Tuesday, September 11, 2018

ಸಾರಥಿ (2011)





ಕೈ ಮುಗಿದು ಏರು

ಚಲನ ಚಿತ್ರ: ಸಾರಥಿ (2011)
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಸಂಗೀತ: ವಿ. ಹರಿಕೃಷ್ಣ 
ಗಾಯನ: ಶಂಕರ್ ಮಹಾದೇವನ್ ಮತ್ತು ಸಂಗಡಿಗರು 
ನಿರ್ದೇಶನ: ದಿನಕರ್ ತೂಗುದೀಪ್ 
ನಟನೆ: ದರ್ಶನ್, ದೀಪಾ ಸನ್ನಿಧಿ, ರಂಗಾಯಣ ರಘು 


ಕೈ ಮುಗಿದು ಏರು ಇದು ಕನ್ನಡದ ತೇರು
ನಂಬಿ ಬಂದು ಕೂರು ಇದು ಕನ್ನಡಿಗನ ತೇರು
ನಮದು ಬೆವರಿನ ಬಂಡಿ ಎಂದು ನಿಲ್ಲುವುದಿಲ್ಲ
ನಿಮಗೆ ಸೇವೆಯ ಮಾಡೋ ಭಾಗ್ಯ ನೀಡಿದಿರಲ್ಲ
ನಾವೇ ನರ ನಾಡಿ ರಾಜಧಾನಿಗೆ ಎ ಎ ಎ ಎ

ಅತೀರಥ ಮಾಹಾರಥ ಸಾರಥೀ... 
ಸೂರ್ಯ ನಮಗೆ ಎತ್ತುತಾನೆ ಆರತೀ....
ಅತೀರಥ ಮಾಹಾರಥ ಸಾರಥೀ.... 
ರಥ ನಡೆಸೋ ಕೃಷ್ಣನಿಗೆ ಸಂತತೀ....

ಬಂದನೋ ಬಂದನೋ ಬಂದನೋ 
ಬಂದನೋ ಬಂದನೋ ಬಂದ
ಬಂದನೋ ಬಂದನೋ ಸ್ಟೈಲಾಗಿ ಬಂದನೋ 
ನಮ್ಮ ಸಾರಥಿ ಬಂದನೋ... 
ಅವ್ನ ಮಾತಲ್ಲಿ ಗಂಭೀರ ಲುಕ್ಕಲ್ಲಿ ಬಲು ಶೂರ 
ಯು ಕ್ಯಾನ್ ಗೆಟ್ ಎನಫ್ ಗೆಟ್ ಎನಫ್

ತಂದನೋ ತಂದನೋ ಗೆಲುವನ್ನು ತಂದನೋ 
ಅರ್ಧ ರಾಜ್ಯಕ್ಕೆ ಒಡೆಯನೂ ?? 
ಪುಣ್ಯ ಮಾಡ ಬೇಕನ್ನೋ ಓ ಓ ಓ

ಕೈಯ ತಟ್ಟಿ ಕೂಗಿದರೆ ಹಾಜರಿ ನಾವು
ಹೇಳಿದಲ್ಲಿ ಹೋಗುವೆವು ಹೇಳಿರಿ ನೀವು
ಮೀಟರಿನ ಮೇಲೆ ನಯಾ ಪೈಸೆಯೂ ಬೇಡಾ
ಮಾನವತೆ ನಮಗೂ ಇದೆ ಮರೆಯಲೇ ಬೇಡಾ
ಉಚಿತ ಪಯಣವಿದೆ ಪ್ರಸವದ ನೋವಿಗೆ
ಹಗಲಿರುಳು ಕಡಿಮೆ ದರ ವೃದ್ದರ ಪಾಲಿಗೆ
ಯಾವದೇ ಸರ್ಕಾರ ಬಂದ್ರು ಯಾರೇ ಸರದಾರ ಬಂದ್ರು 
ನಮಗೆ ನಾವೇ ರಾಜ ಆಟೋ ರಾಜಾ...

ಅತೀರಥ ಮಹಾರಥ ಸಾರಥೀ... 
ಯಾವ್ದೇ ಅಡ್ರೆಸ್ ಅಂದ್ರು ಇದೆ ಮಾಹಿತೀ....
ಅತೀರಥ ಮಾಹರಥ ಸಾರಥೀ... 
ಎಲ್ಲರಿಗೂ ಗೊತ್ತು ನಮ್ಮ ಸಂಗತೀ...

ಡಿಗರಿಗಳು ಕಯ್ಯಲಿದೆ ದಡ್ಡರು ಅಲ್ಲಾ
ಸ್ವಂತ ಕೃಷಿ ಸಾಗಿತಿದೆ ಚಿಂತೆಯೇ ಇಲ್ಲಾ
ಖಾಕಿ ಬಟ್ಟೆ ಧರಿಸುವೆವು ನ್ಯಾಯೇವೆ ನಾವು
ಜನಗಣಕೆ ದುಡಿಯುವೆವು ಮನಸೇ ಹೂವು
ಹೆತ್ತವರ ಹೊತ್ತವರ ಶಕ್ತಿಯು ಹಿಂದಿದೆ
ಬೆಳ್ಳಿತೆರೆ ಉತ್ತಮರ ಚಿತ್ರವೂ ಮುಂದಿದೆ
ಒಂದು ಕೃಷ್ಣನ ಚಕ್ರ... ಎರಡು ಅಶೋಕ ಚಕ್ರ.... 
ಮೂರು ಕಾಲದ ಚಕ್ರ ಜೀವನ ಚಕ್ರಾ...

ಅತೀರಥ ಮಹಾರಥ ಸಾರಥೀ... 
ಆಟೋ ಡ್ರೈವರ್ ಕೂಡ ಒಬ್ಬ ಸಾಹಿತಿ
ಅತೀರಥ ಮಹಾರಥ ಸಾರಥೀ... 
ಎಲ್ಲರನು ಪ್ರೀತಿಸುವ ಸಂಸ್ಕೃತಿ.


*********************************************************************************

ಚೋಳ ತಲೆ ಎತ್ತಿದಾಗ 

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯನ: ಕೈಲಾಶ್ ಖೇರ್ 


ಚೋಳ ತಲೆ ಎತ್ತಿದಾಗ 
ಚೇರ ಗಡಿ ಮುತ್ತಿದಾಗ
ಬಂದ ಕನ್ನಡಧ ಕಪ್ಪು ಮಣ್ಣಿನವ್ನು
ವಜ್ರ ಬಲ್ಲಾಳುರಾಯ ಸೋಗೆ ಬಲ್ಲಳರಾಯ
ಈ ಸೀಮೆಗೆ ಶಿವ ನೀಡಿಧ ವರವೋ
ಈ ಊರಿಗೆ ಇವ ಆಲಧ ಮರವೋ
ಮೋರು ಸುತ್ತಿನ ಕ್ವಾಟೆ ಗಸ್ತಿಗೆ ನಿಂತ
ಗರಡಿ ಮನೆ ನಾಯ್ಕ
ಆರು ಸಾವಿರ ದಂಡು ಬಂದರೂ ಬಿಡನು
ಕವಲಿನ ಕಾಯಕ

ಏಳು ಎಲ್ ಹೆಡೆಯ ಸರ್ಪ
ಬಂಧು ಕುಂಥೈತ್ಹೋ ಯಪ್ಪಾ
ನಮ್ಮ ಹುಲಿಯೂರು ದುರ್ಗಾ ಕಾಯೋ ಕಂದಾ

ಒಂದೇ ತೆನೆಯ ಒಳಗೆ ನೂರು ರಾಗಿ ಕಾಳಂಗೆ
ವಾಡೆ ಮಣಿ ಮನಸು ಒಂದಾಗೈತೆ ಜೇನು ಗೂಡಂಗೆ
ಕಾವೇರಿಯ ಕಾಲಂಚಿನ ರೈತ
ಈ ಊರಿನ ಚಿರ ಶಾಂತಿಯ ಧೂತ
ಈ ಭೂಮಿಗೆ ಬೆನ್ನು ಕೊಟ್ಟವನಲ್ಲ ಬೆವೆರ ಗೆಣೆಕಾರ
ಗಂಡು ಮೆಟ್ಟಿನ ನಾಡ ಸಂಸ್ಕೃತಿ ಕಾಯೋ
ಊರಿನ ಸರದಾರ... 

*********************************************************************************

No comments:

Post a Comment