು...ಗುರು...
ಇಲ್ಲಿಂದ ಹೋಗ್ತಾರ ಯಾರಾದರೂ...
ಕಾಲೇಜು ಟೆಂಪಲ್ಲು ಇಲ್ಲೇ
ಇರು...ಇರು...ಇರು...ಇರು...ಇರು...
ಕಾಲೊಂದು ಭಗವಂತ ಹಾಕಿರುವ ಟೋಪಿ..
ಇಲ್ಲಿಂದ ಪಾಸಾಗಿ ಹೋದವರೇ ಪಾಪಿ..
ದನ ಕಾಯುತಿದ್ದ ಹರಿಕೃಷ್ಣ ಪರಮಾತ್ಮ..
ಕುರುಕ್ಷೇತ್ರ-ದಲ್ಲಿ ಡ್ರೈವರ್-ಆಗಿ ಇರ್ಲಿಲ್ವೆ..
ಅನಿಸಿದ್ದು ಮಾಡುವವನು ಮಾತ್ರ ಪುಣ್ಯಾತ್ಮ..
ಮಾಡೋದು ಏನು ಅಂತ ನಮಗೆ ಗೊತ್ತಿಲ್ವೇ..
ಸಿಸ್ಟೆಮ್ಮೆ.. ಸರಿ ಇಲ್ಲ ಚೊಂಬೆಶ್ವರ..
ಪ್ರೈಮ್ ಮಿನಿಸ್ಟರ್ ಅಗ್ಬಿಡ್ಲ ಒಂದೇ ಸಲ..
ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...
ಕಾಲೇಜು.. ಶಾಶ್ವತ....
*********************************************************************************
ಹೆಸರು ಪೂರ್ತಿ ಹೇಳದೇ
ಗಾಯನ: ವಾಣಿ ಹರಿಕೃಷ್ಣ ಸಾಹಿತ್ಯ: ಯೋಗರಾಜ್ ಭಟ್
ಹೆಸರು ಪೂರ್ತಿ ಹೇಳದೇ... ತುಟಿಯ ಕಚ್ಚಿಕೊಳ್ಳಲೇ...
ಹರೆಯ ಏನೋ ಹೇಳಿದೆ.. ಹಣೆಯ ಚಚ್ಚಿಕೊಳ್ಳಲೇ...
ಮನಸು ತುಂಬಾ ಮಾಗಿದೆ.. ಕೊಟ್ಟುಬಿಡಲೇ..
ನಗುತಿದೆ ನದಿ ಇದು ಯಾಕೆ.. ನೋಡುತ ನನ್ನನ್ನು...
ಹೃದಯವ ಹೆದರಲೇಬೇಕೆ... ಬಯಸಲು ನಿನ್ನನ್ನು...
ಹೆಸರು ಪೂರ್ತಿ ಹೇಳದೇ... ತುಟಿಯ ಕಚ್ಚಿಕೊಳ್ಳಲೇ...
ಹರೆಯ ಏನೋ ಹೇಳಿದೆ.. ಹಣೆಯ ಚಚ್ಚಿಕೊಳ್ಳಲೇ...
ಮನಸು ತುಂಬಾ ಮಾಗಿದೆ.. ಕೊಟ್ಟುಬಿಡಲೇ..
ಎಳೆಬಿಸಿಲ ಸಂಕೋಚವು... ನೀ ನಗಲು, ಮೈತಾಕಿದೆ..
ನನ ಬೆನ್ನು ನಾಚುತಿದು... ನೋಡುತಿರಲು, ನೀ... ನನ್ನಕಡೆಗೆ..
ಬಯಕೆ ಬಂದು ನಿಂತಿದೆ.. ಉಗುರು ಕಚ್ಚಿಕೊಳ್ಳಲೇ..
ಬೇರೆ ಏನೋ ಕೇಳದೇ... ತುಂಬಾ, ಹಚ್ಚಿಕೊಳ್ಳಲೇ...
ಹೇಳದಂತಹ ಮಾತಿದೆ.. ಮುಚ್ಚಿ..ಇಡಲೇ ನಿನ ತುಂಟ ಕಣ್ಣಲ್ಲಿದೆ...
ಮಡಚಿಟ್ಟ ಆಕಾಶವು.. ಬಿಳಿ ಹೂವಿನ ಮೌನವು,
ನನ್ನೆದೆಯಲಿ... ನಾ... ಏನ್ ಏನ್ನಲಿ..
ತುಂಬಾ ಮುತ್ತು ಬಂದಿದೆ.. ಒಮ್ಮೆ ದೃಷ್ಟಿತೆಗೆಯಲೇ...
ನನಗೆ ಬುದ್ಧಿ ಎಲ್ಲಿದೆ... ಒಮ್ಮೆ, ಕಚ್ಚಿನೂಡಲೇ...
ನಿನ್ನ ತೊಳು ನನ್ನದೇ... ಇದ್ದುಬಿಡಲೇ....
********************************************************************************
ಏನು ಮಾಡೋದು
ಗಾಯನ : ಟಿಪ್ಪು ಸಾಹಿತ್ಯ : ಯೋಗರಾಜ್ ಭಟ್
ಏನು ಮಾಡೋದು ಒಂಟಿ ಹೂವೊಂದು
ರೋಡಲ್ಲಿ ಸಿಕ್ತು, ರೋಡಲ್ಲಿ ಸಿಕ್ತು
ಏನು ಹೇಳೋದು ಇಂತ ಟೈಮಲ್ಲಿ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಎದೆಯಂಬ ಕಾಲಿ ಡಬಕ್ಕೆ ಒಂದು
ಸಣ್ಣ ಕಲ್ಲು ಬಿದ್ದಂಗಾಯ್ತು
ಡಬ್ಬ ಯಾತಕ್ಕೆ ಸೌಂಡು ಮಾಡುತ್ತೊ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಇವ್ಳು ಸಿಕ್ತಾಳ, ಕೈ ಕೊಡ್ತಾಳ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಅದು ಯಾವ್ದೊ ಒಂಟಿ ಹಕ್ಕಿ ಸದನ್ನ
ಕೇಳುತ್ತಾ ಮಲ್ಕೊಂಡಿದ್ದೆ ಮಧ್ಯಾನ
ಕಾಲ್ ಕೆಜಿ ಪ್ರೀತಿಗೊಂದು ಪದ್ಯಾನ
ಬರೆದಿಟ್ಟೂ ಕೆರೆದುಕೊಂಡೆ ಗಡ್ಡಾನ
ಕಾಳಿದಾಸ ಕಾವ್ಯ ನಮಪ್ಪನ್ನ ಕೇಳ್ರಿ
ಕಾಲಿ ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ
ಹೃದಯದ ಮೇಲೆ, ಹೈ ಹೀಲ್ಡು ಹಾಕಿ
ರಾಜಕುಮಾರಿ ನಿಂತಂಗಾಯ್ತು
ಇಂತ ಟೈಮಲ್ಲಿ ಹಾಡು ಬೇಕಿತ್ತಾ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ದೇವ ದಾಸಾನು ಎಣ್ಣೆ ಬಿಟ್ಟಿದ್ನಾ

ಯಾವನಿಗ್ ಗೊತ್ತು.
ಕನಸಲ್ಲಿ ಯಾಕೊ ಯಾವ್ದು ಸಾಲಲ್ಲ
ಮೋಡಾನ ಮುದ್ದು ಮಾಡೊಕಾಗಲ್ಲಾ
ಚಿಟ್ಟೆಗೆ ಚಡ್ಡಿ ಹಾಕೊಕಾಗ್ಲಿಲ್ಲ
ನಿಮ್ಗೆ ಗೊತ್ತಲ್ವ ನಾನು ಮುಟ್ಟಾಳ
ಮತ್ತೆ ಮತ್ತೆ ಬಂತು ಎದೆಯಲ್ಲೊಂದು ಲಹರಿ
ತುಂಬ ಒಳ್ಳೆ ಕನ್ನಡ ಮಾತಾಡ್ಬಿಟ್ಟೆ ಕಣ್ರಿ
ಮೂಗು ಬೊಟ್ಟಾಗಿ ಹುಟ್ಟಿದ್ರೆ ನಾನು
ಇವಳ ಮೊತೀಲೆ ಇರಬಹುದಿತ್ತು
ನನ್ನ ಆಸೆಗೆ ಮೀನಿಂಗ್ ಇರಬಹುದ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಮುಂದೆ ಎಲ್ಲಾದ್ರು ತಿಂಡಿ ಸಿಗಬಹುದ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
********************************************************************************
ತನ್ಮಯಳಾದೇನು
ಗಾಯಕರು: ಶ್ರೇಯಾ ಘೋಷಾಲ್ ಸಾಹಿತ್ಯ: ಜಯಂತ್ ಕಾಯ್ಕಿಣಿ
ತನ್ಮಯಳಾದೇನು ತಿಳಿಯುವ ಮುನ್ನವೇ,
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ..
ನಿನ್ನಲಿ ಜೀವವನ್ನು ಅಡವಿಟ್ಟೂ ಬಂದೆ ನಾನು,
ಕಣ್ಮುಚ್ಚಿಯೇ ನಾನ್ ಓದಲೇ ಪುಟ ಒಂದನು..
ಹರಿಯುವ ಮುನ್ನವೇ..
ತನ್ಮಯಳಾದೇನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ...
ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ..
ಬೇರೆ ಏನು ಹೇಳುವಾಗ ಕಣ್ಣು ತುಂಬಿ ಬಂದರೆ..
ಈ ಮಾನಸಿಗೆ ಭಾಸವೂ ..
ಎಲ್ಲೇ ನೀನು ನನ್ನ ಕೂಗಿದಂತೆ..
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತಾ ನಾ ನಿಂತೆ..
ಮನಸಲ್ಲಿ ಅಂದ ಮಾತು ತಡವಾಗಿ ಕೇಳಿತೇನು..
ಗೊತ್ತಿಲ್ಲದೇ ನಾ ಗೀಚಲೆ ನಾ ಹೆಸರೊಂದನು..

ತನ್ಮಯಳಾದೇನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ..
ಪ್ರತಿಸಲ ಬಾಗಿಲ ಸದ್ದಿಗೆ ಎದೆಯ ವಿಸ್ಪಂದನ..
ತೆರೆದರೆ ಬೀಸುವ ಗಾಳಿಯೂ ಹೀಳಿದೇ ಸಾಂತ್ವಾನ.. ಓ...
ನನ್ನ ವಿರಹವು ನಿನ್ನಿಂದ ಇನ್ನು ಚೆಂದ..
ವಿವರಿಸಲಾರೆಯೆಲ್ಲ ನಾ ದೂರದಿಂದ..
ನೆನಪನ್ನು ರಾಶಿಹಾಕಿ ಎಣಿಸುತ್ತಾ ಕೂರಲೇನು..
ಕನ್ನಡಿಯಲಿ ನಾ ಹುಡುಕಲೆ ನಗುವೊಂದನು..
ಉರಿಸುವ ಮುನ್ನವೇ..
ತನ್ಮಯಳಾದೇನು ತಿಳಿಯುವ ಮುನ್ನವೇ,
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ..
********************************************************************************
ಕತ್ಲಲ್ಲಿ ಕರಡೀಗೆ
ಸಾಹಿತ್ಯ: ಯೋಗರಾಜ್ ಭಟ್ಗಾಯನ: ಯೋಗರಾಜ್ ಭಟ್
ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ
ಯಾವತ್ತು ಹೋಗ್ಬಾರ್ದು ರೀ...
ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ
ಯಾವತ್ತು ಇರ್ಬಾರ್ದು ರೀ...
ಹೊಸ ಹುಡುಗಿ ಕೈ ಅಲ್ಲಿ ಕೆಂಪಾದ ಗೋರಂಟಿ
ಹಳೆ ಹುಡುಗಿ ಕೆಮ್ಮಿದರೆ ಪ್ರಳಯಾನೆ ಗ್ಯಾರೆಂಟಿ..
ಒಬ್ಬಳನ್ನೇ ಲವ್ ಮಾಡಿ ಚೆನ್ನಾಗಿರಿ
ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ..
ಹುಡುಗೀರ ಮನಸಲ್ಲಿ ಏನೇನಿದೆ ತಿಳ್ಕೊಲ್ಲೋ
ತಾಕತ್ತು ನಮಗೆಲ್ಲಿದೆ ಪ್ರಾಬ್ಲೆಮ್ಮು ಇರದ ಫೀಮೇಲು ಇಲ್ಲ...
ಸಿಕ್ಸರ್ರು ಹೊಡಿ ಬಹುದು ಬ್ಯಾಟ್ ಇಲ್ಲದೆ
ಪ್ರೀತ್ಸೋಕೆ ಆಗೋಲ್ಲ ಡೌಟ್ ಇಲ್ಲದೆ
ಅನುಮಾನ ಇರದ ಅನುರಾಗ ಇಲ್ಲ...
ಮಾಡ್ರನ್ನು ಪ್ರೇಮಕ್ಕೆ ಮೈಲೇಜು ಕಮ್ಮಿ
ಸೆಲ್ ಪೋನು ಬಂದಮೇಲೆ ಹಿಂಗಾಯ್ತು ಸ್ವಾಮಿ
ಲವ್ ಅಲ್ಲಿ ಕಣ್ಣೀರು compulsory
ಯಾವ್ದಕ್ಕೂ ಕಿರ್ಚೀಫು ಇಟ್ಕೊಂಡಿರಿ..
ಯಾರಾನ ಕೈ ಕೊಟ್ಟರೆ ಪಾರ್ಟಿ ಕೊಡಿ
ನೆನಪನ್ನ ಸೋಪಾಕಿ ತೊಳ್ಕೊಂಡು ಬಿಡಿ
ಕಣ್ಣೀಗೆ ಸೋಪು ಹೋಗ್ಬಾರ್ದು ಕಣ್ರೀ..
ಟೈಮ್ ಇದ್ರೆ ಒಂದ್ಚೂರು ದುಖಾಪಡಿ
ಮೆಸ್ಸೇಜು ಬರಬಹುದು ಕಾಯ್ತಾ ಇರಿ
ಹೃದಯಕ್ಕೆ ಗ್ಯಾಪು ಕೊಡಬಾರದು ಕಣ್ರೀ...
ಬೆನ್ನಲ್ಲಿ ಹುಣ್ ಅಂತೆ ಆ ಫಸ್ಟ್ ಲವ್ವು
ಯಾಮಾರಿ ಅಂಗಾತ ಮಲ್ಕೊಂಡ್ರೆ ನೋವು
ಎಲ್ಲಾನು ಮರೆಯೋಕೆ ಹೋಗ್ಬಾರ್ದು ರೀ
ಕೆರೆಯೋಕೆ ಹುಣ್ ಒಂದು ಇರಬೇಕು ರೀ....
********************************************************************************
No comments:
Post a Comment