Wednesday, September 19, 2018

ನಾನು ನನ್ನ ಹೆಂಡ್ತಿ (1985)

ಕರುನಾಡ ತಾಯಿ ಸದಾ ಚಿನ್ಮಯಿ

ಚಲನಚಿತ್ರ: ನಾನು ನನ್ನ ಹೆಂಡ್ತಿ (1985)
ಸಾಹಿತ್ಯ: ಹಂಸಲೇಖ 
ಸಂಗೀತ: ಶಂಕರ್ ಗಣೇಶ್ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ 
ನಿರ್ದೇಶನ: ಡಿ. ರಾಜೇಂದ್ರ ಬಾಬು 
ನಟನೆ: ವಿ. ರವಿಚಂದ್ರನ್, ಊರ್ವಶಿ 


ಲ ಲ ಲ ಲ ಲ ... ಲ ಲ ಲ ಲ ಲ 

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

ವೀರ ಧೀರರಾಳಿದ ನಾಡು ನಿನ್ನದು
ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು
ವರ ಸಾಧು ಸಂತರ ನೆಲೆ ನಿನ್ನದು
ಮಹಾ ಶಿಲ್ಪಕಾರರ ಕಲೆ ನಿನ್ನದು
ಸಂಗೀತ ಸಾಹಿತ್ಯ ಸೆಲೆ ನಿನ್ನದು

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

ಜೀವ ತಂತಿ ಮೀಟುವ ಸ್ನೇಹ ನಮ್ಮದು  
ಎಲ್ಲ ಒಂದೇ ಅನ್ನುವ ಔದಾರ್ಯ ನಮ್ಮದು
ಸೌಂದರ್ಯ ಸೀಮೆಯ ಗುಡಿ ನಮ್ಮದು
ಮಾಧುರ್ಯ ತುಂಬಿದ ನುಡಿ ನಮ್ಮದು
ಕಸ್ತೂರಿ ಕನ್ನಡದ ಸವಿ ನಮ್ಮದು
ರೋಮ ರೋಮಗಳು ನಿಂತವು ತಾಯೆ
ಚೆಲುವ ಕನ್ನಡದೊಳೇನಿದು ಮಾಯೆ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ತನುವು ಮನವು ಧನವು ಎಲ್ಲ ಕನ್ನಡ
ತನುವು ಮನವು ಧನವು ಎಲ್ಲ ಕನ್ನಡ
ಆ .. ಆ ..

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

********************************************************************************

No comments:

Post a Comment