Sunday, September 9, 2018

ಪಂಚರಂಗಿ (2010)


ಲೈಫ಼ು ಇಷ್ಟೇನೆ

ಚಲನಚಿತ್ರ: ಪಂಚರಂಗಿ (2010)
ಸಾಹಿತ್ಯ: ಯೋಗರಾಜ್ ಭಟ್
ಸಂಗೀತ: ಮನೋಮೂರ್ತಿ
ಗಾಯಕರು: ಚೇತನ್ ಸೋಸ್ಕ, ಯೋಗರಾಜ್ ಭಟ್, ಅಕ್ಷತಾ ರಾಮನಾಥ್
ನಿರ್ದೇಶನ: ಯೋಗರಾಜ್ ಭಟ್ 
ನಟನೆ: ದಿಗಂತ್, ನಿಧಿ ಸುಬ್ಬಯ್ಯ 


ಆ ಗಿಜಿಬಿಜಿಗಿಜಿ ಓ..ಓ.ಓ.. ಓ 
ಲೈಫ಼ು ಇಷ್ಟೇನೆ
ಕಿರಿಕಿರಿ ಕಯ ಕಯ ಕೊ ಕೊ ಕೋ.. 
ಲೈಫ಼ು ಹಿಂಗೇನೆ

ಹಾಂ...
ಮುದ್ದು ಕಂದನಾಗಿ ಹುಟ್ಟಿ
ಹೆಸರೂ ಗಿಸರೂ ಇಟ್ಟುಕೊಂಡು 
ಹಂಗೂ ಹಿಂಗೂ ದೊಡ್ಡೊನಾಗು
ಲೈಫ಼ು ಇಷ್ಟೇನೆ
ಎದ್ವಾತದ್ವಾ ಮಾರ್ಕ್ಸು ತೆಗೆದೂ
ಅಪ್ಪಾ ಹೇಳೋ ಕೋರ್ಸು ಮುಗಿಸಿ 
ಸ್ನಾನ ಮಾಡ್ಕೊಂಡ್ ಕೆಲಸ ಹುಡುಕು
ಲೈಫ಼ು ಇಷ್ಟೇನೆ
ಸಂಬಳಾ ಬರುವಾ ಕೆಲಸಾ ಹಿಡಿದೂ
ಸಿಂಬಳಾ ಸುರಿವಾ ಮಕ್ಕಳ ಹಡೆದೂ 
ಕುಂಬಳಕಾಯಿ ಹಲ್ವ ಮಾಡು ಲೈಫ಼ು ಇಷ್ಟೇನೆ
ನಮ್ಮ ಮಂದಿ ಪಾಪದೋರು ಸ್ವಲ್ಪ ಹಂಗೇನೆ 
ಕಣ್ಣು ಮುಚ್ಚಿಕ್ಕೊಂಡು ನೋಡು ಲೈಫ಼ು ಹಿಂಗೇನೆ

ಆ ಗಿಜಿಬಿಜಿಗಿಜಿ ಓ..ಓ.ಓ..
ಕಿರಿಕಿರಿ ಕಯ ಕಯ ಕೊ ಕೊ ಕೋ..
ಕಿರಿಯರ ಸರಿಗಮ ಅ ಆ ಇ ಉ ಊ ಎ ಏ ಏ ಒ ಓ ಓ

ಅಪ್ಪಾ ನಿನಗೆ ಟೆನ್ಷನ್ ಯಾಕೊ
ಬಿಳಿಯಾ ಕೂದಲಿಗೆ ಕಪ್ಪು ಬಳಕೊ 
ಡಯಾಬಿಟೀಸಿಗೆ ವಾಕಿಂಗ್ ಮಾಡ್ಕೊ ಲೈಫ಼ು ಇಷ್ಟೇನೆ
ಅಮ್ಮಾ ನೋಡು ರಾಹುಕಾಲ
ಬಿಗಿಯಾಗ್ ಹಿಡ್ಕೊ ದೇವರ ಕಾಲು 
ದೇವರೆ ಕೈಯ ಮುಗಿಯಲಿ ನಿಂಗೆ ಲೈಫ಼ು ಇಷ್ಟೇನೆ
ಗಂಡ ಹೆಂಡತಿ ಇಬ್ಬರೂ ದುಡುದು
ಸಾಲ ಮಾಡಿ ಮನೆಯಾ ಕಟ್ಟಿ 
ಮಕ್ಳೂ ಎಲ್ಲ್ ಹೋದ್ರಂತ ಹುಡುಕಿ ಲೈಫ಼ು ಇಷ್ಟೇನೆ
ಓಡ ಬೇಡ ಸ್ಟೇಜ಼್ ನಿಂದ ಪಾರ್ಟು ನಿಂದೇನೆ 
ಬಣ್ಣ ಹಚ್ಚಿಕ್ಕೊಂಡ ಮೇಲೆ ಲೈಫ಼ು ಹಿಂಗೇನೆ

ಆ ಗಿಜಿಬಿಜಿ ಬಜಿಬಜಿ ಬೋ ಬೋ
ಕಿರಿಕಿರಿ ಕಯಿ ಕಯಿ ಲಬೊ ಲಬ್ಬೋ
ಹಿರಿಮಗ ಕಿರಿಮಗ ಬೆಬೆ ಬೆಪ್ಪೋ
ಲಬೊ ಲಬ್ಬೋ ಲಬೊ ಲಬ್ಬೋ..

ಹುಡುಗಿ ಜೊತೆಗೆ ಜಗಳ ಆಡು
ಹಗಲೂ ರಾತ್ರಿ ಮೆಸೇಜು ಮಾಡು 
ಕ್ಯಾಂಟೀನಲ್ಲೆ ಓತ್ಲಾ ಹೊಡ್ಕೊ ಲೈಫ಼ು ಇಷ್ಟೇನೆ
ನೋಕಿಯಾದಲ್ಲಿ ಏನೇನುಂಟು
ಏರ್ ಟೆಲ್ ನಲ್ಲಿ ಏನೇನಿಲ್ಲ 
ಸಿಲಬಸ್ ಗಿಂತ ಜಾಸ್ತಿ ತಿಳ್ಕೊ ಲೈಫ಼ು ಇಷ್ಟೇನೆ
ಅಪ್ಪ ಅಮ್ಮ ಬೈತಾರಂತ
ದಿನವೂ ಕಾಲೇಜ್ ಕಡೆಗೆ ಹೋಗು 
ಎಕ್ಸಾಂ ಟೈಂಮಲ್ಲಿ ಮೇಷ್ಟ್ರಿಗೆ ಬೈಯಿ ಲೈಫ಼ು ಇಷ್ಟೇನೆ
ಪ್ರಾಯವೆಂಬ ಸ್ಕೂಲಿನಲ್ಲಿ ಎಲ್ಲ ಸಂಡೇನೆ 
ರೆಕ್ಕೆ ಬಿಚ್ಚಿಕ್ಕೊಂಡು ಹಾರು ಲೈಫ಼ು ಹಿಂಗೇನೆ

ಬದುಕು ನೀನು ವಾಸ್ತು ಪ್ರಕಾರ
ಕುಬೇರ ಮೂಲೆ ಮಾತ್ರ ಕಟ್ಸು 
ಟಾಯ್ಲೆಟ್ ಒಳಗೆ ಹೋಗಿ ಮಲ್ಕೊ ಲೈಫ಼ು ಇಷ್ಟೇನೆ
ಹಿಂದಿನ ಜನ್ಮದ ರಹಸ್ಯ ತಿಳ್ಕೊ
ಮುಂದಿನ ಜನ್ಮದ ಭವಿಷ್ಯ ತಿಳ್ಕೊ 
ಈಗಿನ ಜನ್ಮ ಹಾಳಾಗೊಗ್ಲಿ ಲೈಫ಼ು ಇಷ್ಟೇನೆ
ತುಂಬಾ ಒಳ್ಳೆವ್ರಪ್ಪ ನೀವು ಪೂರ್ತಿ ಕೆಟ್ಟೊವ್ರಪ್ಪ ನಾವು 
ನಮ್ಮ ಹಾಡನು ಕೇಳಲೆ ಬೇಡಿ ಲೈಫ಼ು ಇಷ್ಟೇನೆ
ನಾನು ಕಂಡ ತುಂಬ ದೊಡ್ಡ ಲೂಸು ನೀನೇನೆ 
ಬಾಯಿ ಮುಚ್ಚಿಕ್ಕೊಂಡು ಹಾಡು ಲೈಫ಼ು ಹಿಂಗೇನೆ

ಆ ಗಿಜಿಬಿಜಿ ತರ ತರ ರಂ ಪೋ
ಕಿರಿಯರ ಕಲರವ ಅಯ್ಯಯ್ಯಪ್ಪೋ
ಹಿರಿಯರ ಬದುಕಿದು ಮುಗಿತಪ್ಪೋ
ತರ ತರ ರಂ ಪೋ
ತರ ತರ ರಂ ಪೋ

ಆ ಗಿಜಿಬಿಜಿಗಿಜಿ ಓ..ಓ.ಓ..
ಕಿರಿಕಿರಿ ಕಯ ಕಯ ಕೊ ಕೊ ಕೋ..
ಕಿರಿಯರ ಸರಿಗಮ ಅ ಆ ಇ ಉ ಊ ಎ ಏ ಏ ಒ ಓ ಓ

*********************************************************************************

ಪಂಚರಂಗಿ ಹಾಡುಗಳು

ಸಾಹಿತ್ಯ: ಯೋಗರಾಜ್ ಭಟ್   
ಗಾಯನ : ಹೇಮಂತ್, ಯೋಗರಾಜ್ ಭಟ್    


ಪಂಚರಂಗಿ ಹಾಡುಗಳು
ಪಂಚರ್ ಅಂಗ್ಡಿ ಟೈರುಗಳು
ಏಳು ಏಂಟು ಸ್ವರಗಳು
ಎಲ್ಲ ಬಿಟ್ಟಿ ಪದಗಳು
ಮನೆ ಮೇಲೆ ವಾಟರ್ ಟ್ಯಾಂಕುಗಳು
ಬೆಣ್ಣೆ ಬಿಸ್ಕತ್ ಚಕ್ಲಿಗಳು
ಅಮ್ಮ ಅಪ್ಪ ಮಕ್ಳುಗಳು
ಇನ್ನು ಹಾಡು ಕೇಳ್ತಾ ಇದ್ರೆ ಥ್ಯಾಂಕ್ಸುಗಳು

ಪಂಚರಂಗಿ ಹೂವುಗಳು
ಒಂಚೂರು ನೀವು ನಾವುಗಳು
ಏನೋ ರಿಲೇಷನ್ ಗಳು
ಎಂಥ ಕನ್ಕೆಷನ್ ಗಳು
ಎಲ್ಲ ಟ್ವೆಂಟಿ ಟ್ವೆಂಟಿ ಮ್ಯಾಚುಗಳು
ಎಲ್ರು ಒಳ್ಳೆ ಕುಸುಗಳು
ನಾವೇ ಮೆಂಟಲ್ ಕೇಸುಗಳು
ನಾವು ನಡೆದಾಡೊ ಸ್ಕಾಚುಗಳು
ಎಸ್ ಎಸ್ ಲ್ ಸಿ ಗಳು ಪಿಯುಸಿಗಳು ಸಿಇಟಿಗಳು
ಇಂಜಿನಿಯರಿಂಗು ಪಂಜಿನಿಯರಿಂಗು ಮೆಡಿಕಲ್ ಗಳು
ಹಲ್ಲು ಕಿವಿ ಮುಗು ಬಾಯಿ ಡಾಕ್ಟ್ರುಗಳು
ಕೈ ಬೀಸಿ ಕರೆದು ಕೆರದಲ್ಲಿ ಹೊಡೆವ ಸಿಲಬಸ್ ಗಳು
ಪಾಸು ಮಾಡಲು ಮನಸೇ ಬಾರದ ಕೊರ್ಸುಗಳು
ಕಷ್ಟದ ಸೀಟುಗಳು ಕುತ್ತಿಗೆ ಡೊನೇಷನ್ ಗಳು
ಸತ್ತರು ಪೇರೆಂಟ್ಸ್ ಗಳು ಇತ್ತರು ಸ್ಟೂಡೆಂಟ್ಸ್ ಗಳು
ಕಿಲಿ ಕಿಲಿ ಕಿಲಿ ನಗುವ ಕಾಲೆಜುಗಳು
ಎಸ್ ಸಾರ್ ನೋ ಸಾರ್ ಅಟೆಂಡೆನ್ಸುಗಳು ಕ್ಲಾಸ್ ರೂಮುಗಳು
ಡೆಸ್ಕಿನ ಮೇಲೆ ಐ ಲವ್ ಯು ಸ್ಮಿತ ಮಾಲಿನಿ ಪ್ರಿಯ ಎಂಬ ಬರಹಗಳು
ಬ್ಲಾಕ್ ಬೋರ್ಡ್ ಮೇಲೆ ಕೆಮಿಸ್ಟ್ರಿ ಆಲ್ ಜಿಬ್ರಾ ವಿರಹಗಳು
ಹೊಸ ಹುಡುಗಿಯರ ಮಿಡಿತಗಳು ಹಳೆ ಹೃದಯಗಳ ಕೆರೆತಗಳು
ಗುರುವರಿಯ ಇವತ್ತಿಗಿಷ್ಟು ಸಾಕು ನಾನು ತಿರುಗಿ ನಾಳೆ ಮಾತಾಡಲೆ

ಪೆನ್ಸಿಲುಗಳು ರಬ್ಬರುಗಳು ರಿಬ್ಬನ್ನುಗಳು ಮುತ್ತು ಜೆಡೆಗಳು
ಬಿಲ್ಡಿಂಗುಗಳು ಹೆಲ್ಮೆಟ್ಟುಗಳು ಮಳೆಗಾಲಗಳು ಒದ್ದೆ ಕೊಡೆಗಳು
ಮ್ಯಾರೆಜ್ ಬ್ಯುರೋಗಳು ಹೊವು ಮುಡಿದ ಚೌಲ್ಟ್ರಿಗಳು
ಹೆರಿಗೆ ವಾರ್ಡುಗಳು ಸಾಂಬ್ರಾಣಿಗಳು

ಪಂಚರಂಗಿ ಹೂವುಗಳು
ಒಂಚೂರು ನೀವು ನಾವುಗಳು ಗಳು ಗಳು ಗಳು
ಕೊನೆ ಪೇಜಲ್ಲಿ ಬರೆದ ಪ್ರಿನ್ಸಿಪಾಲ್ ಕಾರ್ಟುನುಗಳು
ಹಳೆ ಬುಕ್ಕು ಹೊಸ ರಟ್ಟುಗಳು
ಟ್ಯುಷನ್ ಗಳು ಏಕ್ಜಮ್ ಗಳು
ಡಿಬಾರ್ ಗಳು ಡಿಸ್ ಮಿಸ್ ಗಳು
ಪೇಪರ್ ದೋಣಿಯ ಮುಳುಗಡೆಗಳು
ಮಾರ್ಕ್ಸ್ ಕಾರ್ಡುಗಳು
ಅಪ್ಪ ಅಮ್ಮಂದಿರ ಸೈನುಗಳು
ಉಳ್ ಕೊಂಡ ಸಬ್ಜೇಕ್ಟುಗಳು
ಮಾಡ್ ಕೊಂಡ ಎಡವಟ್ಟುಗಳು ಕಾಲೆಜ್ ಡೇಗಳು
ಲವ್ ಸ್ಟಾರ್ಟಿಂಗ್ ಗಳು ಎಂಡಿಂಗ್ ಗಳು
ಇಂಟರ್ ವ್ಯುಗಳು ಕೆಲಸಗಳು ಸಂಬಳಗಳು
ಕಾಲೆಜಲ್ಲೆ ಉಳಿವ ಹಳೆ ಕನಸುಗಳು
ಆಫೀಸಲ್ಲಿ ಕೊಲ್ಲುವ ಹೊಸ ಕೆಲಸಗಳು
ಇಂಥ ಸಂದರ್ಭದಲ್ಲಿ ನಾವು ಓದುತ್ತಿದೇವೆ
ನೀವು ಪಾಠ ಮಾಡುತ್ತಿದ್ದಿರಿ
ಗುರುವರಿಯ ಕ್ಲಾಸು ಬೋರು ನಾನು ತಿರುಗಿ ನಿದ್ದೆ ಮಾಡಲೆ

ಗಂಡ್ ಮಕ್ಳುಗಳು..ಆಹಾ  ಹೆಣ್ ಮಕ್ಳುಗಳು.. ಓ ಓ
ಕರೆಂಟುಗಳು ಕಾಗೆ ಕಾಲ್ ಗಳು.. ಆಗ್ಲಪ್ಪ
ಸಂಬಂಧಗಳು ಗಿಂಬಂಧಗಳು..ಆಮೇಲೆ
ಸಂಸಾರಗಳು ರಾಗಿ ಬಾಲ್ ಗಳು... ಓ ಓ
ಆತ್ಮಶಾಂತಿ ಅಂಗ್ಡಿಗಳು ದೇವರ ಮೋಬೈಲ್ ನಂಬರ್ ಗಳು
ಅಪ್ಳ ಸೊಂಡ್ಗೆ ಹುಟ್ಟು ಸಾವು ಸಾಂಪಲ್ಲುಗಳು
ಎಲ್ಲಾ ಮಹಾ ಬೋರುಗಳು
ಹೊಡೆದ ಟೆನ್ನಿಸ್ ಬಾಲುಗಳು.. ಆಯ್ತು ಬಿಡಪ್ಪ
ಹೊಸ ಹೊಟ್ಟೆ ಬುರಿಗಳು  ಏಳು ತಪ್ಪು ಸರಿಗಳು
ನಗುವುದು ಮರೆತಿದೆ ಹೃದಯಗಳು..ಚೇ ಚೇ
ಒಂದು ಒಳ್ಳೆ ನಗುವಿಗೆ ಮೀನಿಂಗ್ ಫುಲ್ ಬದುಕಿಗೆ
ಎಲೈತಪ್ಪ ಇಲ್ಲಿ ಜಾಗಗಳು

ಪಂಚರಂಗಿ ಹೂವುಗಳು

********************************************************************************

ಲೈಫು ಇಷ್ಟೇನೇ (ಶ್ಲೋಕ)

ಸಾಹಿತ್ಯ: ಯೋಗರಾಜ್ ಭಟ್   
ಗಾಯಕರು: ಚೇತನ್ ಸೋಸ್ಕ


ಹಿಂಗ್ಯಾಕಾಯ್ತೋ ಯಾರಿಗ್ ಗೊತ್ತು   
ನಮ್ಮ ಬೊಂಬ್ಡ ಶುರುವಾಗೋಯ್ತು
ಕಿವೀಗೆ ಕೊಬ್ರಿ ಎಣ್ಣೆ ಬಿಟ್ಕೋ, 
ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್

ಬೆಳಗಾಗೆದ್ದು ಹೇಡ್ ಲೈನ್ಸ್ ಓದು  
ಎರಡೂ ಕಣ್ಣಲ್ ಟೀವಿ ನೋಡು
ಕನ್ನಡ ಪಿಚ್ಟರ್ ನೋಡದೆ ಬೈಯಿ, 
ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್

ಅರ್ಥ ಆದ್ರೂ ಆಫು ಮಾಡ್ರಿ   
ಆಗ್ದೇ ಇದ್ರೂ ಆಫು ಮಾಡ್ರಿ
ನಾವು ಸಿಕ್ರೆ ನಿಲ್ಲಿಸಿ ಕೇಳ್ರಿ, 
ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್

ಡಿಗ್ರಿ ಫೇಲು ನೀನಾಗ್ಬೇಕು  
ಕನ್ನಡ ಮರೆತು ಇಂಗ್ಲೀಷ್ ಕಲ್ತು
ಕಾಲ್ ಸೆಂಟ್ರಲ್ಲಿ ಕೆಲ್ಸ ಹಿಡ್ಕೋ, 
ಲೈಫು ಇಷ್ಟೇನೇ  ಪಂಚರಂಗಿ ಪೊಂವ್ ಪೊಂವ್

ವರ್ಷಕ್ಕೊಂದು ಹುಡ್ಗಿ ಕಳ್ಕೋ  
ಎಣ್ಣೆ ಏಟಲಿ ಗಡ್ಡ ಬಿಟ್ಕೋ
ಯಾರೋ ಸಿಕ್ತಾರ್ ತಾಳಿ ಕಟ್ಕೋ, 
ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್

ಹಳ್ಳಿ ಬಿಟ್ಟು ಬೆಂಗ್ಳೂರ್ ಸೇರು 
ಕೊನೇಲಿ ಎಲ್ಲೂ ಇರದವನಾಗು
ದುಡ್ಡು ಮಾಡಿ ಪೆಂಡಾಲು ಹಾಕೋ, 
ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್

ಕಂಪ್ಯೂಟರ್ಗೆ ಜೋತು ಬೀಳು 
ಬೇಕಿದ್ ಬ್ಯಾಡ್ದಿದ್ ಎಲ್ಲಾ ತಿಳ್ಕೋ
ಜ್ಞಾನ ಪಡ್ಕೊಂಡ್ ಬೇಗನೆ ಸಾಯಿ, 
ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್

ಹಾರ್ಡ್‌ವೇರ್ ಸಾಫ್ಟ್‌ವೇರ್ ಎರಡೂ ಸೇರಿ
ಕಂಪ್ಯೂಟರ್ಗೂ ಮಕ್ಳು ಹುಟ್ಲಿ
ಇಂಡಿಯಾನೆ ಫಾರಿನ್ ಆಗ್ಲಿ, 
ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್

ವಿಷಯ ಏನಪ್ಪ ಅಂತಂದ್ರೆ  
ಬೆಡ್ ರೂಮ್ನಲ್ಲಿ ಹೆಗಣ ಬಂದ್ರೆ
ಇಂಟರ್ನೆಟ್ಟಲಿ ದೊಣ್ಣೆ ಹುಡ್ಕಿ, 
ಲೈಫು ಇಷ್ಟೇನೇ  ಪಂಚರಂಗಿ ಪೊಂವ್ ಪೊಂವ್

ಬ್ಯೂಟಿ ಪಾರ್ಲರ್ ಕನ್ನಡಿ ಮುಂದೆ  
ಅರ್ಧ ಜನ್ಮ ಹೊರ್ಟೋಯ್ತಮ್ಮ
ಇನ್ನೂ ಮೇಕಪ್ ಮುಗಿದೇ ಇಲ್ಲ,
ಲೈಫು ಇಷ್ಟೇನೇ  ಪಂಚರಂಗಿ ಪೊಂವ್ ಪೊಂವ್

ಸೃಷ್ಟಿಮಾಡಿ ದೇವರು ಬಿಟ್ಟ  
ಸೀರೆ ಕೊಡಿಸಿ ಗಂಡ ಕೆಟ್ಟ
ಮ್ಯಾಚಿಂಗ್ ಬ್ಲೌಸಿಗೆ ಟೈಲರ್ ಸತ್ತ, 
ಲೈಫು ಇಷ್ಟೇನೇ  ಪಂಚರಂಗಿ ಪೊಂವ್ ಪೊಂವ್

ಗಂಡ ಬಾರಿಗೆ ಹೋದ್ರೆ ಬೈರಿ  
ಮಕ್ಕಳ ಹೋಮ್ ವರ್ಕ್ ನೀವೇ ಮಾಡ್ರಿ
ನೈಟಿ ಹಾಕ್ಕೊಂಡು ಟೀವಿ ನೋಡ್ರಿ, 
ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್

ತುಂಬಾ ಕನ್ಫ್ಯೂಶನ್ನು ಬೇಡ 
ಅರ್ಧ ಕಪ್ಪು ಕಾಫಿ ಕುಡ್ಕೋ
ಫುಲ್ ಕಾಫಿ ಯಾರಿಗೆ ಬೇಕು, 
ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್

ಹಗಲೊತ್ತಲ್ಲೆ ಟಾರ್ಚು ಹಿಡ್ಕೋ 
ರಾತ್ರಿ ಕಂಡ ಬಾವಿ ಹುಡ್ಕೋ
ಬಾವಿಯ ಮೆಂಬರ್ ಶಿಪ್ಪು ಪಡ್ಕೋ, 
ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್

ನೀರಿನ ಮೇಲೆ ಗುಳ್ಳೆ ಉಂಟು  
ಬಾನಿನ ಬಣ್ಣ ನೂರಾಎಂಟು
ನಮ್ದೇನಿದ್ರು ಬ್ಲಾಕ್ ಆಂಡ್ ವೈಟು, 
ಲೈಫು ಇಷ್ಟೇನೇ, ಲೈಫು ಇಷ್ಟೇನೇ

*********************************************************************************

ನಿನ್ನಯ ನಲುಮೆಯ

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು: ಶ್ರೇಯಾ ಘೋಶಾಲ್


ನಿನ್ನಯ ನಲುಮೆಯ ಲೋಕಕೆ 
ನನ್ನನು ಪರಿಚೆಯಿಸುನನ್ನ ನೋಡಿ 
ನೀನು ತಲ್ಲಿನನಾಗಬೇಕು
ಅದೇ ಚಂದ, ನನ್ನನ್ನೇ ಪ್ರೀತಿಸು 

ಎಲ್ಲಿತ್ತು ನನ್ನಲ್ಲಿ ಭಾವುಕತೆ 
ನೀ ನನಗೆ ಸಿಗುವಾ ವರೆಗೆ  
ನಾನೀಗ ಓದೋದೇ ಬೇರೆ ಕಥೆ
ನೀನಿರಲು ಪುಟದ ಮರೆಗೆ 
ಕನವರಿಕೆಯ ಕರೆಯೋಲೆಗಳ ಪರಿಗಣಿಸು, 
ಬಾ ನನ್ನನ್ನೇ ಪೀಡಿಸು

ನೀ ಭೇಟಿಯಾದಂತ ಯಾವುದೇ ಜಾಗ  
ಜೀವದಾ ಭಾಗ ಎಂದೆಂದಿಗು
ನೀನಿಲ್ಲದೇ ಯಾವ ಸ್ವಪ್ನವೂ ಕೂಡ  
ಬೇಡವೇ ಬೇಡ ಈ ಕಣ್ಣಿಗು
ಏನೆ ಆದರೂನು ನಾ ಎಲ್ಲೆ ಹೋದರೂನು 

ನಿನ್ನ ಜೀವ ನನ್ನಲೆ ಇರುವಂತೆ ನನ್ನನೆ ಹಿಂಬಾಲಿಸು
ನಿನ್ನಯ ನಲುಮೆಯ ಲೋಕಕೆ ನನ್ನನು ಪರಿಚೆಯಿಸು
ನನ್ನ ನೋಡಿ ನೀನು ತಲ್ಲಿನನಾಗಬೇಕು

ಅದೇ ಚಂದ ನನ್ನನ್ನೇ ಪ್ರೀತಿಸು

*********************************************************************************

ಉಡಿಸುವೆ ಬೆಳಕಿನ

ಸಾಹಿತ್ಯ: ಜಯಂತ್ ಕಾಯ್ಕಿಣಿ 

ಗಾಯಕರು: ಸೋನು ನಿಗಮ್ 


ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನೂ ಅದೇ ಚಂದ, 
ಹಾಗೆಂದೇ ಬಾವಿಸು.. ಉಡಿಸುವೆ...

ಈ ನಿನ್ನ ಈ ಕಣ್ಣ ಕಾಗುಣಿತ ನಾನರಿಯೆ ನೀನೆ ಕಲಿಸು,
ಸದ್ದಿಲ್ಲದ ಆ ಅಲೆಯ ಈ ಸೆಳೆತ ಕಾಯಿಸದು ನನ್ನ ಸಹಿಸು,
ಹೃದಯದ ಸಂಗಡ ನೋವು ಸಹ ಉಚಿತವಿದೆ 
ಬಾ ಇನ್ನೂ ಛೇಡಿಸು.. ಉಡಿಸುವೆ...

ನಾನಿಲ್ಲದ ಒಂದು ಕಾಗದ ಬಂದು ಕೂತಿದೆ ಇಂದು ನನ್ನೆದೆಯಲಿ,
ಈ ತೀರದಲ್ಲೊಂದು ತೀರದ ದಾಹ ಏನಿದು ಆಹಾ, ನಿನ್ನೆದುರಲೀ,
ಅಂತರಂಗವೆಂಬ ಕಜಾನೆಗಿಲ್ಲಿ ಇನ್ನು ನಿನ್ನ ಒಂದು ಮುದ್ದಾದ 
ಗುಟ್ಟಂತೆ ನನ್ನನ್ನು ಸಂಬಾಳಿಸು.. ಉಡಿಸುವೆ...


*********************************************************************************

No comments:

Post a Comment