Saturday, September 8, 2018

ಮೈ ಆಟೋಗ್ರಾಫ್ (2006)



ಅರಳುವ ಹೂವುಗಳೇ ಆಲಿಸಿರಿ

ಚಲನಚಿತ್ರ : ಮೈ ಆಟೋಗ್ರಾಫ್ (2006)
ಸಾಹಿತ್ಯ: ಕೆ. ಕಲ್ಯಾಣ್  
ಸಂಗೀತ: ಭಾರದ್ವಾಜ್ 
ಗಾಯನ: ಕೆ. ಎಸ್. ಚಿತ್ರಾ 
ನಿರ್ದೇಶನ: ಕಿಚ್ಚ ಸುದೀಪ 
ನಟನೆ: ಸುದೀಪ್, ಮೀನಾ, ಶ್ರೀದೇವಿಕಾ, ದೀಪು 



ಅರಳುವ ಹೂವುಗಳೇ ಆಲಿಸಿರಿ,
ಬಾಳೊಂದು ಹೋರಾಟ ಮರೆಯದಿರಿ
ಬೆಳಗಿನ ಕಿರಣಗಳೇ ಬಣ್ಣಿಸಿರಿ,
ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ,
ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
ಮನವೇ ಓ ಮನವೇ ನೀ ಅಳುಕದಿರು,
ಮಳೆಯೋ ಬರಸಿಡಿಲೋ ನೀ ನಡೆಯುತಿರು.

ಮನಸು ಎಂಬ ಕನ್ನಡಿಯು ಒಡೆದು ಹೋಗಬಾರದು,
ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು
ಯಾರಿಗಿಲ್ಲಿ ನೋವಿಲ್ಲಾ? ಯಾರಿಗಿಲ್ಲಿ ಸಾವಿಲ್ಲಾ?,
ಕಾಲಕಳೆದ ಹಾಗೆ ಎಲ್ಲಾ ಮಾಯವಾಗುವಂತದು
ಉಳಿಪೆಟ್ಟು ಬೀಳುವಕಲ್ಲೇ ಶಿಲೆಯಾಗಿ ನಿಲ್ಲುವುದು,
ದಿನನೋವ ನುಂಗುವ ಜೀವವೇ ನೆಲೆಯಾಗಿ ನಿಲ್ಲುವುದು
ಯಾರಿಗಿಲ್ಲ ಅಲೆದಾಟ ? ಯಾರಿಗಿಲ್ಲ ಪರದಾಟ ?
ನಮ್ಮ ಪ್ರತಿಕನಸು ಇಲ್ಲಿ ನನಸಾಗೋ
ಒಳ್ಳೇ ಕಾಲವು ಮುಂದೆ ಇದೆ
ಮನವೇ ಓ ಮನವೇ ನೀ ಕುಗ್ಗದಿರು
ಬೆಟ್ಟ ಬಯಲಿರಲಿ ನೀ ನುಗ್ಗುತಿರು.

ಅರಳುವ ಹುವೂಗಳೇ ಆಲಿಸಿರಿ,
ಬಾಳೊಂದು ಹೋರಾಟ ಮರೆಯದಿರಿ

ನೋವು ನಲಿವು ಅನ್ನೋದು ಬಾಳ ರೈಲು ಕಂಬಿಗಳು,
ನಡುವೆ ನಮ್ಮದೀ ಪಯಣ, ನಗುತ ಸಾಗು ಹಗಲಿರುಳು
ಏನೇ ಬರಲಿ ಬಾಳಿನಲಿ ಧ್ಯೇಯವೊಂದು ಜೊತೆಯಿರಲಿ,
ಏಳುಬೀಳು ಎಲ್ಲದಾಟಿ ಏಳುತೀವಿ ನಾವುಗಳು
ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ,
ನಾವೆಲ್ಲರು ಎಂದು ಒಂದೆ ಆ ದೇವರ ಸೃಷ್ಟಿಯಲಿ
ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದು ದಾರಿಯಿದೆ
ನಿನ್ನ ಆತ್ಮಬಲ ನಿನ್ನ ಜೊತೆಯಿರಲು ಆಕಾಶವೆ ಅಂಗೈಲಿ
ಮನವೇ ಓ ಮನವೇ ನೀ ಬದಲಾಗು, ಏನೇ ಸಾಧನೆಗೂ ನೀ ಮೊದಲಾಗು.

ಅರಳುವ ಹುವೂಗಳೇ ಆಲಿಸಿರಿ,
ಬಾಳೊಂದು ಹೋರಾಟ ಮರೆಯದಿರಿ
ಬೆಳಗಿನ ಕಿರಣಗಳೇ ಬಣ್ಣಿಸಿರಿ,
ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ,
ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
ಮನವೇ ಓ ಮನವೇ ನೀ ಅಳುಕದಿರು,
ಮಳೆಯೋ ಬರಸಿಡಿಲೋ ನೀ ನಡೆಯುತಿರು. 

*******************************************************************************

ಕಿಲ ಕಿಲ ನಗೆಯ

ಸಾಹಿತ್ಯ : ಕೆ.ಕಲ್ಯಾಣ್
ಗಾಯನ : ಚೇತನ್ ಸೋಸ್ಕ

ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಇ ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ
ಒಂಟಿ ಜೀವಕೆ ಜಂಟಿಯಾದಳು ಪ್ರೀತಿ ಗೆಳತಿ
ನನ್ನ ಕನಸುಗಳಿಗೆ ಕಚಕುಳಿಯಿಟ್ಟು ಕುಣಿಯೋರೀತಿ
ಗೆಳತಿ ನಿನ್ನಾಜೊತೆಯಲಿ ಇ ಹೃದಯ ಹರಳೋಯ್ತು
ನಿನ್ನ ಸ್ನೇಹವೆ ನನ್ನ ಬದುಕಿಗೆ, ಭಾಗ್ಯದ ಬೆಳೆಕಾಯ್ತು

ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಇ ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ

ಹಸಿವು ಎಂದ ಕೂಡಲೇ ಬಿದ್ದೋನ್ಗೆ ಬೆಳೆಯುಯೆಂದಳು
ಧಣಿವು ಎಂದ ಕೂಡಲೇ ಬೆವರಲ್ಲೇ ದೇವರುಯೆಂದಳೂ
ನಿನ್ನಾ ನೆರಳಾ ಸೊಕಿಯೇ ಹೊಸಹೊಸ ನಂಬಿಕೆ ಹುಟ್ಟಿತು
ಹೆಜ್ಜೆಯ ಹಿಂಬಾಲಿಸಿದರೆ ಹೊಸದೊಂದು ಲೊಕವೇ ಕಂಡಿತು
ನಿನ್ನ ಭರಸವೆ ಮೇಲೆ ಇ ನನ್ನ ಬಾಳಿನ ಪಯಣ
ನನ್ನ ನಾಳೆಯ ಹಾಡಿಗೆಯೆಂದು ನೀತಾನೆ ಪಲ್ಲವಿ ಚರಣ
ನಾ ಕಾಡಿನ ಕಲ್ಲಿನ ಹಾಗೆ ನೀ ಕೆತ್ತಿದ ಶಿಲ್ಪಿಯ ಹಾಗೆ
ಮಲಗಿದ್ದ ಆತ್ಮ ಸ್ತೈರ್ಯ ಬಡಿದೆಬ್ಬಿಸಿ ತಂದೆ ಹೊರಗೆ

ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಇ ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ
ಒಂಟಿ ಜೀವಕೆ ಜಂಟಿಯಾದಳು ಪ್ರೀತಿ ಗೆಳತಿ
ನನ್ನ ಕನಸುಗಳಿಗೆ ಕಚಕುಳಿಯಿಟ್ಟು ಕುಣಿಯೋರೀತಿ

ನಿನ್ನಾ ನಗುವಿನ ಮಳೆಯಲಿ ಮನಸು ಮೆಲ್ಲ ನೆನೆದಿದೆ
ಮಂಜಿನ ಶೀತಲ ನೋಟಕೆ ಕಣ್ಣರೆಪ್ಪೆಯು ಕವನ ಬರೆದಿದೆ
ಕಾಲವೊಂದು ಕನ್ನಡಿ ಸಾಧನೆಯೇ ತೂಗುವ ತಕ್ಕಡಿ
ಮುಂದೇ ಮುಂದೇ ನಡಿನಡಿ... ಬರಿಬೇಕು ಭವಿಷ್ಯದ ಮುನ್ನುಡಿ
ಈ ಸ್ನೇಹದ ಅಮೃತ ಕುಡಿದು ಸಾಧಿಸುವೆ ತುಡಿದು ತುಡಿದು
ಗುರಿಯಿಟ್ಟ ಕಡೆಯೆ ನಡೆದು ಗೆಲ್ಲುವಾ ಚಲವು ನನ್ನದು
ಹೇಗೋ ಇದ್ದವ ಹೇಗೋ ಬದಲಾಗುವುದೆ ಇಲ್ಲಿಯ ನಿಯಮ
ಆ ಇಂದ್ರ ಚಂದ್ರರೇ ಬರಲಿ ಬದಲಾಗದು ಸ್ನೇಹದ ಧರ್ಮ

ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಇ ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ
ಒಂಟಿ ಜೀವಕೆ ಜಂಟಿಯಾದಳು ಪ್ರೀತಿ ಗೆಳತಿ
ನನ್ನ ಕನಸುಗಳಿಗೆ ಕಚಕುಳಿಯಿಟ್ಟು ಕುಣಿಯೋರೀತಿ

ಗೆಳತಿ ನಿನ್ನಜೊತೆಯಲಿ ಇ ಹೃದಯ ಹರಳೋಯ್ತು
ನಿನ್ನ ಸ್ನೇಹವೆ ನನ್ನ ಬದುಕಿಗೆ ಭಾಗ್ಯದ ಬೆಳೆಕಾಯ್ತು
ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಇ ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ 

********************************************************************************

ನನ್ನವಳು ನನ್ನವಳು

ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ: ರಾಜೇಶ್ ಕೃಷ್ಣನ್  


ನನ್ನವಳು ನನ್ನವಳು ನನಗಿಲ್ಲ
ನಂಬಿಕೊಂಡ ಪ್ರೀತಿಯೊಂದು ಜೊತೆ ಇಲ್ಲ
ಆಸೆ ಇಂದ ಕಾಣುತಿದ್ದ ಕನಸುಗಳು
ಅತ್ತು ಅತ್ತು ಕಣ್ಣೀರಾಗಿ ಕರಗಿತಲ್ಲ
ತಾಯಿ ತಂದೆ ಮಾತಿಗೆ ನನ್ನ ಮರೆತು
ಪ್ರೀತಿಯ ಕಾಲ್ಕಸವಾಗಿ ಎಸದು
ದೂರ ತಳ್ಳಿ ಹೊದವಳೆ
ನಿನ್ನ ಹಾಗೆ ನಾನು ಹೇಗಿರಲೆ
ಕೈಯ ಮುಗಿವೆ ನನ್ನ ಮರೆಯದಿರು
ಕಾರಣ ನೀನೆ ನನ್ನುಸಿರು

ನನ್ನವಳು ನನ್ನವಳು ನನಗಿಲ್ಲ
ನಂಬಿಕೊಂಡ ಪ್ರೀತಿಯೊಂದು ಜೊತೆ ಇಲ್ಲ
ಆಸೆ ಇಂದ ಕಾಣುತಿದ್ದ ಕನಸುಗಳು
ಅತ್ತು ಅತ್ತು ಕಣ್ಣೀರಾಗಿ ಕರಗಿತಲ್ಲ

ಬಾಳು ಎಂಬ ಪುಸ್ತಕದ ಪುಟ ತೆರೆದು
ಮನಸಾರೆ ಪ್ರೀತಿಯನ್ನು ಪದ ಬರೆದೆ
ಗೀಚಿದಂತ ಲೇಖನಿ ಕಣ್ಣು ಕುಕ್ಕಿತು
ಮೇಣದಲ್ಲಿ ಮನೆ ಕಟ್ಟಿ ದೀಪ ಹಚ್ಚಿದೆ
ಆ ಪ್ರೀತಿ ಬೆಳಕಲ್ಲಿ ಕಣ್ಣು ಮುಚ್ಚಿದೆ
ರೆಪ್ಪೆ ತೆರೆಯ ಮುಂಚೆ ಎಲ್ಲ ಸುಟ್ಟು ಹೊಯಿತೆ
ನಿಂತಿರೊ ಕಡೆಯೆ ಬೂಕಂಪ್ಪ
ಇಲ್ಲಿ ಯಾರಿಗೆ ಬೇಕೊ ಅನುಕಂಪ್ಪ
ಸಾವಿರ ಸಿಡಿಲ ನಡುವಲ್ಲು
ಬೆಳದಿಂಗಳ ಹುಡುಕೊದೆಶಾಪ
ಪ್ರೀತಿಗೆ ಎಂದಿಗು ಸೋಲಿಲ್ಲ ಅನ್ನೊ
ಗಾದೆಯು ತಪ್ಪಾಗಿ ಹೊಯ್ತಲ್ಲ
ನಾನೆ ನನಗೆ ಬೇಕಿಲ್ಲ ಕಾರಣ ಪ್ರೀತಿಗೆ ಕಣ್ಣಿಲ್ಲ

ನನ್ನವಳು ನನ್ನವಳು ನನಗಿಲ್ಲ
ನಂಬಿಕೊಂಡ ಪ್ರೀತಿಯೊಂದು ಜೊತೆ ಇಲ್ಲ
ಆಸೆ ಇಂದ ಕಾಣುತಿದ್ದ ಕನಸುಗಳು
ಅತ್ತು ಅತ್ತು ಕಣ್ಣೀರಾಗಿ ಕರಗಿತಲ್ಲ
ತಾಯಿ ತಂದೆ ಮಾತಿಗೆ ನನ್ನ ಮರೆತು
ಪ್ರೀತಿಯ ಕಾಲ್ಕಸವಾಗಿ ಎಸದು
ದೂರ ತಳ್ಳಿ ಹೊದವಳೆ
ನಿನ್ನ ಹಾಗೆ ನಾನು ಹೇಗಿರಲೆ
ಕೈಯ ಮುಗಿವೆ ನನ್ನ ಮರೆಯದಿರು
ಕಾರಣ ನೀನೆ ನನ್ನುಸಿರು


*******************************************************************************

ಸವಿ ಸವಿ ನೆನಪು

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ಹರಿಹರನ್  


ಆ|| ಊ|| ಆ||

ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಸವೆಯದ ನೆನಪು
ಎದೆಯಾಳದಲಿ ಬಚ್ಚಿಕೋಡಿರುವ
ಅಚ್ಚಲಿಯದ ನೂರೊಂದು ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಎದೆಯಾಳದಲಿ ಬಚ್ಚಿಕೋಡಿರುವ
ಅಚ್ಚಲಿಯದ ನೂರೊಂದು ನೆನಪು

ಏನೊ ಒಂದು ತೊರೆದ ಹಾಗೆ ..
ಯಾವುದೊ ಒಂದು ಪಡೆದ ಹಾಗೆ ..
ಅಮ್ಮನು ಮಡಿಲ ಅಪ್ಪಿದಹಾಗೆ ..
ಕಣ್ಣಂಚಲ್ಲೀ .... ಕಣ್ಣೀರ ನೆನಪು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

ಮೊದಮೊದಲ್ ಹಿಡಿದ ಬಣ್ಣಡ ಚಿಟ್ಟೆ
ಮೊದಮೊದಲ್ ಕದ್ದ ಜಾತ್ರೆಯ ವಾಚು
ಮೊದಮೊದಲ್ ಸೇದಿದ ಗಣೇಶ ಬೀಡಿ....
ಮೊದಮೊದಲ್ ಕೂಡಿಟ್ಟ ಹುಂಡಿಯ ಕಾಸು
ಮೊದಮೊದಲ್ ಕಂಡ ಟೂರಿನ್ ಸಿನಿಮಾ
ಮೊದಮೊದಲ್ ಗೆದ್ದ ಕಬಡ್ಡಿ ಆಟ....
ಮೊದಮೊದಲ್ ಇದ್ದ ಹಳ್ಳಿಯ ಗರಿಮನೆ
ಮೊದಮೊದಲ್ ತಿಂದ ಕೈ ತುತ್ತೂಟ
ಮೊದಮೊದಲ್ ಆಡಿದ ಚುಕುಬುಕು ಪಯಣ
ಮೊದಮೊದಲ್ ಅಲಿಸಿದ ಗೆಳೆಯನ ಮರಣ

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

ಮೊದಮೊದಲ್ ಕಲಿತ ಅರೆ ಬರೆ ಈಜು,
ಮೊದಮೊದಲ್ ಕೊಂಡ ಹೀರೊ ಸೈಕಲ್
ಮೊದಮೊದಲ್ ಕಲಿಸಿದ ಕಮಲಾ ಟೀಚರ್...
ಮೊದಮೊದಲ್ ತಿಂದ ಅಪ್ಪನ ಏಟು,
ಮೊದಮೊದಲ್ ಆದ ಮೊಣಕೈ ಗಾಯ
ಮೊದಮೊದಲ್ ತೆಗೆಸಿದ ಕಲರ್ ಕಲರ್ ಪೋಟೊ...
ಮೊದಮೊದಲಾಗಿ.. ಚಿಗುರಿದ ಮೀಸೆ..
ಮೊದಮೊದಲಾಗಿ.. ಮೆಚ್ಚಿದ ಹೃದಯ
ಮೊದಮೊದಲ್ ಬರೆದ ಪ್ರೇಮದ ಪತ್ರ
ಮೊದಮೊದಲಾಗಿ.. ಪಡೆದ ಮುತ್ತು.. ಮುತ್ತು.. ಮುತ್ತು..
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

*********************************************************************************

ಮಳ್ಳಿ ಹುಡುಗಿ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ : ರಾಜೇಶ್ ಕೃಷ್ಣನ್, ರಶ್ಮಿ 


ಮಳ್ಳಿ ಹುಡುಗಿ ಮನಸು ಬಂತಾ  ವನ್ನಲ್ಲೋ ವನ್ನಲ್ಲೋ
ಕರುನಾಡ ಕನಸು ಬಂತಾ         ವನ್ನಲ್ಲೋ ವನ್ನಲ್ಲೋ
ನಮ್ಮ ಮಣ್ಣಿನ ಗುಣವು ಬಂತಾ  ವನ್ನಲ್ಲೋ ವನ್ನಲ್ಲೋ
ನಗೆ ತುಂಬಿದ ನಾಚಿಕೆ ಬಂತಾ   ವನ್ನಲ್ಲೋ ವನ್ನಲ್ಲೋ
ನನ್ನ ಕಂಡ ಕ್ಷಣದಲ್ಲಿ ನಿನ್ನ ಗುಂಡಿಗೆಯ ಗೂಡಿನಲ್ಲಿ
ಪ್ರೀತಿ ಕೋಗಿಲೆಯು ಕೂಗಿತಾ 

ಮನಸಿನೊಳ್ಳಿಲ  ದಾಹಂ ವನ್ನಲ್ಲೋ ಬಂತಾ ಬಂತಾ  
ಮೈಲ್ ನೆರಗಿಲ್ ವಾಸನ ವನ್ನಲ್ಲೋ ಬಂತಾ ಬಂತಾ
ಕನ್ನಡ ಪಡಿಕ್ಯಾನ ಸಾ ವನ್ನಲ್ಲೋ  ಬಂತಾ ಬಂತಾ
ಕರುನಾಡಗತ್ತಿನ್ ನಾಣಂ ವನ್ನಲ್ಲೋ ಬಂತಾ ಬಂತಾ
ಅಡ ಕಾಟ್ ಪೋಲೆ ಏದೋ ಉಂದೆನ್
ನೆಂಜಿನುಳ್ಳಿಲ್ ಅತ್ತಿ ಚೇರ್ರು
ಪ್ರೇಮಾಂ ಪ್ರೇಮಾಂ ಎನ್ ಚೊಲ್ಲಿಯೇ

ಚುಕ್ಕಿ ಇಟ್ಟು ರಂಗೋಲಿನ ಮರೆತು ಬಿಟ್ಟೆಯ ಅದೇ ಅದೇ 
ಪುಸ್ತಕಾನ ತಳಂಕಬಲಕ ಓದಿರ್ತೀಯ ಅದೆಂದೋ 
ನಲ್ಲ ಸಿನಿಮಾ ಹೀರೋಯಿನಂಗೆ ನಗುತ್ತಿರ್ತಿಯ
ದಿನ ನೂರು ಸಲ ನನ್ನ ಹೆಸರೇ ಗುನುಗುತ್ತಿಯ
ಎಂಡ ಬಟ್ಟಕಾಲಿಲ್ ಕೊಲುಸೊನ್ನು ಕಲಾಂಞು ಪೋಯಿ
ಅದ್ ತೇಡಿ ನೊಕಾನ್ ಮನಸಿನ ಮರಞು ಪೋಯಿ
ಪ್ರೀತಿ ಬಂದ ಮೇಲೆ ಇಂಥ ಭಯ ಸಹಜ ಕಣೆ
ನಿನ್ನ ಕಳವಳಕೆಲ್ಲ ಎಂದು ನಾನೇ ಹೊಣೆ
ಎಂಡೇ ಕನವಿಲ್ ನಿಲವಿಲ್ ವೆಲಿಯೆಟ್ಟ ನಡಕುನ್ನು
ಕಲಹಂ ಏದುo ವರೂಮೋ

ಮಳ್ಳಿ ಹುಡುಗಿ ಮನಸು ಬಂತಾ  ವನ್ನಲ್ಲೋ ವನ್ನಲ್ಲೋ
ಕರುನಾಡ ಕನಸು ಬಂತಾ         ವನ್ನಲ್ಲೋ ,,,,,,

ಅಚ್ಚಡಕಲ್ ಇತ್ತರವು ಇದನ್ನಕಲ್ ತೋಣುನ್ನು
ಕವಿಮಯಿ ಸಾಂತಿಯಂ ಪ್ರೀಯಮಿರುನ್ನು
ಕೇರಳದ ಕಥಕ್ಕಳಿ ಆಡುವಂತ ಹಂಬಲ
ಕಲಿಯಕ್ಕೋದರೆ ಚಿತ್ತ ಚಂಚಲ
ಕಣ್ಣಿನಲ್ಲಿ ಕೊಲ್ಲೋ ವಿದ್ಯೆ
ಕಣ್ಣು ಮುಚ್ಚಿ ಕಲಿಸುವೆ
ಗಡಿಯಾರಕ್ಕೆ ಕಾಗದ ಬರೆದು
ಕಾಯೋ ಕಷ್ಟ ತಿಳಿಸುವೆ
ಎoಡೇ ಪಾದವಿರಲ್ ಕತ್ತಾವೀನ್ಡ್ ತುಡಿಕ್ಯುನ್ನಡ
ನೀ ವೆಟ್ಟಿ ಇಟ್ಟ ಅಡಂಗೊನ್ನು ಅರಿಯಿಲ್ಲಡ
ಈ ವಯಸ್ಸಿಗೆ ಎಗ್ಗು ಸಿಗ್ಗು ಇಲ್ಲ ಕಣೆ
ಅದು ತನ್ನಷ್ಟಕೆ ತಾನೇ ಅರಳೋ ಮೊಗ್ಗು ಕಣೆ
ಅಡ ಕೊಚ್ಚಿ ಕೊಚ್ಚಿ ಪೆಟ್ಟಿಯೆಲ್ಲ
ಚೇಯ್ಯಿನುಳ್ಳ ನಿನ್ನೆಕೊಂಡ
ಯಾಕೋ ಯಾಕೋ ಯಾಕೋ

ಮನಸಿನುಲ್ಲಿಲ್ ದಾಹಂ ವನ್ನಿಲ್ಲೇ  ಬಂತು ಬಂತು
ಮೈಲ್ ಚಿರಗಿಲ್ ವಾಸನ ವನ್ನಿಲ್ಲೇ  ಬಂತು ಬಂತು
ಕನ್ನಡo ಪಡಿಕ್ಯಾನ ಆಸಾ ವನ್ನಿಲ್ಲೇ  ಬಂತು ಬಂತು
ಕರುನಾಡಗತ್ತಿನ್ ನಾಣಂ ವನ್ನಿಲ್ಲೇ  ಬಂದಾಯ್ತು ಕಣೋ
ಇಂದಾನ್ ಕಾದಲ್ ಪೋಲೆ ಏದೋ ಒನ್ನು
ನೆಂಜಿನುಳ್ಳಿಲ್ ಅಂಟಿ ಕೊಂಡು
ಪ್ರೀತಿ ಪ್ರೀತಿ ಎನ್ ಚೊಲ್ಲಿಯೇ

********************************************************************************

ಜಗದೋದ್ದಾರಣ

ಸಾಹಿತ್ಯ: ಪುರಂದರ ದಾಸರು  
ಗಾಯನ : ಶ್ರೀವಿದ್ಯಾ ಮತ್ತು ರಶ್ಮಿ 


ಜಗದೋದ್ದಾರಣ... ಜಗದೋದ್ದಾರಣ... 
ಆಡಿಸಿದೋಳೇ ಯೇಶೋಧಾ
ಆಡಿಸಿದೋಳೇ ಯೇಶೋಧಾ 
ಜಗದೋದ್ದಾರಣ.ಆ... ಡಿಸಿದೋಳೇಶೋ... ಧಾ 
ಆಆಆಅ ಆಆಆಅ ಜಗದೋದ್ದಾರಣ..
ಆಆಆಅ ಮಗನಿಂದು ತಿಳಿಯುದ
ಜಗದೋದ್ದಾರಣ..ಮಗನಿಂದು 
ತಿಳಿಯುದ ಮದುಕಳ ಮಾಣಿಕ್ಯ 
ಆ.. ಡಿಸಿದೋಳೇ ಯೊಶೋ.... ಧಾ
ಜಗದೋದ್ದಾರಣ..ಆಆಆಅ 
ನಿನಿಸ ನಿನಿಸ ನಿನಿಸ ನಿಸಗರಿಸ   
ನಿನಿಸ ನಿನಿಸ ನಿನಿಸ ನಿಸಗರಿಸ
ನಿನಿಸ ನಿನಿಸ ನಿನಿಸ ರಿಸಮರಿನಿ  
ನಿನಿಸ ನಿನಿಸ ನಿನಿಸ ರಿಸಮರಿನಿ
ಸರಿನಿಸಮನಿಮಪ ದರಿ  
ಸರಿನಿಸಮನಿಮಪ ದರಿ 
ಮಪನಿಪದರಿ ಮಪನಿಪದರಿ


*********************************************************************************

No comments:

Post a Comment