ಸ್ವಾತಿ ಮುತ್ತಿನ ಮಳೆ ಹನಿಯೆ
ಚಲನ ಚಿತ್ರ: ಬಣ್ಣದ ಗೆಜ್ಜೆ (1990)ಅಭಿನಯ:- ರವಿಚಂದ್ರನ್, ಅಮಲಾ
ನಿರ್ದೇಶನ:- ಎಸ್.ವಿ. ರಾಜೇಂದ್ರ ಸಿಂಗ್ ಬಾಬು
ಸಂಗೀತ & ಸಾಹಿತ್ಯ:- ಹಂಸಲೇಖ

ಸ್ವಾತಿ ಮುತ್ತಿನ ಮಳೆ ಹನಿಯೆ
ಮೆಲ್ಲ ಮೆಲ್ಲನೆ ಧರೆಗಿಳಿಯೇ
ನನ್ನ ರಾಣಿಯ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕತ್ತಲು
ಧುಮುಕೆ ಮಿರಮಿರನೆ...
( ಸ್ವಾತಿ ಮುತ್ತಿನ ಮಳೆ ಹಾನಿಯೇ
ಮೆಲ್ಲ ಮೆಲ್ಲನೆ ಧರೆಗಿಳಿಯೇ )... (2 ಸಲ)
ನನ್ನ ರಾಜನ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕತ್ತಲು
ಧುಮುಕೆ ಮಿರಮಿರನೆ...
ಪ್ರೇಮದ ಕಾಶಿಯಲಿ ಮಳೆಯೇ ನಮಗೆ ಸ್ನಾನ
ಕನಸೇ ಮನದ ಧ್ಯಾನ
ಮೈ ನಡುಗುವ ಚಳಿಯಲ್ಲಿ ಈ ಬೆಚ್ಚನೆ ಸವಿಗಾನ

ಈಯೀಈ ನಿಮಿಷದ ಈ ಮೋಹದ ಆ ಪೊಶಣವೋ
ಈಯೀಈ ಹೆದರುವ ತರದಲ್ಲಿ ಈ ಪ್ರೇಮದ ಗುಣಗಾನ...
ಸ್ವಾತಿ ಮುತ್ತಿನ ಮಳೆ ಹನಿಯೇ
ಮೆಲ್ಲ ಮೆಲ್ಲನೆ ಧರೆಗಿಳಿಯೇ
ನನ್ನ ರಾಣಿಯ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕತ್ತಲು
ಧುಮುಕೆ ಮಿರಮಿರನೆ...
ಬೆಳ್ಳಿಯ ತಾರೆಗಳ ತರುವೆ ನಿನಗೆ ಕೊಡುವೆ
ನಿನ್ನ ಮುಡಿಗೆ ಇಡುವೆ
ಈ ಪ್ರೇಮದ ಸಾಹಸಕ್ಕೆ ನನಗೇನೇ ನೀ ತರುವೆ

ಪರದೆ ಸರಿಯೆ ಮದುವೆ
ಆ ಹುಣ್ಣಿಮೆ ರಾತ್ರಿಯಲಿ ನಾ ಮುತ್ತಿನ ಮಳೆಗರೆವೆ
ಆ ಶುಭದಿನ ಭೋರ್ಗರೆಯುವ ನೀರಾಗುವೆನಾ
ಆ ಮಿಲನಕೆ ಹಾತೊರೆಯುವ ಸಾಗರವು ನಾ
ಆ ಸಾಗರ ಸಂಗಮಕೆ ಈ ಉಸಿರ ಹಿಡಿದಿದುವೆ...
ಸ್ವಾತಿ ಮುತ್ತಿನ ಮಳೆ ಹನಿಯೇ
ಮೆಲ್ಲ ಮೆಲ್ಲನೆ ಧರೆಗಿಳಿಯೇ...
ಸ್ವಾತಿ ಮುತ್ತಿನ ಮಳೆ ಹನಿಯೇ
ಮೆಲ್ಲ ಮೆಲ್ಲನೆ ಧರೆಗಿಳಿಯೇ
ನನ್ನ ರಾಜನ ಹೃದಯದ ಚಿಪ್ಪಿಗೆ
ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕತ್ತಲು
ಧುಮುಕೆ ಮಿರಮಿರನೆ...
*********************************************************************************
No comments:
Post a Comment