Saturday, September 15, 2018

ಅಂಜದ ಗಂಡು (1988)

ಪ್ರೀತಿಯಲ್ಲಿ ಇರೋ ಸುಖ

ಚಲನಚಿತ್ರ: ಅಂಜದ ಗಂಡು (1988)
ನಿರ್ದೇಶನ: ರೇಣುಕಾ ಶರ್ಮಾ 
ಸಾಹಿತ್ಯ: ಆರ್. ಎನ್. ಜಯಗೋಪಾಲ್  
ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, 
ಮಂಜುಳಾ ಗುರುರಾಜ್
ನಟರು: ರವಿಚಂದ್ರನ್, ಖುಷ್ಬೂ   


ಗ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
    ಹೂಂ ಅಂತಿಯಾ ಉಹೂಂ ಅಂತಿಯಾ
    ಬಾ ಅಂತಿಯ ತಾ ಅಂತಿಯಾ
ಹೆ: ಹೇಳುವೆ ಬಳಿ ಬಂದರೆ ತುಟಿಗಳ ಸಿಹಿ ಅಂಚಲಿ
ಹೆ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
     ಹೂಂ ಅಂತಿಯಾ ಉಹೂಂ ಅಂತಿಯಾ
     ಬಾ ಅಂತಿಯ ತಾ ಅಂತಿಯಾ
ಗ: ಹೇಳುವೆ ಬಳಿ ಬಂದರೆ ತುಟಿಗಳ ಸಿಹಿ ಅಂಚಲಿ
ಗ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ  
ಹೆ: ಹೂಂ ಅಂತಿಯಾ           ಗ: ಉಹೂಂ ಅಂತಿಯಾ
ಹೆ: ಬಾ ಅಂತಿಯಾ              ಗ: ತಾ ಅಂತಿಯಾ

ಗ: ಹೊಸದು ತೀರ ಹೊಸದು ಒಲವ ಮಿಡಿತ ಹೊಸದು
ಹೆ: ಸುಖವ ಅರ್ಥ ತಿಳಿದೆ ಬಾರೆನ್ನ ರಾಜ ಅದರ ಸೊಗಸು ಸವಿದೆ
ಗ: ಮನಸು ಆಡಿದೆ ಹಾಡಿದೆ ನಿನ್ನನು ಕೇಳಿದೆ ಎಂದು ಕಲ್ಯಾಣ?
ಹೆ: ಕನಸು ಕಣ್ಣಲ್ಲಿ ತುಂಬಿದೆ ಮೆಲ್ಲಗೆ ಹೇಳಿದೆ ಇಂದೆ ಆಗೋಣ
ಗ: ಓ ಮೈ ಲವ್...             ಹೆ: ಓ ಮೈ ಲವ್...
ಗ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ     
ಹೆ: ಹೂಂ ಅಂತಿಯಾ         ಗ: ಉಹೂಂ ಅಂತಿಯಾ                              
ಗ: ಬಾ ಅಂತಿಯಾ            ಹೆ: ತಾ ಅಂತಿಯಾ  

ಹೆ: ಮೌನದಲ್ಲಿ ಕರೆದೆ ಕರೆದು ಹೆಸರ ಬರೆದೆ
ಗ: ನೀನು ಬರೆದ ಕವನ ನನ್ನಾಣೆ ಚಿನ್ನ ಓದಿ ಓದಿ ನಲಿದೆ
ಹೆ: ಪ್ರೇಮದ ಅ ಆ ಇ ಈ ಬರೆಯಿಸಿ ಪಾಠವ ಕಲಿಸಿದೆ ನೀನೇ ಕಣ್ಣಲ್ಲಿ
ಗ: ನಿನಗೆ ಪಾಠವ ಹೇಳುವ ಸಾಹಸ ಧೈರ್ಯವ ತಂದೆ ನನ್ನಲ್ಲಿ
ಹೆ: ಐ ಲವ್ ಯೂ             ಗ: ಐ ಲವ್ ಯೂ

ಹೆ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
ಗ: ಹೂಂ ಅಂತಿಯಾ ಉಹೂಂ ಅಂತಿಯಾ
ಹೆ: ಬಾ ಅಂತಿಯಾ ತಾ ಅಂತಿಯಾ
ಗ: ಹೇಳುವೆ ಬಳಿ ಬಂದರೆ ತುಟಿಗಳ ಸಿಹಿ ಅಂಚಲಿ
ಗ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
ಹೆ: ಹೂಂ ಅಂತಿಯಾ         ಗ: ಉಹೂಂ ಅಂತಿಯಾ
ಗ: ಬಾ ಅಂತಿಯಾ            ಹೆ: ತಾ ಅಂತಿಯಾ

******************************************************************************

ಏಕೆ ಹೀಗಾಯ್ತೋ

ಸಾಹಿತ್ಯ: ಆರ್.ಎನ್. ಜಯಗೋಪಾಲ್   
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಬಿ.ಆರ್.ಛಾಯ


ಗಂಡು: ಏಕೆ ಹೀಗಾಯ್ತೋ ನಾನು ಕಾಣೆನು  
           ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
           ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
           ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ
           ಏಕೆ ಹೀಗಾಯ್ತೋ ನಾನು ಕಾಣೆನು  
           ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
           ಆ ನೋಟದಲೀ ಅದು ಏನಿದೆಯೋ.. 
           ತುಟಿ ಅಂಚಿನಲೀ ಸವಿ ಜೇನಿದೆಯೋ...
           ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
           ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ
         
          ನೀ ನಗುವಾಗ...ಜರತಾರಿ ಹೊಸ ಸೀರೆ ಉಟ್ಟು ಬಳುಕಾಡಿ ಬಂದೆ...
          ನೀ ಮುಡಿದಾಗ...ಮೊಳದುದ್ದ ಜಡೆ ತುಂಬ 
          ಮಲ್ಲೆ ಮುಡಿದೆನ್ನ ಸೆಳೆದೆ...
          ಉಸಿರಾಟ ಮರೆತು ಹೋಯಿತು ಬೇರೇನು ಕಾಣದಾಯಿತು
         ನಿನ್ನಲ್ಲಿ ನನ್ನ ಈ ಜೀವ ಸೇರಿತು

ಹೆಣ್ಣು:  ಏಕೆ ಹಿಗಾಯ್ತೋ ನಾನು ಕಾಣೆನು ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
          ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
          ಈ ಹೊಸದಾದ... ಆನಂದ ತಂದಂತ ಮತ್ತಿನ ಮುತ್ತನ್ನ ತಂದೆ
          ಆ ನೆನಪಲ್ಲೆ... ಹೊಸದಾದ ಅನುರಾಗ ನನ್ನ ಎದೆಯಲ್ಲಿ ತಂದೆ
          ಈ ನಾಡಿ ನಿಂತು ಹೋಯಿತು ನಾ ಯಾರೋ ಮರೆತು ಹೋಯಿತು
          ನಿನ್ನಲಿ ನನ್ನ ಈ ಜೀವ ಸೇರಿತು


ಗಂಡು: ಏಕೆ ಹಿಗಾಯ್ತೋ ನಾನು ಕಾಣೆನು
ಹೆಣ್ಣು:  ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
ಗಂಡು:  ಆ ನೋಟದಲಿ ಅದು ಏನಿದೆಯೋ..
ಹೆಣ್ಣು:  ತುಟಿ ಅಂಚಿನಲಿ ಸವಿ ಜೇನಿದೆಯೋ...
ಗಂಡು:  ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಹೆಣ್ಣು:  ಜೇನು ಹೀರಿದ ದುಂಬಿಯ ಸೇರಿದೆ ನನ್ನ ಈ ಮನ

*******************************************************************************

ಮೂರು ಕಾಸಿನ ಕುದುರೆ

ಸಾಹಿತ್ಯ: ಹಂಸಲೇಖ 
ಗಾಯಕರು: ರಮೇಶ್

ರಂಭಾ ಬೇಡ ಜಂಬ
ಜಂಬ ಗಿಂಬ ಬೇಡ ರಂಭಾ

ಮೂರು ಕಾಸಿನ ಕುದುರೆ
ಏರಿ ಬಂದಳೋ ಚದುರೆ
ಜಂಬ ಮಾಡಬೇಡಮ್ಮ
ಭೂಮಿ ಮೇಲೆ ನಡೆಯಮ್ಮ
ಆ ಸೂರ್ಯ ಹುಟ್ಟೋದು
ಕೋಳಿ ಕೂಗಿನಿಂದಲ್ಲ
ಲೋಕ ದೀಪ ಹಚ್ಚೋದು
ಅಜ್ಜಿ ಬೆಂಕಿಯಿಂದಲ್ಲ
ಇದು ಯಾಕೋ ರಂಭೆಗೆ
ಇನ್ನು ಗೊತ್ತೇ ಆಗಿಲ್ಲ

ಕಿಲಾಡಿ ಹೆಣ್ಣು ಓ ಚಕೋತಿ ಹಣ್ಣು
ಅಯ್ಯಯ್ಯೋ ಯಾಕೋ ತಿನ್ನೋಕೆ ಮಾತ್ರ
ಹುಳಿಯಮ್ಮೋ
ಭಲಾರೆ ಹೆಣ್ಣು ಚಕೋರಿ ಕಣ್ಣು
ಅಯ್ಯಯ್ಯೋ ಬೇಡ ಈ ನಿನ್ನ ನೋಟ
ವಿಷವಮ್ಮೋ


ಆರಂಭ ಹೆಣ್ಣಿಂದಲೇ
ಆನಂದ ಹೆಣ್ಣಿಂದಲೇ
ಅಪಾಯ ಹೆಣ್ಣಿಂದಲೇ ಕೇಳೆ
ವೀರಾಧಿವೀರರೆಲ್ಲ ಮಣ್ಣಾಗಿ ಹೋದದ್ದೆಲ್ಲ
ನಿನ್ನಂತ ಹೆಣ್ಣಿಂದಲೇ ಕೇಳೆ
ಜಡೆ ಹಾಕು ಸುಂದರವಾಗಿ ಓ ಕನಕಾಂಗಿ
ಬದಲಾಗು ನೀನು ಹಳ್ಳಿಯ ಮುದ್ದಿನ ಹೆಣ್ಣಾಗಿ

ಮೂರು ಕಾಸಿನ ಕುದುರೆ.....

ಮಣ್ಣಲ್ಲಿ ಚಿನ್ನ ಅಕ್ಕಿಲಿ ಅನ್ನ
ತಂದಿದ್ದು ನಾವು ತಿಂದಿದ್ದು ನೀವು
ತಿಳಿಯಮ್ಮೋ
ಈ ನಮ್ಮ ಬೆವರು ಶ್ರೀಮಂತರುಸಿರು
ಅಳೆಯೋಕೆ ನಾವು ಆಳೋಕೆ ನೀವ ಬೇಡಮ್ಮೋ
ಆಳೋನು ಆಳಾಗುವ ಅಳೆಯೋನು ಅರಸಾಗುವ
ಬಡವರ ಕಾಲವು ಬಂತು ಕೇಳೆ
ದುಡಿಯೋನು ಮುನಿದೆದ್ದರೆ ಉಳುವವನು ಸಿಡಿದೆದ್ದರೆ
ಉಳಿಗಾಲ ಇಲ್ಲವೇ ನಿಮಗೆ ನಾಳೆ
ದಯ ತೋರು ಮಾನವಳಾಗಿ ಬಡವರಿಗಾಗಿ
ಬದಲಾಗು ನೀನು ಕನ್ನಡ ಮಣ್ಣಿನ ಹೆಣ್ಣಾಗಿ

ಮೂರು ಕಾಸಿನ ಕುದುರೆ......

*******************************************************************************

ಆಕಾರದಲ್ಲಿ ಗುಲಾಬಿ ರಂಗಿದೆ

ಸಾಹಿತ್ಯ: ವಿ. ಮನೋಹರ್ 
ಗಾಯನ: ಲತಾ ಹಂಸಲೇಖ 


ಆಹ್... ಆಹ್... ಆಹ್... ಹೆ...ಎ..
ಆಕಾರದಲ್ಲಿ ಗುಲಾಬಿ ರಂಗಿದೆ                 
ಈ ಕಣ್ಣಿನಲ್ಲಿ ಶರಾಬು ಗುಂಗಿದೆ
ತಾಳವಿಲ್ಲದೆ ನಾ ಹೇಗೆ ಹಾಡಲಿ              
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ
ಬೆಂಗಳೂರಲಿ ಯಾರನ್ನೆ ಕೇಳಲಿ             
ನಾನು ಅಲ್ಲಿಗೆ ಗುಲೇಬುಕಾವಲಿ
ಸುತ್ತಾ ಮುತ್ತಾ ಗೊತ್ತ ನಿನ್ನ ಊರು ತಂಗಳೂರು
ಆಕಾರದಲ್ಲಿ ಗುಲಾಬಿ ರಂಗಿದೆ                
ಈ ಕಣ್ಣಿನಲ್ಲಿ ಶರಾಬು ಗುಂಗಿದೆ
ಆಹ್...ಆಹ್...ಆಹ್...ಲ ಲ ಲಾ ಲ ಲ ಲಾ 
ಓ ಓ ಓ ಲ ಲ ಲಾ ಲ ಲ ಲಾ ಲಲಲಾ ಲ ಲ ಲ 

ಯಾವ ಹುತ್ತದಲ್ಲಿ ಯಾವ ಹಾವಿದೆ                   
ಯಾರ ಚಿತ್ತದಲ್ಲಿ ಸುಡುವ ಕಾವಿದೆ
ನಿನ್ನ ನೊಟ ಬಾಣದಷ್ಟು ಜೋರಿದೆ                   
ಕಣ್ಣ ಪಾಪೆಯಲ್ಲಿ ತಿನ್ನೊ ಹಾಗಿದೆ
ಇಂಗು ತಿಂದ ಮಂಗನಂತೆ ನೋಡಬೇಡವೊ,    
ಇದೇನು ದೊಂಬರಾಟವೊ
ಅಂಗ ಅಂಗ ನುಂಗುವಂತ ಸರ್ಪ ಸಂಗವೊ       
ಇದೇನು ಪುಂಗಿಯಾಟವೊ
ತಾಳವಿಲ್ಲದೆ ನಾ ಹೇಗೆ ಹಾಡಲಿ                      
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ
ಬೆಂಗಳೂರಲಿ ಯಾರನ್ನೆ ಕೆಳಲಿ                       
ನಾನು ಅಲ್ಲಿಗೆ ಗುಲೇಬುಕಾವಲಿ
ಸುತ್ತಾ ಮುತ್ತಾ ಗೊತ್ತ ನಿನ್ನ ಊರು ತಂಗಳೂರು 

ಆಕಾರದಲ್ಲಿ ಗುಲಾಬಿ ರಂಗಿದೆ                        
ಈ ಕಣ್ಣಿನಲ್ಲಿ ಶರಾಬು ಗುಂಗಿದೆ
ಆಹ್...ಆಹ್... 
ಮನಸ್ಸಿನಲ್ಲಿ ತಿನ್ನಲೇಕೆ ಮಂಡಿಗೆ                    
ಭಯವೆ ಇಲ್ಲ ಮುಂದೆ ನುಗ್ಗೊ ಮಂದಿಗೆ
ಪ್ರೀತಿ ಮಾಡೊ ಶೂರನಂತ ಗಂಡಿಗೆ               
ಕಾಯುತಿಹುವುದು ನೋಡು ನನ್ನ ಗುಂಡಿಗೆ
ಹೆಂಡದಂತ ಹೆಣ್ಣು ಕೊಂಡು ಮತ್ತು ಏರಿತು       
ಇದಾರ ಹೊತ್ತು ಮೀರಿತೋ
ಪುಂಡರನ್ನ ಕಂಡು ಮನಸು ಬುದ್ದಿ ಹೇಳಿತು       
ಹುಷಾರು ಎಂದು ಕೂಗಿತೋ
ತಾಳವಿಲ್ಲದೆ ನಾ ಹೇಗೆ ಹಾಡಲಿ                     
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ
ಬೆಂಗಳೂರಲಿ ಯಾರನ್ನೆ ಕೆಳಲಿ                     
ನಾನು ಅಲ್ಲಿಗೆ ಗುಲೇಬುಕಾವಲಿ
ಸುತ್ತಾ ಮುತ್ತಾ ಗೊತ್ತ ನಿನ್ನ ಊರು ತಂಗಳೂರು 

ಆಕಾರದಲ್ಲಿ ಗುಲಾಬಿ ರಂಗಿದೆ                      
ಈ ಕಣ್ಣಿನಲ್ಲಿ ಶರಾಬು ಗುಂಗಿದೆ
ಆಹ್..ಆಹ್...ಆಹ್...

*********************************************************************************

ಡುಂ ಡೂಮ್ ಡೋಲ

ಸಾಹಿತ್ಯ: ಆರ್.ಎನ್. ಜಯಗೋಪಾಲ್ 
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಬಿ.ಆರ್. ಛಾಯಾ 


ಡುಂ ಡೂಮ್ ಡೋಲ್ ರಾಕ್ ಅಂಡ್ ರೋಲ್ 
ಡುಂ ಡೂಮ್ ಡೋಲ್ ರಾಕ್ ಅಂಡ್ ರೋಲ್
ಡೂಮ್ ಡುಮ್ ಡುಮ್ ಡೋಲ್ 
ಡುಮ್ ಡುಮ್ ಡುಮ್ ಡೋಲ್ 

ಡೂಮ್ ಡುಮ್ ಡುಮ್ ಡೋಲ್ 
ಡುಮ್ ಡುಮ್ ಡುಮ್ ಡೋಲ್ 

ತ್ರಿಪುರ ಸುಂದರಿ ಬಾರೆನೀ ಹಸೆ ಮಣೆಗೆ
ಮದುವೆ ಮುಗಿದರೇ ರಾತ್ರಿಯೇ ಮೆರವಣಿಗೆ
ನಡೆ ನಡೆ ಮೆಲ್ಲಗೆ ದುಂಡು ದುಂಡು ಮಲ್ಲಿಗೆ
ಅಂಜದ ಗಂಡಿಗೆ ಜೋಡಿಯಾಗೆ ಮೆಲ್ಲಗೆ .. ।। ೨ ಸಲ।।

ಅಕ್ಕಿ ಕಾಳು ತರಸಿ ಕೈಗೆ ವಿಳೈದೆಲೇ ಕೊಡಿಸಿ
ಮೂರೂ ನಾಮ ಬರೆಸಿ ಬೇಗ ತೆಂಗಿನಕಾಯಿ ತರಿಸಿ
ಕಳಶ ಪೂಜೆ ಮಾಡದೇನೆ ಕಾರ್ಯ ನಡೆಯದು ಹೂಂ.. ಹೂಂ..
ಆ ದಕ್ಷಿಣೆ ಕಾಸು ಬೀಳದೇನೆ ಮಂತ್ರ ಮುಗಿಯದು
ಹೋಮ ಕುಂಡವಿಲ್ಲದೇ.. ಮೇಲೆ ಸುದ್ದಿ ಹೋಗದೇ ..
ಅಯ್ಯೋ ನಾನು ಏನು ಮಾಡಲಿ ಹೇಗೆ ಬಾಯಿ ಬಿಡಲೀ
ಏನು ಮಂತ್ರ ಹೇಳಲಿ ಹೇಗೆ ಮದುವೆ ಮಾಡಲಿ 

ಡುಂ ಡೂಮ್ ಡೋಲ್ ರಾಕ್ ಅಂಡ್ ರೋಲ್
ಡುಂ ಡೂಮ್ ಡೋಲ್ ರಾಕ್ ಅಂಡ್ ರೋಲ್ 

ಮದುವೆಯ ದಿನವೇ ನೀ ಅಳುವುದು ಸರಿಯೇ.. ಚೀ..ಚೀ 
ಭಯ ಬಿಡು ಮಗುವೇ ಇದು ಹೊಸ ತರ ಮದುವೆ
ಮಂತ್ರ ತಂತ್ರದಿಂದ ಎಂದು ಲಗ್ನವಾಗದು ಹೂಂ.. ಹೂಂ...
ಬ್ರಹ್ಮ ಬರೆದ ಮದುವೆಗೆಂದು ವಿಘ್ನ ಬಾರದು
ಸೀತೆಯನ್ನು ತಂದರು ಕೂಡಿ ಹಾಕಿಯಿಟ್ಟರೂ
ಲಂಕೇ.. ಬೆಂಕಿಯಾಗಲಿಲ್ಲವೇ ಬೂದಿಯಾಗಲಿಲ್ಲವೇ ಮಂಕೆ..
ಇನ್ನೂ ತಿಳಿಯಲಿಲ್ಲವೇ ಮದುವೆ ಆಸೆ ಇನ್ನೂವೇ... 

ಡುಂ ಡೂಮ್ ಡೋಲ್ ರಾಕ್ ಅಂಡ್ ರೋಲ್
ಡುಂ ಡೂಮ್ ಡೋಲ್ ರಾಕ್ ಅಂಡ್ ರೋಲ್
ಡೂಮ್ ಡುಮ್ ಡುಮ್ ಡೋಲ್ ಡುಮ್ ಡುಮ್ ಡುಮ್ ಡೋಲ್
ಡೂಮ್ ಡುಮ್ ಡುಮ್ ಡೋಲ್ ಡುಮ್ ಡುಮ್ ಡುಮ್ ಡೋಲ್ 

ತ್ರಿಪುರ ಸುಂದರಿ ಬಾರೆನೀ ಹಸೆ ಮಣೆಗೆ
ಮದುವೆ ಮುಗಿದರೇ ರಾತ್ರಿಯೇ ಮೆರವಣಿಗೆ
ಬಾರೇ ಬಾರೇ ಮೆಲ್ಲಗೇ ದುಂಡು ದುಂಡು ಮಲ್ಲಿಗೆ
ಅಂಜದ ಗಂಡಿಗೆ ಜೋಡಿಯಾಗೆ ಮೆಲ್ಲಗೆ.....

*********************************************************************************

ಮೊದಲ ಬಾರಿ

ಸಾಹಿತ್ಯ: ಆರ್.ಎನ್. ಜಯಗೋಪಾಲ್ 
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ 


ಮೊದಲ ಬಾರಿ ಹಿತ್ತಲಿನಲ್ಲಿ 
ಮಾವ ಬಂದನೋ...  ತಂದ  ಒಂದನು
ಮಾವಿನಕಾಯಿ ಹುಳಿಯ ತಿನ್ನೋ 
ಆಸೆ ತಂದಾನೋ ... ಅಹ್.. ಕಳ್ಳ ಇವನು
ಹತ್ತಿಗೇ ಬೆಂಕೀ ಸೋಕಲೆ ಇಲ್ಲ ಹತ್ತಿಕೊಂಡೀತೇ
ಸುಗ್ಗಿಯ ಕಾಲ ಬರಲೇ ಇಲ್ಲ ಭತ್ತ ಬಂದಿತೇ
ಆ ನಿನ್ನ ಕಣ್ಣಿನ ಬೆಂಕಿ ಸಾಲದೇ..  
ತಾಯಿ ಆಗಲು ಅಷ್ಟು ಸಾಲದೇ... 

ಮೊದಲ ಬಾರಿ ಹಿತ್ತಲಿನಲ್ಲಿ 
ನಿನ್ನ ನೋಡಿದೆ ಅಯ್ಯೋ.. ಬುದ್ದಿ ಇಲ್ಲದೇ
ಹಾದೀಲಿ ಹೋಗೋ ಮಾರಮ್ಮನ್ನು 
ಕೂಗಿ ಕರೆದೆ ಅಯ್ಯೋ ಕೆಲಸವಿಲ್ಲದೇ ..
ಓ.. ಓ.. ಓಹೊ ಓಓಓಓಓಓ
ಚೆಲುವಯ್ಯೋ ಚೆಲುವೋ
ತಾನಿ ತಂದಾನ  ಹಾಡಲು ಕರೆದನು
ಚಿನ್ನದ ಕೋಲು ಕೈಗೆ ನೀಡಿ ತಾಳವ ಹಾಕಿದನು
ಏನಯ್ಯೋ ತಾನಿ ತಂದಾನ 
ಚೆಲುವೆಯ ಮಾತು ನಿಜಾನಾ
ಬಾರಾಯ್ಯೋ ತಾನಿ ತಂದಾನ 
ಕತ್ತಿಗೆ ಕಟ್ಟು ತಾಳಿನಾ ..ಆಆ 

ಅರೆ ಗಾಣಕ್ಕೆ ಎಳ್ಳು ಹಾಕಲೇ ಇಲ್ಲ 
ಎಣ್ಣೆಯು ಆಗಲೇ ಬಂದೊಯ್ತೆ
ಮೊಸರು ಇನ್ನು ಕಡದೇ ಇಲ್ಲಾ 
ಆಗಲೇ ಬೆಣ್ಣೆಯೂ ಬಂದಹೋಯ್ತತೇ
ಹಳ್ಳಿಗೆ ಬಂದು ದಿಲ್ಲಿಯ ಬುದ್ದಿ ತೋರಸಿ ಬಿಟ್ಟ
ಹುಲ್ಲಿನ ಮೇಲೆ ಹಲ್ಲನ್ನು ಬಿಟ್ಟು ಕೈಯನ್ನು ಕೊಟ್ಟ
ಸುಳ್ಳು ನನ್ನಾಣೆ ಮುಟ್ಟಿಲ್ಲ ಕಣೇ
ಅಯ್ಯೋ ನನ್ಮೇಲ್ ತಪ್ಪು ಹಾಕಬೇಡ ಜಾಣೆ

ಮೊದಲ ಬಾರಿ ಹಿತ್ತಲಿನಲ್ಲಿ ಮಾವ 
ಬಂದನೋ...  ತಂದ  ಒಂದನು
ಮಾವಿನಕಾಯಿ ಹುಳಿಯ ತಿನ್ನೋ ಆಸೆ 
ತಂದಾನೋ ... ಅಹ್.. ಕಳ್ಳ ಇವನು
ಒಹ್ ಓ ಒಹ್ ಈ ಒಹ್ ಓ ಒಹ್ ಈ

ತಂದಾನ ತಂದಾನ ತಾನಿ ತಂದಾನ ತಂದಾನ  
ತಂದಾನ ತಂದಾನ ತಾನಿ ತಂದಾನ ತಂದಾನ 

ಅಂದ ಚೆಂದ ತೋರಿಸಿದರೇ ಸೋತುಬಿಡುವೇನೇ
ಹಗಲು ಕಂಡ ಬಾವಿಯೊಳಗೆ ರಾತ್ರಿ ಬೀಳುವೆನೇ
ಏನಯ್ಯೋ ತಾನಿ ತಂದಾನ ಯಾಕಯ್ಯೋ ಇನ್ನೂ ನಿಧಾನ
ಸಾಕಯ್ಯೋ ತಾನಿ ತಂದಾನ ತೋರಿಸು ನಿನ್ನ ವರಸೇನಾ..ಆಅ
ಮೊದಲ ರಾತ್ರಿ ಮುನಿಯಬೇಡ ಸಮಯವಾಯ್ತು ಬಾರಯ್ಯ
ಪಾತಾಳದಲ್ಲಿ ಅಡಗಿಕೊಂಡರು ಬಿಡೇನು ನಿನ್ನ ಕೇಳಯ್ಯಾ
ಹತ್ತಿಗೇ ಬೆಂಕೀ ಸೋಕಲೆ ಇಲ್ಲ ಹತ್ತಿಕೊಂಡೀತೇ
ಸುಗ್ಗಿಯ ಕಾಲ ಬರಲೇ ಇಲ್ಲ ಭತ್ತ ಬಂದಿತೇ
ಆ ನಿನ್ನ ಕಣ್ಣಿನ ಬೆಂಕಿ ಸಾಲದೇ..  
ತಾಯಿ ಆಗಲು ಅಷ್ಟು ಸಾಲದೇ...

ಮೊದಲ ಬಾರಿ ಹಿತ್ತಲಿನಲ್ಲಿ 
ನಿನ್ನ ನೋಡಿದೆ ಅಯ್ಯೋ.. ಬುದ್ದಿ ಇಲ್ಲದೇ
ಹಾದೀಲಿ ಹೋಗೋ ಮಾರಮ್ಮನ್ನು 
ಕೂಗಿ ಕರೆದೆ ಅಯ್ಯೋ ಕೆಲಸವಿಲ್ಲದೇ ..

*********************************************************************************

No comments:

Post a Comment