Sunday, September 9, 2018

ಫಸ್ಟ್ ರ‍್ಯಾಂಕ್ ರಾಜು (2015)

 ಚಲನಚಿತ್ರ: ಫಸ್ಟ್ ರ‍್ಯಾಂಕ್ ರಾಜು (2015)
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಸಂಗೀತ: ಕಿರಣ್ ರವೀಂದ್ರನಾಥ್ 
ಗಾಯನ: ಸೋನು ನಿಗಮ್ 
ನಿರ್ದೇಶನ: ನರೇಶ್ ಕುಮಾರ್ ಹೆಚ್. ಎನ್.
ನಟನೆ: ಗುರುನಂದನ್, ಅಪೂರ್ವ ಗೌಡ, ತನುಷ್ಕಾ ಕಪೂರ್ 


ಬೀಸೋ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ
ಏಕಾಂಗಿ... ನಾನು ಏಕಾಂಗಿ
ಎಲ್ಲೋ ಆಚೆಗೆ ಮರೆಯಾಗಿ
ಏನೋ ಕಾದಿದೆ ನನಗಾಗಿ

Chorus: 
ಗೋವಿಂದ ಗೋವಿಂದ ಹರೇ
ಗೋಪಾಲ ಗೋಪಾಲ ಹರೇ
ಗೋವಿಂದ ಗೋವಿಂದ ಹರೇ ಗೋಪಾಲ.. 

ಎಷ್ಟೊಂದು ಪಾತ್ರ ನೀಡುವ..
ಬದುಕೊಂದು ಧಾರವಾಹಿಯೇ..
ಈ ನಾಲ್ಕು ಗೋಡೆ ಆಚೆಗೆ
ನಿಜವಾದ ಪಾಠಶಾಲೆಯೇ
ಎಲ್ಲ ಹಿಂದೆಯೇ ಮರೆಯಾಗಿ
ಹೂವು ಕಾದಿದೆ ನನಗಾಗಿ

ಬೀಸೋ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ
ಏಕಾಂಗಿ... ನಾನು ಏಕಾಂಗಿ
ಎಲ್ಲೋ ಆಚೆಗೆ ಮರೆಯಾಗಿ
ಏನೋ ಕಾದಿದೆ ನನಗಾಗಿ


*********************************************************************************

No comments:

Post a Comment